More

    ಗರಸಂಗಿ ಹಳ್ಳದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ

    ಕೊಲ್ಹಾರ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ-218ರ ಎಚ್‌ಪಿ ಪೆಟ್ರೋಲ್ ಬಂಕ್ ಸಮೀಪದ ಗರಸಂಗಿ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.

    ಮಲ್ಲನಗೌಡ ಪಾಟೀಲ ಅವರ ಜಮೀನಿನ ಪಕ್ಕದಲ್ಲಿ ಹಾದು ಹೋಗುವ ಗರಸಂಗಿ ಹಳ್ಳದ ತೋಟಗಳ ಸಾಲಿನಲ್ಲಿ ಬೆಳೆದಿದ್ದ ಬಿದಿರಿನ ಗಿಡಗಳು, ಕುರುಚಲ ಗಿಡಗಳಿಗೆ ಹೊತ್ತಿ ಬೆಂಕಿಯ ಜ್ವಾಲೆ ಹೆಚ್ಚಾಗಿ ಹರಡಿತು. ಅಷ್ಟರಲ್ಲಿ ಬೆಂಕಿಯನ್ನು ನೋಡಿದವರು ನಂದಿಸಲು ಪ್ರಯತ್ನಿಸಿ ಸಾಧ್ಯವಾಗದೆ ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದರು.

    ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿದ್ದ ಬೆಂಕಿ ಸ್ಥಳಕ್ಕೆ ಬೀಳಗಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ನಂದಿಸಿದರು. ಬೆಂಕಿ ಪ್ರಮಾಣ ಹೆಚ್ಚಾಗಿದ್ದರೆ ಪಕ್ಕದಲ್ಲಿದ್ದ ನೂರಾರು ಗಿಡಮರಗಳಿಗೆ ಬೆಂಕಿ ತಗುಲುವ ಜತಗೆ ಅಕ್ಕಪಕ್ಕದಲ್ಲಿದ್ದ ನೂರಾರು ರೈತರ ಜಮೀನಿನ ಬೆಳೆಗಳಿಗೆ ಹಾನಿಯಾಗುತ್ತಿತ್ತು. ಬೆಂಕಿ ಹತ್ತಿದ್ದ ಪ್ರದೇಶ ಕೆರೆ ನೀರು ಹರಿಯುವ ಹಳ್ಳವಾಗಿದ್ದು ಕುರುಚಲ ಗಿಡಗಳು, ಬಿದಿರಿನ ಗಿಡಗಳು ಮುಳ್ಳಿನ ಗಿಡಗಳು ಹಾಗೂ ಕಾಡು ಮರಗಳು ಹೇರಳವಾಗಿ ಬೆಳೆದಿವೆ. ಬೆಂಕಿಯ ಜ್ವಾಲೆಗೆ ಬಿದಿರಿನ ಗಿಡಗಳು ಆಹುತಿಯಾಗಿವೆ.

    ಬೆಂಕಿ ನಂದಿಸುವ ಸಮಯದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಬಾಲಗೊಂಡ, ಹಣಮಂತ ಬಾಲಗೊಂಡ, ಮಲ್ಲಪ್ಪ ಪೂಜಾರಿ, ಹಣಮಂತ ಉಪ್ಪಾರ ಇತರರಿದ್ದರು.

    ಕೊಲ್ಹಾರ ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ಅಗ್ನಿ ದುರಂತ ಸಂಭವಿಸಿದರೆ ತಡೆಗಟ್ಟಲು ಅಗ್ನಿಶಾಮಕ ಠಾಣೆ ವ್ಯವಸ್ಥೆ ಇಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸಿದರೆ ಸಾಕಷ್ಟು ಹಾನಿಯಾಗುವ ಸಾಧ್ಯತೆ ಇದೆ. ಕೂಡಲೇ ಸಚಿವ ಶಿವಾನಂದ ಪಾಟೀಲ ಅವರು ತಾಲೂಕಿಗೆ ಅಗ್ನಿಶಾಮಕ ಠಾಣೆ ವ್ಯವಸ್ಥೆ ಮಾಡಿ ಕೊಡಬೇಕು.
    ರಮೇಶ ಬಾಲಗೊಂಡ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts