More

    ಗೀತಾ ಕಣಕ್ಕಿಳಿಸಲು ಮಧು ಬಂಗಾರಪ್ಪ ಚಿತಾವಣೆ – ರೈತ ಮುಖಂಡರ ಆರೋಪ

    ದಾವಣಗೆರೆ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಹೋದರಿಯನ್ನು ಮುಂದಿನ ಲೋಕಸಭಾ ಚುನಾವಣೆ ಕಣಕ್ಕಿಳಿಸುವ ಹಿನ್ನೆಲೆಯಲ್ಲಿ ಅಲ್ಲಿನ ಜನರನ್ನು ಓಲೈಸಲು ದಾವಣಗೆರೆ ಜಿಲ್ಲೆಗೆ ನೀರು ನಿಲುಗಡೆ ಮಾಡುವ ಚಿತಾವಣೆ ಮಾಡಿದ್ದಾರೆ ಎಂದು ರೈತ ಮುಖಂಡ ಶಾಮನೂರು ಎಚ್.ಆರ್.ಲಿಂಗರಾಜ್, ಗೀತಾ ಶಿವರಾಜಕುಮಾರ್ ಅವರ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.

    ದಾವಣಗೆರೆಯಲ್ಲಿ ಭದ್ರಾ ನೀರಿಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಜಾಥಾ ಆರಂಭಕ್ಕೂ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
    ರೈತ ಸಂಘದ ಸ್ವಯಂಘೋಷಿತ ಅಧ್ಯಕ್ಷನಂತಿರುವ ಎಚ್.ಆರ್.ಬಸವರಾಜಪ್ಪ ಮತ್ತು ಕೆ.ಟಿ.ಗಂಗಾಧರ್ ಮಾತು ಕೇಳಿ ಸಚಿವರು ದಾವಣಗೆರೆ ಜಿಲ್ಲೆಯ ರೈತರಿಗೆ ನೀರು ನೀಡದಿರುವುದು ಸರಿಯಲ್ಲ. ಒಂದು ಟಿಎಂಸಿಗೆ ಎಷ್ಟು ಕ್ಯೂಸೆಕ್, ಘನಅಡಿ ಪರಿಮಾಣವಿದೆ ಎಂಬ ಮಾಹಿತಿಯೇ ತಿಳಿಯದ ಸಚಿವರು, ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳಿಲ್ಲದೆ ಏಕಪಕ್ಷೀಯ ನಿರ್ಣಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕೆಆರ್‌ಎಸ್ ಜಲಾಶಯ ಕೇವಲ 35 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ, ಅದಕ್ಕಿಂತಲೂ ದೊಡ್ಡದಾದ ಭದ್ರಾ ಜಲಾಶಯ 71.56 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಕಾವೇರಿ ಜಲಾನಯನ ಪ್ರದೇಶ ದೊಡ್ಡದಲ್ಲ. ಆದರೂ ಮಂಡ್ಯ ಮಾತ್ರ ಗಮನ ಸೆಳೆಯುತ್ತಿದೆ. ಮಧ್ಯಕರ್ನಾಟಕದ ರೈತರ ಸಮಸ್ಯೆ ಸರ್ಕಾರವನ್ನು ತಲುಪಿಲ್ಲ ಎಂದರು.
    ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ 100 ದಿನ ನೀರು ಹರಿಸುವ ಭರವಸೆ ನೀಡದಿದ್ದರೆ ರೈತರು ಭತ್ತವನ್ನೇ ಬೆಳೆಯುತ್ತಿರಲಿಲ್ಲ. ಸಾಲ ಮಾಡಿ ಭತ್ತ ನಾಟಿದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಇದು ಎಮ್ಮೆ ಚರ್ಮದ ಸರ್ಕಾರ ಎಂದು ಟೀಕಿಸಿದರು.
    ಮುಖಂಡ ಡಾ. ರವಿಕುಮಾರ್ ಮಾತನಾಡಿ ಭದ್ರಾ ಅಚ್ಚುಕಟ್ಟಿಗೆ ನೀರು ಸಿಗದಿದ್ದರೆ ಎಲ್ಲರಿಗೂ ಅಪಾಯವಿದೆ. ಇದು ಕೇವಲ ರೈತರ ಸಮಸ್ಯೆಯಲ್ಲ ಎಂಬುದನ್ನು ತಿಳಿದು ಪ್ರತಿಯೊಬ್ಬರೂ ಅನ್ನದಾತರ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಹೇಳಿದರು.
    ಪುನೀತ್ ಮಾತನಾಡಿ ರೈತರಿಗೆ ಮಾತ್ರ ನೀರು ಬೇಕಿಲ್ಲ. ಎಲ್ಲ ಜನಪ್ರತಿನಿಧಿ, ಸಾಮಾನ್ಯರಿಗೂ ಬೇಕಾಗಿದೆ. ಭದ್ರಾ ನೀರು ಹರಿವು ಕುರಿತು ಜಿಲ್ಲಾಡಳಿತಕ್ಕೆ ನೀಡಿದ ಗಡುವು ಮುಗಿದಿದೆ. ರೈತರ ಹೋರಾಟ ತೀವ್ರವಾಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts