More

    ಗುಲ್ಬರ್ಗಕ್ಕೆ ಸಮಗ್ರ ಚಾಂಪಿಯನ್ ಶಿಪ್​

    ಕಲಬುರಗಿ: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪೆಂಕಾಕ್ ಸಿಲತ್ (ಮಹಿಳಾ) ಕ್ರೀಡಾಕೂಟದಲ್ಲಿ ಅತಿಥೇಯ ಗುಲ್ಬರ್ಗ ವಿಶ್ವವಿದ್ಯಾಲಯ ಸಮಗ್ರ ಚಾಂಪಿಯನ್ಶಿಪ್ ಬಾಚಿಕೊಳ್ಳುವ ಮೂಲಕ ಕಲ್ಯಾಣ ನಾಡಿನ ಕೀರ್ತಿ  ಹೆಚ್ಚಿಸಿದೆ. ಕಳೆದ ಬಾರಿ ಪಂಜಾಬ್ ಪಟಿಯಾಲದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಗುಲ್ಬರ್ಗ ವಿವಿ ತಂಡ ತೃತೀಯ ಸ್ಥಾನ ಪಡೆದುಕೊಂಡಿತ್ತು.
    440 ಪಾಯಿಂಟ್ಸ್ ಮೂಲಕ ಗುಲ್ಬರ್ಗ ವಿವಿ ಸಮಗ್ರ ಪ್ರಶಸ್ತಿ ಪಡೆದರೆ, 340 ಪಾಯಿಂಟ್ಸ್ ಗಳಿಸಿದ ಪಟಿಯಾಲಾ ಪಂಜಾಬ್ ವಿವಿ ರನ್ನರ್​ ಅಫ್​ ಮತ್ತು 260 ಪಾಯಿಂಟ್ಸ್ ಗಳಿಸಿದ ಚಂದೀಗಢ ವಿವಿ ದ್ವಿತೀಯ ರನ್ನರ್​ಅಪ್​ ಆಗಿ ಹೊರಹೊಮ್ಮಿದೆ.
    ಬೀಚ್ ಈವೆಂಟ್
    ಟೆಂಡಿಂಗ್ 45-50 ಕೆಜಿ ಕೆಟಗರಿ
    ಗುಲ್ಬರ್ಗ ವಿವಿ ವೈಷ್ಣವಿ ಪ್ರಥಮ, ಪಂಜಾಬ್ನ ಎಲ್ಪಿವಿ ವಿವಿ ರುಚಿ ಕಲ್ಕೋಟಿ ದ್ವಿತೀಯ, ವಿಜಯಪುರ ಮಹಿಳಾ ವಿವಿ ಮಾಲಾಶ್ರೀ ಮತ್ತು ಗುಲ್ಬರ್ಗ ಕೃಷಿ ವಿವಿ ಶಿವಲೀಲಾ ತೃತೀಯ ಸ್ಥಾನ. 50-55 ಕೆಜಿ ಕೆಟಗರಿಯಲ್ಲಿ ಜಮ್ಮು ಕ್ಲಸ್ಟರ್ ವಿವಿ ಜಾನ್ಹವಿ ಪ್ರಥಮ, ಚಂಡಿಗಢ ವಿವಿ ವಷರ್ಾ ಬೆಲ್ವಾರ್ ದ್ವಿತೀಯ, ಹಿಸ್ಸಾರ್ ಗುರು ಜಂಬೇಶ್ವರ ವಿವಿ ಪ್ರಿಯಾಂಕ ಮತ್ತು ಪುಣೆಯ ತಿಲಕ್ ಮಹಾರಾಷ್ಟ್ರ ವಿವಿಯ ಹಸ್ತಿ ಬನ್ಸಾಲ್ ಸಮನಾಗಿ ತೃತೀಯ ಸ್ಥಾನ ಗಳಿಸಿದ್ದಾರೆ.
    55-60 ಕೆಜಿ ಕೆಟಗರಿ
    ಪಟಿಯಾಲಾ ಪಂಜಾಬಿ ವಿವಿ ಮನದೀಪ್ ಕೌರ್ ಪ್ರಥಮ, ಗುಲ್ಬರ್ಗ ವಿವಿ ಪಾರ್ವತಿ ದ್ವಿತೀಯ, ಹಿಸ್ಸಾರ್ ಗುರುಜಂಬೇಶ್ವರ ಕಮಲೇಶ ಮತ್ತು ಅಗರತಲಾ ತ್ರಿಪುರ ವಿವಿ ಮುಕ್ತಾ ದೇವಂತ ಸಮನಾಗಿ ತೃತೀಯ ಸ್ಥಾನ ಗಳಿಸಿದ್ದಾರೆ. 60-65 ಕೆಜಿ ಕೆಟಗರಿಯಲ್ಲಿ ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿವಿ ರಿಷಿಕಾ ಪ್ರಥಮ, ಮೋಹಾಲಿಯ ಚಂಡೀಗಢ ವಿವಿ ರಿತು ದ್ವಿತೀಯ, ರಾಯಚೂರು ಅಗ್ರಿ ವಿವಿ ತನುಶ್ರೀ ಮತ್ತು ಜಮ್ಮು ಕ್ಲಸ್ಟರ್ ವಿವಿ ಗುಲ್ಷನ್ ಬೀಬೀ ಸಮನಾಗಿ ತೃತೀಯ ಸ್ಥಾನ ಗಳಿಸಿದ್ದಾರೆ.
    65-70 ಕೆಜಿ ಕೆಟಗರಿ
    ಪಟಿಯಾಲಾ ಪಂಜಾಬ್ ವಿವಿ ರೋಮನ್ಪ್ರೀತ್ ಪ್ರಥಮ, ಜಮ್ಮು ಕ್ಲಸ್ಟರ್ ವಿವಿ ಅನುಷ್ಕಾ ಬಕ್ಷಿ ದ್ವಿತೀಯ, ಅನಂತಪುರ ಜೆಎನ್ಟಿಯು ಎಸ.ಅಮ್ರಿತಾ ಮತ್ತು ಬಳ್ಳಾರಿ ವಿಜಯನಗರ ವಿವಿ ಜಯಶ್ರೀ ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. 70-75 ಕೆಜಿ ಕೆಟಗರಿ ಪಂಜಾಬ್ ಎಲ್ಪಿಯು ವಿವಿ ಸೌಮ್ಯಾ ಆನಂದ ಪ್ರಥಮ, ಬೆಂಗಳೂರು ಉತ್ತರ ವಿವಿ ಶಿಲ್ಪಶ್ರೀ ದ್ವಿತೀಯ, ಮೋಹಾಲಿ ಚಂದೀಗಢ ವಿವಿ ಮಾನ್ಸಿ ಮತ್ತು ಪಂಜಾಬ್ ವಿವಿ ಲವ್ಪ್ರೀತ್ ಕೌರ್ ತೃತೀಯ ಸ್ಥಾನ ಹಂಚಿಕೊಂಡಿದ್ಧಾರೆ. ಮುಕ್ತ ಕೆಟಗರಿಯಲ್ಲಿ ಕೇರಳಾದ ಕ್ಯಾಲಿಕಟ್ ವಿವಿ ಮೌರೇಶಾ ಸಿ.ಎಂ ಪ್ರಥಮ, ಜಮ್ಮು ಲಢಾಕ್ ವಿವಿ ಪುಷ್ಪಾ ಲಾಮಾ ದ್ವಿತೀಯ, ಗುಲ್ಬರ್ಗ ವಿವಿ ವಿದ್ಯಾಶ್ರೀ ಮತ್ತು ಮಂಗಳೂರು ವಿವಿ ನಿಧಿ ಶೆಟ್ಟಿ ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
    ಒಳಾಂಗಣ ಕ್ರೀಡೆ
    ತುಂಗಲ್ : ಅಮೃತ್ಸರ ಗುರುನಾನಕ ದೇವ ವಿವಿ ಕಾಂಬ್ಳೆ ಮೃನಾಳ್ ನಿತಿನ್ ಪ್ರಥಮ, ಮೋಹಾಲಿ ಚಂದೀಗಢ ವಿವಿ ಸೋನಿಯಾ ದ್ವಿತೀಯ, ಮಹಾರಾಷ್ಟ್ರಾ ತಿಲಕ್ ವಿವಿ ಮುಸ್ಕಾನ್ ಅಬ್ಬಾಸ್ ಮುಲಾನಿ ಮತ್ತು ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಚನ್ನದಸರ್ ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
    ಗಂಡಾ: ಅಮೃತಸರ ಗುರುನಾನಕದೇವ ವಿವಿ ಅಮನ್ದೀಪ್ ಕೌರ್ ಮತ್ತು ಸರಸ್ವತಿ ಪ್ರಥಮ, ಗುಲ್ಬರ್ಗ ವಿವಿ ವೈಷ್ಣವಿ ಮತ್ತು ಸೋನಿಕಾ ದ್ವಿತೀಯ, ಬಳ್ಳಾರಿ ವಿಜಯನಗರ ವಿವಿ ರುಕ್ಮಿಣಿ ಮತ್ತು ಸಲ್ಮಾ ಬಿಬಿ ತೃತೀಯ ಮತ್ತು ಮಂಗಳೂರು ವಿವಿ ಸ್ವಾತಿ ಮತ್ತು ದೀಪಿಕಾ ತೃತೀಯ ಸ್ಥಾನ ಗಳಿಸಿದ್ದಾರೆ.
    ರೇಗು: ಗುಲ್ಬರ್ಗ ವಿವಿಯ ಮಾಲಾಶ್ರೀ ಎಂ, ಸಾವಿತ್ರಮ್ಮ ಮತ್ತು ಎಸ್.ಮಂಗಲಾ ಪ್ರಥಮ ಸ್ಥಾನ, ಅಮೃತಸರ ಗುರುನಾನಕದೇವ ವಿವಿ ಮನಪ್ರೀತ್ ಕೌರ್.ಬಿ, ನೇಹಾರಾಣಿ, ಮನಪ್ರೀತ್ ದ್ವಿತೀಯ ಸ್ಥಾನ, ಪಟಿಯಾಲಾ ಪಂಜಾಬಿ ವಿವಿ ಅಂಜು, ಜಮುನಾಬಾಯ್, ರಮಣಜೀತ್ ಕೌರ್ ಮತ್ತು ಅನಂತಪುರ ಜೆಎನ್ಟಿಯು ವಿವಿಯ ನಾಗಮಣಿ, ಭವ್ಯಶ್ರೀ, ಸುರೇಖಾ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
    ಬೀಚ್ ಈವೆಂಟ್ ತುಂಗಲ್
    ಮೋಹಾಲಿ ಚಂದೀಗಢ ವಿವಿ ಸೋನಿಯಾ ಪ್ರಥಮ, ಗುಲ್ಬರ್ಗ ವಿವಿ ಮಾಲಾಶ್ರೀ ಎಂ ದ್ವಿತೀಯ, ಹಿಸ್ಸಾರ್ ಗುರು ಜಂಬೇಶ್ವರ ವಿವಿ ಸೀಮಾರಾಣಿ ಮತ್ತು ಪಟಿಯಾಲಾ ಪಂಜಾಬಿ ವಿವಿ ಅಂಜು ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಗಂಡಾ: ಗುಲ್ಬರ್ಗ ವಿವಿ ಸಾವಿತ್ರಮ್ಮ ಮತ್ತು ಮಾಲಾಶ್ರೀ ಪ್ರಭು ಪ್ರಥಮ, ಪಟಿಯಾಲಾ ಪಂಜಾಬಿ ವಿವಿ ಇಂದು ಶಮರ್ಾ, ರುಪೀಂದರ್ ಕೌರ್ ದ್ವಿತೀಯ, ಪಂಜಾಬ್ ಎಲ್ಪಿಯು ಸೋನಾಲಿ ಕುಮಾರಿ, ಆಯುಷಿ ಉಜ್ವಲ್ ಮತ್ತು ಬೆಂಗಳೂರು ವಿವಿ ಹಷರ್ಿತಾ, ಪವಿತ್ರಾ ಆರ್ ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
    ರೇಗು: ಅನಂತಪುರ ಜೆಎನ್ಟಿಯು ವಿವಿ ನಾಗಮಣಿ, ಭಾಗ್ಯಶ್ರೀ, ಸುರೇಖಾ ಪ್ರಥಮ, ಪಟಿಯಾಲಾ ಪಂಜಾಬಿ ವಿವಿ ಅಂಜು, ಜಮುನಾಬಾಯ್, ರಮಣಜೀತ್ ಕೌರ್ ದ್ವಿತೀಯ, ಗುಲ್ಬರ್ಗ ವಿವಿ ಮಾಲಾಶ್ರೀ ಮನೋಹರ, ಸಾವಿತ್ರಮ್ಮ, ಎಸ.ಮಂಗಲಾ ಮತ್ತು ಅಗರತಲಾ ತ್ರಿಪುರ ವಿವಿ ಮುಕ್ತಾ ದೇಬನಾಥ, ವೈಲೀನಾ ಲೇಹನ್, ಅಂಕಿತಾ ಕೋಚ್ ಸಮನಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts