More

    ಗೋಕರ್ಣದಲ್ಲಿ ಸ್ವೀಡನ್ ಪ್ರವಾಸಿ ಸಾವು

    ಗೋಕರ್ಣ: ಸ್ವೀಡನ್ ಪ್ರವಾಸಿ ಗ್ಲಿಸ್ನೆರ್ ಸ್ವೆನ್ ರುನೆ (67) ಮಂಗಳವಾರ ಅನಾರೋಗ್ಯದಿಂದ ನಿಧನರಾದರು.

    ಕಳೆದ ಅನೇಕ ವರ್ಷಗಳಿಂದ ಗೋಕರ್ಣದಲ್ಲಿ ವಾಸಿಸುತ್ತಿದ್ದರು. ಡಿಸೆಂಬರ್​ನಲ್ಲಿ ಗೋಕರ್ಣಕ್ಕೆ ಬಂದಿದ್ದ ಅವರು ಲಾಕ್​ಡೌನ್​ನಿಂದಾಗಿ ತಿರುಗಿ ತಮ್ಮ ದೇಶಕ್ಕೆ ಮರಳಲು ವಿಫಲರಾಗಿದ್ದರು. ಬೆಳಗ್ಗೆ ಉಸಿರಾಟದ ತೊಂದರೆಗೊಳಗಾದ ಅವರನ್ನು ಸ್ಥಳೀಯ ಪರಿಚಿತರೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು.

    ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ನೇತೃತ್ವದಲ್ಲಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕುಮಟಾ ಆಸ್ಪತ್ರೆಯಿಂದ ಶವವನ್ನು ಗೋಕರ್ಣ ಪಿಎಚ್​ಸಿಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸ್ವೀಡನ್ ರಾಯಭಾರ ಕಚೇರಿ ಆದೇಶ ಬರುವವರೆಗೆ ಶವವನ್ನು ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್​ಐ ನವೀನ್ ನಾಯ್ಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts