More

    ಗಾಂಧಿಗಂಜ್ ಮಾರುಕಟ್ಟೆ ಬಂದ್

    ಬೀದರ್: ಪ್ಯಾಕ್ ಮಾಡಿದ ಎಲ್ಲ ಆಹಾರಧಾನ್ಯ ಹಾಗೂ ಬೇಳೆ ಕಾಳುಗಳ ಮೇಲೆ ಶೇ.5 ಜಿಎಸ್ಟಿ ಜಾರಿ ವಿರೋಧಿಸಿ ವ್ಯಾಪಾರಿಗಳು ನಗರದಲ್ಲಿ ಶನಿವಾರ ದಾಲ್ಮಿಲ್ ಮತ್ತು ಗಾಂಧಿಗಂಜ್ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ಯಾವುದೇ ದಾಲ್ಮಿಲ್ ಕಾರ್ಯನಿರ್ವಹಿಸಲಿಲ್ಲ. ಗಾಂಧಿಗಂಜ್ನ ಅಡತ್, ಆಹಾರಧಾನ್ಯ ಅಂಗಡಿಗಳು ಸಂಪೂರ್ಣ ಮುಚ್ಚಿದ್ದವು. ಹೀಗಾಗಿ ಪ್ರಮುಖ ಮಾರುಕಟ್ಟೆ ಪರಿಸರ ಬಿಕೋ ಎನ್ನುತ್ತಿತ್ತು.
    ಬೀದರ್ ದಾಲ್ಮಿಲ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಗಾಂಧಿಗಂಜ್ ವ್ಯಾಪಾರಿಗಳು ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಿದರು.

    ಮೊದಲು ನೋಂದಾಯಿತ ಉತ್ಪನ್ನಗಳಿಗೆ ಮಾತ್ರ ಜಿಎಸ್ಟಿ ವಿಧಿಸಲಾಗಿತ್ತು. ಇದೀಗ ನೋಂದಾಯಿಸದ ಉತ್ಪನ್ನಗಳಿಗೂ ಜಿಎಸ್ಟಿ ಜಾರಿಗೊಳಿಸುವುದರಿಂದ ರೈತರು ಮತ್ತು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಪ್ಯಾಕ್ ಮಾಡಿದ ಎಲ್ಲ ಆಹಾರಧಾನ್ಯ ಹಾಗೂ ಬೇಳೆಗಳ ಮೇಲೆ ಜಿಎಸ್ಟಿ ಜಾರಿ ಕ್ರಮಕ್ಕೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಕರ್ಾರ ತಕ್ಷಣ ತನ್ನ ನಿಧರ್ಾರ ಕೈಬಿಡಬೇಕು ಎಂದು ಆಗ್ರಹಿಸಿದರು.

    ದಾಲ್ಮಿಲ್ ಓನರ್ಸ್ ಅಸೋಸಿಯೇಷನ್ ಕಾರ್ಯದಶರ್ಿ ಬಸವರಾಜ ಧನ್ನೂರ, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ ಬಿರಾದಾರ್ ಗುನ್ನಳ್ಳಿ, ಪ್ರಮುಖರಾದ ಬಸವರಾಜ ಭಂಡೆ, ಶ್ರೀನಿವಾಸ ರೇಜಂತಲ್, ಶಿವಾನಂದ ಗುನ್ನಳ್ಳಿ, ಗೋವಿಂದರಾವ ನೀಲಮನಳ್ಳಿ, ನೀಲೇಶ್ ಸಿಂದೋಲ್, ರವೀಂದ್ರ ಮಾಡೆ, ಗುಂಡಪ್ಪ ಎಮ್ಮೆ ನಿಯೋಗದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts