More

    ಗುರಿ ಹಿಂದೆ ಗುರು ಇದ್ದಾಗ ಯಶಸ್ಸು ನಿಶ್ಚಿತ: ಶಾಸಕಿ ಎಂ.ರೂಪಕಲಾ ಅಭಿಮತ, ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಸಂಚಿಕೆ ವಿತರಣೆ

    ಬೇತಮಂಗಲ: ವಿಜಯವಾಣಿಯ ವಿದ್ಯಾರ್ಥಿಮಿತ್ರ ಸಂಚಿಕೆ ಅಪಾರ ಜ್ಞಾನ ಸಂಪತ್ತು ನೀಡುವ ಗುರುವೇ ಆಗಿದೆ ಎಂದು ಕೆಜಿಎಫ್​ ಶಾಸಕಿ ಎಂ.ರೂಪಕಲಾ ತಿಳಿಸಿದರು.
    ಕೆಜಿಎಫ್​ ​ ತಾಲೂಕಿನ ಸುಂದರಪಾಳ್ಯ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಸಂಚಿಕೆಯನ್ನು ತಾಲೂಕಿನ ಸರ್ಕಾರಿ ಶಾಲಾ-ಕಾಲೇಜುಗಳ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


    ವಿದ್ಯಾರ್ಥಿ ಮಿತ್ರ ಪತ್ರಿಕೆ ವಿದ್ಯಾರ್ಥಿಗಳ ಮತ್ತು ಉದ್ಯೋಗ ಆಕಾಂಗಳಿಗೆ ಭವಿಷ್ಯ ರೂಪಿಸುವ ಪತ್ರಿಕೆಯಾಗಿರುವ ಹಿನ್ನೆಲೆಯಲ್ಲಿ ಉಚಿತವಾಗಿ ನೀಡುತ್ತಿದ್ದೇವೆ. ಇದರ ಪ್ರಯೋಜನ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.


    ಸಾಧನೆ ಮಾಡಬೇಕಾದರೂ ರ್ನಿದಿಷ್ಟ ಗುರಿ ಇರಬೇಕು. ಗುರಿಯ ಹಿಂದೆ ಗುರು ಇರಲೇಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯವಾಗಿದೆ. ಅದರಲ್ಲೂ ಗ್ರಾಮೀಣ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವುದು ಅವಶ್ಯವಾಗಿರುವುದರಿಂದ ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿದರು.

    ಬಹುಮಾನ ಪ್ರಕಟಿಸಿದ ಗೋವಿಂದಗೌಡ: ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಈಗಿನ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಸರ್ಕಾರಿ ನೌಕರಿಯಲ್ಲಿರುವವರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸುವಂತಾಗಬೇಕು. ಕನಿಷ್ಠ ಸರ್ಕಾರಿ ಶಾಲೆಗಳ ಶಿಕ್ಷಕರಾದರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲೇಬೇಕೆಂಬ ರ್ನಿಣಯವನ್ನು ಸರ್ಕಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಹೆಸರೇ ಇಲ್ಲದಂತಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.


    ವಿದ್ಯಾರ್ಥಿಮಿತ್ರ ಪತ್ರಿಕೆಯ ಬೆಲೆ ಒಂದು ರೂಪಾಯಿ ಇರಬಹುದು, ಆದರೆ ಅದನ್ನು ಓದಿ ಜ್ಞಾನ ಬೆಳೆಸಿಕೊಳ್ಳುವುದರ ಜತೆಗೆ ನಿಮಗೆ ತಲುಪುವ ಎಲ್ಲ ಪತ್ರಿಕೆಗಳನ್ನು ಜೋಪಾನ ಮಾಡಿಕೊಂಡವರಿಗೆ ಶಾಸಕರ ಕಡೆಯಿಂದ ಉತ್ತಮ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು

    ಪ್ರೌಢಶಾಲೆ ಮುಖ್ಯಶಿಕ್ಷಕ ಪರಮೇಶ್​ ಮಾತನಾಡಿ, ಪಬ್ಲಿಕ್​ ಶಾಲೆಯಲ್ಲಿನ ಪ್ರಗತಿ ಮತ್ತು ಸಾಧನೆ ಬಗ್ಗೆ ವಿವರಿಸಿದರು.


    ಪದವಿ ಪೂರ್ವ ಕಾಲೇಜು ಕ್ರೀಡಾ ಕಾರ್ಯದರ್ಶಿ ಕುಮಾರ್​ ಮಾತನಾಡಿ, ಜಿಲ್ಲೆಯಲ್ಲೇ ಉತ್ತಮ ಶ್ರೇಣಿ ಪಡೆದಿರುವ ಸರ್ಕಾರಿ ಕಾಲೇಜು ಇದಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಸಾಧನೆಗಳನ್ನು ಮಾಡಿದೆ ಎಂದರು.


    ಗ್ರಾಪಂ ಅಧ್ಯಕ್ಷ ರಾಂಬಾಬು ಮಾತನಾಡಿ, ಶಾಸಕಿ ಎಂ.ರೂಪಕಲಾ ಅವರ ಸೂಚನೆಯ ಮೇರೆಗೆ ಎಲ್ಲ ಸರ್ಕಾರಿ ಶಾಲೆಗಳಿಗೂ ಉಚಿತವಾಗಿ ಶುದ್ಧ ನೀರಿನ ಕ್ಯಾನ್​ಗಳನ್ನು ಪ್ರತಿನಿತ್ಯ ವಿತರಿಸುತ್ತಿರುವುದಾಗಿ ಹೇಳಿ ಶಾಸಕರಿಂದಲೇ ಚಾಲನೆ ಮಾಡಲಾಯಿತು.


    ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಮಂಜುನಾಥ್​, ಸುಂದರಪಾಳ್ಯ ಗ್ರಾಪಂ ಉಪಾಧ್ಯೆ ರತ್ನಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾವರೆಡ್ಡಿ, ಬಾಲರಾಜು, ಬೆನ್ನವರ ವೆಂಕಟೇಶ್​, ಪ್ರಕಾಶ್​ರೆಡ್ಡಿ, ಶ್ರೀಧರರೆಡ್ಡಿ, ಸೀತಂಪಲ್ಲಿ ಶ್ರೀನಿವಾಸ್​, ಎಂಬಿಎ ಕೃಷ್ಣಪ್ಪ, ಸುವರ್ಣಹಳ್ಳಿ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ವೆಂಕಟರಾಮ ಇತರರಿದ್ದರು.


    ಸುಂದರ ಪಾಳ್ಯ ಪಬ್ಲಿಕ್​ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು.


    ವಿಜಯವಾಣಿ ಕೋಲಾರ ಜಿಲ್ಲಾ ಪ್ರಸರಣಾಧಿಕಾರಿ ನರಸಿಂಹಮೂರ್ತಿ, ಕೆಜಿಎಫ್​ ತಾಲೂಕು ವರದಿಗಾರರಾದ ಶಿವಶಂಕರ್​, ಜೆ.ಜಿ.ಶ್ರೀನಿವಾಸಮೂರ್ತಿ, ಸ್ಥಳಿಯ ಏಜೆಂಟರಾದ ಮಂಜುನಾಥ್​ ಇತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

    ವಿದ್ಯಾರ್ಥಿ ಮಿತ್ರದಿಂದ ಸರ್ಕಾರಿ ಉದ್ಯೋಗ: ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಓದಿ, ಜ್ಞಾನ ಪಡೆದಿದ್ದ ಹಿನ್ನೆಲೆಯಲ್ಲಿ ಪತ್ನಿ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಬೇತಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹನುಮಂತು ವಗ್ಗರ್​ ತಮ್ಮ ಅನುಭ ಹಂಚಿಕೊಂಡರು.

    ವಿದ್ಯಾರ್ಥಿ-ಉದ್ಯೋಗ ಮಿತ್ರದಲ್ಲಿದೆ ಅಪಾರ ಜ್ಞಾನ ಭಂಡಾರ
    ಸಂಪಾದಕ ಚನ್ನೇಗೌಡ ಅಭಿಪ್ರಾಯ

    ಬೇತಮಂಗಲ: ವಿಜಯವಾಣಿ ಸಂಸ್ಥೆ ಹೊರತಂದಿರುವ ವಿದ್ಯಾರ್ಥಿ-ಉದ್ಯೋಗ ಮಿತ್ರ ಸಂಚಿಕೆ ಜ್ಞಾನ ಭಂಡಾರವೇ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಪತ್ರಿಕೆಯಾಗಿದೆ ಎಂದು ವಿಜಯವಾಣಿ ಸಂಪಾದಕ ಕೆ. ಎನ್​.ಚನ್ನೇಗೌಡ ತಿಳಿಸಿದರು.

    ಗುರಿ ಹಿಂದೆ ಗುರು ಇದ್ದಾಗ ಯಶಸ್ಸು ನಿಶ್ಚಿತ: ಶಾಸಕಿ ಎಂ.ರೂಪಕಲಾ ಅಭಿಮತ, ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಸಂಚಿಕೆ ವಿತರಣೆ
    ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ವಿತರಿಸಲಾಯಿತು.


    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕಷ್ಟು ತರಬೇತಿ ಕೇಂದ್ರಗಳು ಉದ್ಯೋಗ ಮಿತ್ರ ಪತ್ರಿಕೆಯನ್ನು ಪ್ರತಿನಿತ್ಯ ಅಧ್ಯಯನ ಮಾಡುವ ಮೂಲಕ ಚಟುವಟಿಕೆ ಆರಂಭಿಸುತ್ತವೆ. ವಿದ್ಯಾರ್ಥಿಮಿತ್ರ ಪ್ರಾರಂಭ ಮಾಡಿದಾಗಿನಿಂದ ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಸಾವಿರಾರು ಮಂದಿ ಉದ್ಯೋಗ ಅವಕಾಶ ಪಡೆದಿದ್ದಾರೆ ಎಂದರು.

    ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ವಿತರಿಸಲಾಯಿತು.
    ಬಡ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ಕಟ್ಟಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಚಿಂತನೆಯಿಂದ ನಮ್ಮ ಸಂಸ್ಥೆಯ ಮಾಲೀಕರಾದ ಡಾ.ವಿಜಯ ಸಂಕೇಶ್ವರ್​ ಹಾಗೂ ಡಾ.ಆನಂದ ಸಂಕೇಶ್ವರ್​ ಅವರ ಮಾರ್ಗದರ್ಶನದಲ್ಲಿ ಅತ್ಯಂತ ನಿಪುಣರ ತಂಡವೊಂದು ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಹೊರತರುತ್ತಿದೆ ಎಂದ ಅವರು ದೇಶದ ಹೆಸರಾಂತ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಮೂಲಕ ಹಲವಾರು ವಿಷಯಗಳನ್ನು ಸಂಗ್ರಹಿಸಿ ಸಂಚಿಕೆಯನ್ನು ಹೊರತರುತ್ತಿದ್ದೇವೆ ಎಂದರು.


    ಸಮಾಜದಲ್ಲಿ ಸಾಕಷ್ಟು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಕ್ಷೇತ್ರದ ಶಾಸಕಿ ರೂಪಕಲಾ ಎಲ್ಲ ಕ್ಷೇತ್ರಗಳ ಜತೆಗೆ ಅಕ್ಷರದಾಸೋಹಕ್ಕೆ ವಿಶೇಷ ಮಹತ್ವ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿ ಮಿತ್ರ ಪತ್ರಿಕೆ ಜಿಲ್ಲೆಯಾದ್ಯಂತ ಮನೆಮಾತಾಗಲು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದೇಗೌಡ ಅವರ ಸಹಕಾರವನ್ನು ಸ್ಮರಿಸಿದ ಚನ್ನೇಗೌಡರು ಶಾಸಕಿ ರೂಪಕಲಾ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts