More

    ಗಬ್ಬೆದ್ದು ನಾರುತ್ತಿದೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೂತ್ರಿಗೃಹ

    ಎಂ.ಕೆ.ಹುಬ್ಬಳ್ಳಿ: ಪ್ರಯಾಣಿಕರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಎರಡು ಬದಿಯಲ್ಲಿ ಅಳವಡಿಸಿರುವ ಮೂತ್ರಿ ಗೃಹಗಳು ನಿರ್ವಹಣೆ ಕೊರತೆಯಿಂದ ದುರ್ನಾತ ಬೀರುತ್ತಿವೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಹಲವು ವರ್ಷಗಳೇ ಗತಿಸಿದರೂ ಬಸ್ ನಿಲ್ದಾಣದ ಬಳಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಶಾಶ್ವತ ಶೌಚಗೃಹ ಹಾಗೂ ಮೂತ್ರಗೃಹ ನಿರ್ಮಿಸಲಾಗಿಲ್ಲ. ತಾತ್ಕಾಲಿಕವಾಗಿ ಅಳವಡಿಸಿರುವ ಮೂತ್ರಿ ಗೃಹಗಳು ಗಬ್ಬೆದ್ದಿದ್ದು, ಮಹಿಳಾ ಪ್ರಯಾಣಿಕರ ಪಾಡಂತೂ ಹೇಳತೀರದಂತಾಗಿದೆ.
    ಸ್ಥಳೀಯ ಪಟ್ಟಣ ಪಂಚಾಯಿತಿಯು ಪ್ರಯಾಣಿಕರ, ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದ ಬಸ್ ನಿಲುಗಡೆ ಸ್ಥಳದಲ್ಲಿ ಹೆದ್ದಾರಿಯ ಎರಡು ಬದಿಯಲ್ಲಿ ಒಂದೊಂದು ಮೂತ್ರಿ ಗೃಹ ಅಳವಡಿಸಿದೆ. ಆದರೆ, ಅವುಗಳ ನಿರ್ವಹಣೆ ಕೊರತೆ ಹಾಗೂ ಅಲ್ಲಿ ನಿರ್ಮಾಣವಾದ ಗಲೀಜು ವಾತಾವರಣದಿಂದ ಮೂರ್ತಿಗೃಹಗಳು ಉಪಯೋಗಕ್ಕೆ ಬಾರದಂತಾಗಿವೆ. ತಕ್ಷಣ ಮೂತ್ರಿಗೃಹಗಳ ಸ್ವಚ್ಛತೆ ಹಾಗೂ ನಿರಂತರ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
    ಪಟ್ಟಣದ ಬಸ್ ನಿಲ್ದಾಣದ ಬಳಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಹೈಟೆಕ್ ಶೌಚಗೃಹ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿಯು ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ವರ್ಷಗಳೇ ಕಳೆದರೂ ವಾಣಿಜ್ಯ ಮಳಿಗೆಗಳು ಹಾಗೂ ಹೈಟೆಕ್ ಶೌಚಗೃಹ ನಿರ್ಮಾಣವಾಗಲಿಲ್ಲ. ಹೀಗಾಗಿ ಸಾರ್ವಜನಿಕರ ಪರದಾಟಕ್ಕೆ ಪರಿಹಾರ ಸಿಗದಂತಾಗಿದ್ದು, ಉಪಯೋಗವಾಗಬೇಕಿದ್ದ ಸರ್ಕಾರಿ ಜಾಗ ಹಾಗೇ ಬಿದ್ದಿದೆ ಎಂದು ಪಟ್ಟಣದ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
    ಅಭಿವೃದ್ಧಿಯ ಕನಸು ಹೊತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಟ್ಟಣ ಪಂಚಾಯತಿ ನೂತನ ಸದಸ್ಯರಿಗೆ, ಚುನಾವಣೆ ಕಳೆದು ಎರಡು ವರ್ಷ ಸಮೀಪಿಸಿದರೂ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಎಲ್ಲ ಜವಾಬ್ದಾರಿ ಅಧಿಕಾರಿಗಳ ಮೇಲೆ ಬಿದ್ದಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೇ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts