More

    ಗುಳೆ ಹೋಗದಂತೆ ಜನರಿಗೆ ಸಿಇಒ ಮನವಿ

    ಚಿತ್ರದುರ್ಗ: ನರೇಗಾದಡಿ ಕೆಲಸ ಕೊಟ್ಟು ಸಕಾಲದಲ್ಲೇ ಕೂಲಿ ಹಣ ಪಾವತಿಸಲಾಗುವುದೆಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
    ಹೊಳಲ್ಕೆರೆ ತಾಲೂಕು ಹಿರೇಎಮ್ಮಿಗನೂರು ಗ್ರಾಪಂ ವ್ಯಾಪ್ತಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ್ದ ಕಲ್ಯಾಣಿ ಅಭಿವೃದ್ಧಿ, ಗ್ರಾಮೀಣ ಉದ್ಯಾನ, ಚರಂಡಿ, ರಸ್ತೆ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿ ಮಾತನಾಡಿದರು.
    ಬರಗಾಲ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿ ನರೇಗಾದಡಿ ಕೂಲಿ ಆಧರಿತ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಉದ್ಯೋಗ ಅರಸಿ ಯಾರೂ ಗುಳೆ ಹೋಗಬಾರದು. ನಿಮ್ಮ ಗ್ರಾಮಗಳಲ್ಲೇ ನರೇಗಾದಡಿ ನೀಡುವ ಉದ್ಯೋಗ ನೀಡುತ್ತೇವೆ. ಕೆಲಸದ ಅಗತ್ಯವಿರುವವರು ಗ್ರಾಪಂಗೆ ತಿಳಿಸಬೇಕು. ಆಯಾ ಗ್ರಾಪಂ ವ್ಯಾಪ್ತಿಯಲ್ಲೇ ಕೆಲಸ ಕೊಡುವ ಜತೆಗೆ ಸಕಾಲಕ್ಕೆ ಕೂಲಿ ಹಣ ಪಾವತಿಸಲಾಗುವುದು ಎಂದರು.
    ನರೇಗಾ ಯೋಜನೆ ಅನುಷ್ಠಾನಗೊಳಿಸುವಾಗ ತಪ್ಪದೆ 60:40 ಅನುಪಾತ ಪಾಲಿಸಬೇಕು, ಗುಣಮಟ್ಟದ ಆಸ್ತಿಗಳ ಸೃಜನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
    ನರೇಗಾದಡಿ ಕೂಸಿನ ಮನೆಗೆ ಭೇಟಿ ನೀಡಿ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ವಿತರಿಸಬೇಕು. ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರು ಪೂರೈಸಬೇಕು, ಮಕ್ಕಳ ಆರೋಗ್ಯದೆಡೆ ಜಾಗ್ರತೆ ವಹಿಸಬೇಕೆಂದರು.
    ಗ್ರಾಪಂ ವ್ಯಾಪ್ತಿಯಲ್ಲಿ 7 ಗ್ರಾಮಗಳಿದ್ದು, ಕಡೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಸಿಇಒ ಗಮನಕ್ಕೆ ತಂದರು. ಖಾಸಗಿ ಬೋರ್‌ವೇಲ್ ಬಾಡಿಗೆಗೆ ಪಡೆಯುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.
    17 ಸದಸ್ಯ ಬಲದ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 7000 ಜನಸಂಖ್ಯೆಯಿದ್ದು, ಈ ಗ್ರಾಪಂ ಅನ್ನು ಗ್ರೇಡ್ 1 ಗೆ ಶಿಫಾರಸು ಮಾಡ ಬೇಕು, ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಅನುದಾನ ಒದಗಿಸಬೇಕೆಂದು ಸದಸ್ಯರು ಮನವಿ ಮಾಡಿದರು.
    ಸದಸ್ಯರ ಶಿಫಾರಸಿನಂತೆ ಗ್ರಾಪಂ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು, ನರೇಗಾದಡಿ ಕಟ್ಟಡಕ್ಕೆ 20 ಲಕ್ಷ ರೂ.ಅನುದಾನ ಬಳಸಿ ಹೊಸ ಕಟ್ಟಡ ನಿರ್ಮಿಸಿ ಎಂದು ಸಿಇಒ ತಿಳಿಸಿದರು. ಕರವಸೂಲಿ ಹೆಚ್ಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
    ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗ್ರಾಪಂ ಅಧ್ಯಕ್ಷ ಎಸ್.ಪ್ರಕಾಶ್, ಉಪಾಧ್ಯಕ್ಷರು, ಸದಸ್ಯರು, ಜಿಪಂ ಡಿಎಸ್ ಕೆ.ತಿಮ್ಮಪ್ಪ, ತಾಪಂ ಇಒ ಶಿವಪ್ರಕಾಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts