More

    ಗುರಿ ನಿಗದಿಪಡಿಸಿ ಕೆಲಸ ಮಾಡಿ

    ಬೆಳಗಾವಿ: ಜಿಲ್ಲೆಯಲ್ಲಿ 2013ರ ನಂತರದಲ್ಲಿ ಮ್ಯಾನುವಲ್​ ಸ್ಕಾ$್ಯವೆಂರ್ಜಸ್​ ಇಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಹಿಂದೆ ಕೆಲಸ ಮಾಡಿದವರು ಹಾಗೂ ಅವರ ಅವಲಂಬಿತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜಿಲ್ಲಾವಾರು ಗುರಿ ನಿಗದಿ ಪಡಿಸಿ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂದು ಸಫಾಯಿ ಕರ್ಮಚಾರಿ, ಪೌರಕಾರ್ಮಿಕರ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಸೂಚಿಸಿದರು.

    ನಗರದಲ್ಲಿನ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಗುರುವಾರ ಸಫಾಯಿ ಕರ್ಮಚಾರಿ/ ಪೌರ ಕಾರ್ಮಿಕರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮ್ಯಾನ್ಯುವಲ್​ ಸ್ಕಾ$್ಯವೆಂಜರ್​ ಅಥವಾ ಅವರ ಅವಲಂಬಿತರಿಗೆ ಎಲ್ಲರಂತೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅಗತ್ಯ ವೃತ್ತಿ ಕೌಶಲ್ಯ ತರಬೇತಿ, ಪುನರ್ವಸತಿ ಸೇರಿದಂತೆ ಅವಶ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವರುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಿದೆ ಎಂದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಆದಿ ಜಾಂಬವ ಅಭಿವೃಧ್ದಿ ನಿಗಮದಿಂದ ಸೌಲಭ್ಯ ವಿತರಣೆಗೆ 261 ಫಲಾನುಭವಿಗಳಿಗೆ ಆಯ್ಕೆ ಮಾಡಿ ಅರ್ಜಿಗಳನ್ನು ಕಳುಹಿಸಿ ಕೊಡಲಾಗಿದೆ. ಉಚಿತ ಭೂಮಿ ನೀಡುವ ಯೋಜನೆಯಡಿ ಅರ್ಜಿ ಆಹ್ವಾನಿಸಿ, ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕು. ಪೌರಕಾರ್ಮಿಕರಿಗೆ ಸಮವಸ, ಶೂ, ಗ್ಲೌಸ್​ ಸೇರಿದಂತೆ ಸುರಕ್ಷಿತ ಸಾಮಗ್ರಿಗಳನ್ನು ತಪ್ಪದೇ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಎಲ್ಲ ಇಲಾಖೆ ಅಧಿಕಾರಿಗಳು ಪೌರಕಾರ್ಮಿಕರಿಗೆ ವೇತನಪತ್ರ ನೀಡಬೇಕು. ಕರ್ಮಚಾರಿ ಅಥವಾ ಪೌರಕಾರ್ಮಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಹಾಗೂ ಅವರ ಅವಲಂಬಿತರು ನಿಗಮಗಳಿಂದ ಶೇ.90 ರಷ್ಟು ಯೋಜನೆಗಳ ಸಬ್ಸಿಡಿ ಪಡೆಯಬಹುದು. ಗ್ರಾಪಂ, ಪಪಂ, ಪುರಸಭೆ ಹಾಗೂ ನಗರಸಭೆಗಳಲ್ಲಿ ಕಡ್ಡಾಯವಾಗಿ ಪೌರ ಕಾರ್ಮಿಕರ ಸೊಸೈಟಿ ಮಾಡಬೇಕು. ಆ ಮೂಲಕ ಅನೇಕ ಸೌಲಭ್ಯ, ಉದ್ಯೋಗ ದೊರೆತು ಕುಟುಂಬಕ್ಕೆ ಆರ್ಥಿಕ ಆಸರೆ ಸಿಕ್ಕು, ಸ್ವಾವಲಂಬಿಗಳಾಗಿ ಬದುಕಲು ನೆರವಾಗಲಿದೆ ಎಂದರು.

    ಅವಲಂಬಿತರ ಮಕ್ಕಳಿಗೆ ಸ್ಥಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಬೇಕು. ಅಧಿಕಾರಿಗಳು ಸಮೀೆ ನಡೆಸಿ ಪಟ್ಟಿ ಮಾಡಬೇಕು. ಅಲ್ಪೋಪಹಾರ, ಊಟ ನೀಡುವ ಬದಲಿಗೆ ಅವರಿಗೆ ಹಣ ನೀಡಬಾರದು. ಪೌರಕಾರ್ಮಿಕರ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು. ಖಾಲಿ ಇರುವ ಸಮುದಾಯ ಭವನಗಳನ್ನು ಕೂಡ ಇದಕ್ಕಾಗಿ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

    ಆಯೋಗದ ಕಾರ್ಯದರ್ಶಿ ಚಂದ್ರಕಲಾ, ವೆಂಕಟೇಶ, ಜಿಪಂ ಸಿಇಒ ದರ್ಶನ್​ ಹೆಚ್​.ವಿ, ಎಸ್ಪಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಇತರರು ಇದ್ದರು.

    ಗುತ್ತಿಗೆದಾರರಿಗೆ ನೋಟಿಸ್​: ಟೆಂಡರ್​ ಮೂಲಕ ಕೆಲಸ ಮಾಡುವ ಪೌರಕಾರ್ಮಿಕರ ಮಾನವ ಸಂಪನ್ಮೂಲ ಪೂರೈಕೆ ಟೆಂಡರ್​ ಪಡೆದವರು, ಹೊರಗುತ್ತಿಗೆ ಸಿಬ್ಬಂದಿಯ ಇಎಸ್​ಐ, ಪಿಎಫ್​ ಕಡ್ಡಾಯವಾಗಿ ಪ್ರತಿ ತಿಂಗಳು ಪಾವತಿಸಬೇಕು. ಪಾವತಿಸದ ಗುತ್ತಿಗೆದಾರನಿಗೆ ನೋಟಿಸ್​ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಡಿಸಿ ನಿತೇಶ ಪಾಟೀಲ ಸೂಚನೆ ನೀಡಿದರು.

    ಪಾಲಿಕೆಯಿಂದ ಸಬ್ಸಿಡಿ ದ್ವಿಚಕ್ರ ವಾಹನ: ಮಹಾನಗರ ಪಾಲಿಕೆಯ ವತಿಯಿಂದ ವಿನೂತನವಾಗಿ ಸಬ್ಸಿಡಿ ದ್ವಿಚಕ್ರ ವಾಹನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಿಗಮಗಳ ಸಹಯೋಗದೊಂದಿಗೆ ಗುರಿ ನಿಗದಿ ಪಡಿಸಿ ವಿವಿಧ ವರ್ಗಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದರು. ಜಿಲ್ಲಾದ್ಯಂತ ಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಬೇಕು ಎಂದು ಸಫಾಯಿ ಕರ್ಮಚಾರಿ ಜಿಲ್ಲಾ ಸದಸ್ಯ ವಿಜಯ ಹಿರಿಕಟ್ಟಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts