More

    ಗದಗ: ಹಂಪಿ ಪುರಾತತ್ತ್ವ ಸರ್ಕೀಟ್ ನಲ್ಲಿ ಲಕ್ಕುಂಡಿ ಸೇರ್ಪಡೆ: ಸಿಎಂ ಬೊಮ್ಮಾಯಿ

    • ಹಂಪಿ ಸರ್ಕೀಟ್ ನಲ್ಲಿ ಲಕ್ಕುಂಡಿ ಸೇರ್ಪಡೆ: ಸಿಎಂ ಘೋಷಣೆ.
    • ಜಿಲ್ಲೆಯಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣದ ಭರವಸೆ
    • ಟೆಂಡರ್ ಆಗಿರುವ ಶಿರಹಟ್ಟಿಯ ಜಾಲವಾಡಗಿ ಏತನೀರಾವರಿ ಯೋಜನೆಗೆ ಶಿಘ್ರ ಶಂಕು ಸ್ಥಾಪನೆ: ಸಿಎಂ

    ಗದಗ: ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ, ಲಕ್ಕುಂಡಿ

    ಲಕ್ಕುಂಡಿ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿದ ಸಿಎಂ ಬೊಮ್ಮಾಯಿ ಕ್ಷೇತ್ರದ ನೀರಾವರಿ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಿ, ಪುರಾತತ್ವ ಇಲಾಖೆಯಡಿ ಇಲ್ಲಿನ ದೇವಸ್ಥಾನಗಳ ರಕ್ಷಣೆಯ ಭರವಸೆ ನೀಡಿದ್ದಾರೆ.

    ಗದಗ ಜಿಲ್ಲೆ ಪುರಾತತ್ವದ ಅತೀ ದೊಡ್ಡ ಸಂಪತ್ತು. ಪುರಾತತ್ವಕ್ಕೆ ಸಂಬಂಧಿಸಿದಂತೆ ಹಂಪಿ ಮತ್ತು ಮೈಸೂರಿನಲ್ಲಿ ಸರ್ಕೀಟ್ ನಿರ್ಮಾಣ ಮಾಡುತ್ತಿದ್ದು, ಹಂಪಿ ಸರ್ಕೀಟ್ ನಲ್ಲಿ ಲಕ್ಕುಂಡಿಯನ್ನು ಸೇರ್ಪಡೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

    ದೀಪ ಬೆಳಗಿಸುವ ಮೂಲಕ ಶುಕ್ರವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಒಂದು ಕೈಗಾರಿಕಾ ಟೌನ್ ಶಿಪ್ ಮಾಡಲು ಸರ್ಕಾರ ಸಿದ್ಧ. ಭೂಮಿ ಒದಗಿಸಿ ನೀಡುವ ಜವಾಬ್ದಾರಿ ಕೈಗಾರಿಕಾ ಇಲಾಖೆ ಹೊಂದಿದ್ದು, ಆದಷ್ಟು ಬೇಗ ಭೂಮಿ ಒದಗಿಸಿ ಕೊಡಿ ಎಂದು ವೇದಿಕೆ ಮೇಲಿದ್ದ ಕೈಗಾರಿಕಾ ಸಚಿವ ಮುರಗೇಶ ನಿರಾಣಿಗೆ ಸೂಚಿಸಿದರು. ಮುಂದುವರಿದು, ಶಿರಹಟ್ಟಿಯ ಜಾಲವಾಡಗಿ ಏತ ನೀರಾವರಿಗೆ ಶೀಘ್ರವೇ ಶಂಕು ಸ್ಥಾಪನೆ ಮಾಡುವ ಭರವಸೆ ನೀಡಿದರು.

    ಲಕ್ಕುಂಡಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು.
    ಆಳುವ ಮತ್ತು ಆಡಳಿತ ಮಾಡುವ ಮಾನದಂಡಗಳೇ ಬೇರೆ. ಈ ವಾಕ್ಯಗಳು ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಕಂಡು ಬಂದಿವೆ. ಆದರೆ, ಈಗೀನ ವ್ಯವಸ್ಥೆಯಲ್ಲಿ ಆಳುವನು ಆಡಳಿತಗಾರನಾಗಲು, ಆಡಳಿತಗಾರ ಆಳುವವನಾಗಲು ಹಂಬಲಿಸುತ್ತಿರುವುದು ವಿಪರ್ಯಾಸ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೇದ, ಸಚಿವರಾದ ಮುರುಗೇಶ ನಿರಾಣಿ, ಬಿ. ಶ್ರಿರಾಮುಲು, ಭೈರತಿ ಬಸವರಾಜ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್.ವಿ. ಸಂಕನೂರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಸೀನ್, ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಇತರರು ಇದ್ದರು.

    ಕೋಟ್:
    12 ನೇ ಶತಮಾನದಲ್ಲಿ ಲಕ್ಕುಂಡಿಯ ವೈಭವ ಮೇರು ಶಿಖರದಲ್ಲಿತ್ತು. ಮುಂದಿನ ಪೀಳಿಗೆಗೆ ಲಕ್ಕುಂಡಿ ಮಹಿಯೆ ತಿಳಿ ಹೇಳುವ ಉದ್ದೇಶ ಲಕ್ಕುಂಡಿ ಉತ್ಸವ ಹೊಂದಿದೆ. ಹೊಯ್ಸಳರ ಕಾಲದ ದ್ವಿತೀಯ ರಾಜಧಾನಿ ಆಗಿತ್ತು. ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲದಲ್ಲಿ ಠಂಕಶಾಲೆಯಾಗಿತ್ತು.

    • ಸಿ.ಸಿ. ಪಾಟೀಲ, ಸಚಿವ

    ಕೋಟ್:
    ಕೋವಿಡ್ ಸಂದರ್ಭದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳನ್ನು ವಿಶ್ವವೇ ಹೊಗಳಿದೆ. ದೇಶದ ವ್ಯಾಕ್ಸಿನಗಳು ವಿದೇಶಕ್ಕೆ ರಫ್ತಾದವು. ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಇಟ್ಟಿದೆ.

    • ಭೈರತಿ ಬಸವರಾಜ, ನಗರಾಭಿವೃದ್ಧಿ ಸಚಿಚ

    ಸಿಎಂ ಹೈಲೆಟ್ಸ್ ಪಾಯಿಂಟ್

    *ಹುಲಿಗುಡ್ಡ ನೀರಾವರಿಯನ್ನು ಬೃಹತ್ ನೀರಾವರಿ ಶಿಂಗಟಾಲೂರು ಯೋಜನೆಯಾಗಿ ಪರಿವರ್ತನೆ ಮಾಡಲಾಗಿದೆ.

    • ಶಿಂಗಟಾಲೂರು ಯೋಜನೆ ಮೂಲಕ ಗದಗ ರೋಣ ಶಿರಹಟ್ಟಿಗೆ ನೀರು ಹರಿಸುವ ಭರವಸೆ.
    • ಕಳಸಾ ಬಂಡೂರಿಗೆ ಸಂಬಂಧಿಸಿದಂತೆ ನ್ಯಾಯಾಧೀಕರಣ ಆದೇಶವನ್ನು ಕೇಂದ್ರ ಸರ್ಕಾರ ನೋಟೀಫೈ ಮಾಡಿದೆ.
    • ಮಹದಾಯಿ ಯೋಜನೆ ಜೋಡಣೆ ಮಾಡಿ ಸವದತ್ತಿ ಎಲ್ಲಮ್ಮನ ಪಾದದಿಂದ ಬನಶಂಕರಿ ದೇವಿ ಪಾದದ ವರೆಗೂ ನೀರು ಹರಿಸುವ ಯೋಜನೆಯ ಭರವಸೆ.
      *ದುಡ್ಡೆ ದೊಡ್ಡಪ್ಪ ಅಲ್ಲ. ದುಡಿಮೆ ದೊಡ್ಡಪ್ಪ. ಇದನ್ನೇ ಪ್ರಧಾನಿ ಹೇಳಿದ್ದಾರೆ. ಸಬ್ ಕಾ ಸಾತ್, ವಿಕಾಸ್ ಎಂಬುದು ನಮ್ಮ ಸಂಕಲ್ಪ.
    • ಎಲ್ಲ ದುಡಿಯುವ ವರ್ಗ ಒಂದೇ ಜಾತಿ, ಧರ್ಮ ಎಂದು ನಂಬಿ ಎಲ್ಲ ಸಮುದಾಯಗಳಿಗೆ ಹಲವು ಯೋಜನೆಗಳು ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts