More

    ಗುರಿ ತಲುಪುವವರೆಗೂ ವಿಶ್ರಾಂತಿ ಪಡೆಯಬೇಡಿ


    ಯಾದಗಿರಿ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಬರಬೇಕು ಎಂದರೆ ಕಠಿಣ ಪರಿಶ್ರಮ ಮತ್ತು ಸವಾಲಿನ ಹಾದಿ ತುಳಿಯಲೇಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನದಲ್ಲಿ ಶಾಲಾ ಸಾಕ್ಷರಥಾ ಹಾಗೂ ಶಿಕ್ಷಣ ಇಲಾಖೆ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸೀಕ್ರೆಟ್ ಟು ಕೀ ಸಕ್ಸೆಸ್ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಾವು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದು ತಲುಪುವವರೆಗೂ ವಿಶ್ರಾಂತಿ ಪಡೆಯಬಾರದು. ಇಂದು ಮಾಡುವ ಕೆಲಸ ಈಗಲೇ ಮಾಡಬೇಕು ಎನ್ನುವಂತೆ ವಿದ್ಯಾಥರ್ಿಗಳಿಗೆ ಓದಿನ ಕಡೆಗೆ ಮಾತ್ರ ಲಕ್ಷೃವಿರಬೇಕು ಎಂದು ಸಲಹೆ ನೀಡಿದರು.

    ಜಸ್ಟಿಸ್ ಶಿವರಾಜ ಪಾಟೀಲ್ರು ವಿದ್ಯಾರ್ಥಿ ದೆಸೆಯಲ್ಲಿ ಕಾಲ್ನಡಿಗೆಯಲ್ಲೇ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಮುಂದೆ ಉನ್ನತ ಗುರಿ ಇಟ್ಟುಕೊಂಡು ಅದನ್ನು ಸಾಧಿಸುತ್ತಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಿ ನಮ್ಮೆಲರಿಗೆ ಮಾದರಿಯಾಗಿದ್ದಾರೆ. ಅವರ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಗ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದರು.
    ಜಿಪಂ ಸಿಇಒ ಗರೀಮಾ ಪನ್ವಾರ ಮಾತನಾಡಿ, ವಿದ್ಯಾರ್ಥಿಗಗಳು ಉತ್ತಮ ಬದುಕಿಗೆ ಬೇಕಾದ ಜ್ಞಾನ ಪಡೆಯಬೇಕು. ನಿಮ್ಮಲ್ಲಿರುವ ಸಾಮಥ್ರ್ಯದಿಂದ ಮುಂದೆ ಬರಲು ಪ್ರಯತ್ನಿಸಬೇಕು. ಯಶಸ್ಸು ಪಡೆಯಲು ಪ್ರತಿದಿನ ಪ್ರತಿಕ್ಷಣ ಏನಾದರೂ ಹೊಸದನ್ನು ಕಲಿಯಬೇಕು. ಅದಕ್ಕಾಗಿ ಶ್ರಮ ಪಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts