More

    ಗೃಹಜ್ಯೋತಿಗೆ 3312 ಅರ್ಜಿ ಸಲ್ಲಿಕೆ – ದಾವಣಗೆರೆ ಜಿಲ್ಲಾದ್ಯಂತ ಕಾಡಿದ ಸರ್ವರ್ ಸಮಸ್ಯೆ

    ದಾವಣಗೆರೆ: ಇನ್ನೂರು ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ 3312 ಗೃಹ ವಿದ್ಯುತ್ ಬಳಕೆದಾರರು ಅರ್ಜಿ ಸಲ್ಲಿಸಿದ್ದಾರೆ.
    ಸಂಜೆ 6-18ರ ವೇಳೆಗೆ ರಾಜ್ಯದಲ್ಲಿ ಒಟ್ಟು 40,144 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲೆಯ 149 ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ 3312 ಅರ್ಜಿದಾರರು ಅರ್ಜಿ ಹಾಕಿದ್ದಾರೆ.
    ಮೊದಲ ದಿನವೇ ಜನರಿಗೆ ಸರ್ವರ್ ಕಾಟ ನೀಡಿತು. ಬೆಳಗ್ಗೆ 11 ಗಂಟೆಗೆ ಸೇವಾಸಿಂಧು ವೆಬ್ ತಾಣದ ಮೂಲಕ ಅರ್ಜಿ ಸ್ವೀಕರಿಸಬೇಕಿತ್ತು. ಆದರೆ ಮಧ್ಯಾಹ್ನ 12-30ರ ನಂತರವೇ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ದಾವಣಗೆರೆ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕೃತಿಗೆ ಚಾಲನೆ ದೊರಕಿತು ಎನ್ನಲಾಗಿದೆ.
    ದಾವಣಗೆರೆ ನಗರದ ವಿವಿಧ ಸೇವಾ ಸಿಂಧು ಕೇಂದ್ರಗಳಲ್ಲಿ ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಕಾರಣದಿಂದಾಗಿ ಜನರನ್ನು ವಾಪಾಸ್ ಕಳಿಸಲಾಗುತ್ತಿತ್ತು.ಸಾರ್ವಜನಿಕರು ಠಿಠಿ://ಛಿಜ್ಞಿಜ್ಠಜ.ಚ್ಟ್ಞಠಿ.ಜಟ.ಜ್ಞಿ/ ಈ ವೆಬ್ ತಣದಲ್ಲಿ ಮಧ್ಯಾಹ್ನ 3ರ ನಂತರವೇ ಅರ್ಜಿ ಸಲ್ಲಿಸಬಹುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಇದು ಆರಂಭವಾಗಿದ್ದೇ ಸಂಜೆ 6ಕ್ಕೆ!
    ನಂತರದಲ್ಲೂ ಸರ್ವರ್ ಸಮಸ್ಯೆ ಬಿಡದೇ ಕಾಡಿತು. ಬೆಸ್ಕಾಂ ಸಹಾಯವಾಣಿ 1912 ಸಹ ಹೆಚ್ಚು ಸಕ್ರಿಯವಾಗಿದ್ದು ಕಂಡುಬಂದಿತು. ವೆಬ್‌ತಾಣ ಸಮರ್ಪಕವಾಗಿ ಕಾರ್ಯ ನಿರ್ವಹಿಸದ್ದರಿಂದ ಅರ್ಜಿ ಸಲ್ಲಿಕೆ ಚುರುಕಾಗಿರಲಿಲ್ಲ. ಹಲವೆಡೆ ಅರ್ಜಿದಾರರು ಪರದಾಡಬೇಕಾಯಿತು.
    ಅರ್ಜಿ ಸಲ್ಲಿಕೆಗೆ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್‌ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ ನಮೂದಿಸಬೇಕಿದೆ. ಆದರೆ ಮನೆ ಮಾಲೀಕತ್ವದ ದಾಖಲೆ ಇಲ್ಲವೇ ಬಡಿಗೆ ಕರಾರು ಪತ್ರದ ದಾಖಲೆಗಳನ್ನು ಪಡೆಯದಿರುವ ಬಗ್ಗೆಯೂ ಗೊಂದಲ ಕಾಡಿತು. ಕೆಲವರ ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್‌ನಲ್ಲಿ ಹೆಸರು ತಾಳೆಯಾಗದವರು ಯೋಜನೆ ಲಾಭ ಪಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದರು.
    ಕೆಲವರು ಮನೆ ಖರೀದಿಸಿದ ಬಳಿಕವೂ ಹಳೆಯ ಮಾಲೀಕರ ಹೆಸರಿನಲ್ಲೇ ಬಿಲ್ ಕಟ್ಟುತ್ತಿದ್ದಾರೆ. ಇನ್ನು ಕೆಲವರ ಖಾತೆಗಳು ತಂದೆ ಇಲ್ಲವೇ ತಾತನ ಹೆಸರಿನಲ್ಲಿವೆ. ಅವರು ಮೃತರಾದ ನಂತರವೂ ವಿದ್ಯುತ್ ಖಾತೆ ವರ್ಗಾಯಿಸಿಕೊಳ್ಳದವರಿದ್ದಾರೆ. ಒಂದು ನಿವೇಶನವನ್ನು ಹಲವು ಅಳತೆಯಲ್ಲಿ ವಿಭಜಿಸಿ ಮನೆ ಕಟ್ಟಿಕೊಂಡಿದ್ದಾರೆ. ಈ ಎಲ್ಲದರ ಬಗ್ಗೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts