More

    ಗಿಳಿವಿಂಡು ಕಾರ್ಯಕ್ರಮ ನಾಳೆ

    ದಾವಣಗೆರೆ: ಪಕ್ಷಿ ತಜ್ಞರು ದೃಢಪಡಿಸಿದಂತೆ ದಾವಣಗೆರೆ ನಗರದ ಮಧ್ಯಭಾಗದಲ್ಲಿ ಹೆಚ್ಚಿನ ಗಿಳಿಗಳು ವಾಸಿಸುತ್ತಿವೆ. ಸಾರ್ವಜನಿಕರು, ಮಕ್ಕಳಲ್ಲಿ ಪಕ್ಷಿ ಪ್ರೇಮದ ಬಗ್ಗೆ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಜ.5ರಂದು ಸಂಜೆ 5-30ಕ್ಕೆ ‘ಗಿಳಿವಿಂಡು ನೋಡೋಣ ಬನ್ನಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಾವಣಗೆರೆ ವಿಳಿವಿಂಡು ಬಳಗದ ಸಹಯೋಗದಲ್ಲಿ ಜನತಾಬಜಾರ್‌ನ ಟೆರೇಸ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ನಗರಪಾಲಿಕೆ ಸುತ್ತಮುತ್ತ, ಗಡಿಯಾರ ಕಂಬ ಇತ್ಯಾದಿ ಕಡೆಗಳ ಮರಗಳಲ್ಲಿ ಸುಮಾರು 30 ಸಾವಿರದಷ್ಟು ಗಿಳಿಗಳು ವಾಸಿಸುತ್ತಿವೆ. ಇಲ್ಲಿಂದ 150 ಕಿ.ಮೀವರೆಗೆ ದೂರ ಕ್ರಮಿಸಿ ಸಂಜೆ 6-30ಕ್ಕೆ ತಮ್ಮ ಆವಾಸಸ್ಥಾನಕ್ಕೆ ಮರಳಲಿವೆ. ಬೆಳಗ್ಗೆ ಮತ್ತೆ ಎಂದಿನಂತೆ ಹೊರಗಡೆ ತೆರಳುತ್ತವೆ ಎಂದು ಹೇಳಿದರು.
    ಈಗಾಗಲೆ ಗಿಳಿಗಳ ಸಂತತಿ ಕಂಡುಬಂದಿರುವ ಸ್ಥಳವನ್ನು ಸಂರಕ್ಷಿತ ಸ್ಥಳವಾಗಿ ಘೋಷಿಸಬೇಕೆಂದು ಪಾಲಿಕೆಗೆ ಮನವಿ ಮಾಡಲಾಗಿದ್ದು, ಇದರ ಪ್ರಕ್ರಿಯೆ ನಡೆಯುತ್ತಿದೆ. ಗಿಳಿಗಳು ವಾಸಿಸುವ ಅರಳಿ, ಆಲ ಮೊದಲಾದ ವಿಶಾಲ ಮರಗಳಲ್ಲಿ ವಾಸಿಸಲಿವೆ. ಹೀಗಾಗಿ ಅವುಗಳಿರುವ ಮರಗಳನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದರು.
    ಅಂದಿನ ಕಾರ್ಯಕ್ರಮವನ್ನು ಮೇಯರ್ ವಿನಾಯಕ ಪೈಲ್ವಾನ್ ಉದ್ಘಾಟಿಸುವರು. ದಾವಣಗೆರೆ ವಿವಿಯ ಪ್ರಾಧ್ಯಾಪಕ ಪ್ರೊ. ಶಿಶುಪಾಲ್ ಉಪನ್ಯಾಸ ನೀಡುವರು. ಜನತಾಬಜಾರ್ ಅಧ್ಯಕ್ಷ ಗುರುಸ್ವಾಮಿ, ಪತ್ರಕರ್ತ ಪೇಪರ್ ಚಂದ್ರಣ್ಣ, ಎಸ್‌ಬಿಎಂ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅಜಿತ್‌ಕುಮಾರ್ ಭಾಗವಹಿಸುವರು. ಆಯ್ದ ಶಿಕ್ಷಣ ಸಂಸ್ಥೆಗಳ ಮಕ್ಕಳು ಭಾಗವಹಿಸುವರು ಎಂದು ತಿಳಿಸಿದರು.
    ಗಿಳಿವಿಂಡು ಬಳಗದ ಸಂಚಾಲಕ ರಾಜಶೇಖರ ಸಕ್ಕಟ್ಟು ಮಾತನಾಡಿ ಗಿಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
    ಎಂ.ಜಿ. ಶ್ರೀಕಾಂತ್ ಮಾತನಾಡಿ ಗಿಳಿಗಳು ಸೂಕ್ಷ ಪಕ್ಷಿಗಳು. ಇವುಗಳು ನೆಲೆಸುವ ಕಡೆಗಳಲ್ಲಿ ಸಾರ್ವಜನಿಕರು ಪಟಾಕಿ ಹೊಡೆಯದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಗಿಳಿಗಳು ವಾಸಸ್ಥಾನ ತೊರೆಯಬಹುದು ಎಂದರು. ಅಶೋಕ್, ವಸಂತ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts