More

    ಗತವೈಭವ ಸಾರುವ ತಾಮ್ರದ ತಾಳೆಗರಿ

    ಮುಳಬಾಗಿಲು: ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ಸಿಕ್ಕ ತಾಮ್ರದ ತಾಳೆಗರಿ, ನಾಡಿನ ಗತವೈಭವಕ್ಕೆ ಪೂರಕವಾಗಿದ್ದು ಕನ್ನಡ ಪುರಾತನ ಭಾಷೆ ಎಂಬುದಕ್ಕೆ ಪ್ರಮುಖ ಪುರಾವೆಯಾಗಿದೆ. ಹೀಗಾಗಿ ಕನ್ನಡಕ್ಕೆ 2008ರಲ್ಲಿ ಶಾಸೀಯ ಸ್ಥಾನಮಾನ ಪಡೆಯುವಾಗ ಚೆನ್ನೈ ಕೋರ್ಟ್‌ನಲ್ಲಿ ವಾದ ಮಂಡಿಸಲು ಈ ಪುರಾತನ ಶಾಸನ ಸಹಾಯಕ್ಕೆ ಬಂದಿದೆ.

    ಮುಡಿಯನೂರಿನ ಡಾ.ದಕ್ಷಿಣಮೂರ್ತಿ ಎಂಬ ವೈದ್ಯರ ಮನೆಯಲ್ಲಿ ಸಿಕ್ಕ ಶಾಸನಗಳಿಂದ ಕನ್ನಡಭಾಷೆ, ಲಿಪಿ ಅತಿ ಪುರಾತನ ಎಂಬುದು ಸಾಬೀತಾಗಿದೆ.

    ಮುಡಿಯನೂರಿನಲ್ಲಿ ಸೀತಾರಾಘವ ರಾಜರಾಜೇಶ್ವರಿ ಬ್ರಹ್ಮ, ದಕ್ಷಿಣಾಮೂರ್ತಿ ದೇವಾಲಯ ಹಾಗೂ ಸೀತಾರಾಘವ ಆರೋಗ್ಯ ಆಶ್ರಮ ನಡೆಸುತ್ತಿರುವ ವೆಂಕಟರಾಮಶಾಸಿ ಎಂಬುವರಿಗೆ ಮಠದಲ್ಲಿ ಹಲವು ವರ್ಷಗಳ ಹಿಂದೆ ಸಿಕ್ಕಿದ್ದವು ಎನ್ನಲಾಗಿದೆ. ಕ್ರಿ.ಶ. 261ರಲ್ಲಿ ಶುಕ್ಲಪಕ್ಷ ಸೋಮವಾರದಂದು ವಧು ವಲ್ಲಭ ಮಲ್ಲಾದೇವಾನಂದವರ್ಮ ಎಂಬಾತ ಮೂಡಿಯನೂರು ಗ್ರಾಮದ ನಿರ್ವಹಣೆಯನ್ನು ಸಂಪೂರ್ಣವಾಗಿ ಗ್ರಾಮಸ್ಥರಿಗೆ ಬಿಟ್ಟುಕೊಟ್ಟಿರುವುದಾಗಿ ತಾಮ್ರದ ತಾಳೆ ಗರಿಗಳಲ್ಲಿ ಬರೆಯಲಾಗಿದೆ. ಇದರೊಂದಿಗೆ ತಾಲೂಕಿನ ಆವಣಿ ಹೋಬಳಿ ಕೊತ್ತಮಂಗಲ ಗ್ರಾಮದ ಪ್ರಸ್ತಾಪವೂ ಇದೆ. ಇತಿಹಾಸಕಾರರಾಗಿದ್ದ ಪಿ.ವಿ.ವೆಂಕಟೇಶನ್ ಹಾಗೂ ಸಿ.ಎಸ್.ಶ್ರೀರಾಮನ್ ಈ ಬಗ್ಗೆ ಗೆಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

    ಕೋಲಾರ ಜಿಲ್ಲೆಯಲ್ಲಿರುವ ಶಾಸನಗಳ ಬಗ್ಗೆ ಹಾಗೂ ಮೂಡಿಯನೂರಿನಲ್ಲಿ ಸಿಕ್ಕ ಮಾಹಿತಿಯನ್ನು ಇತಿಹಾಸಕಾರ ಬಿ.ಲಿವಿಸ್ರೈಸ್ ಸಹ 1905ರಲ್ಲಿ ಮಂಗಳೂರು ಬೆಸೆಲ್ ಮಿಷನ್ ಪ್ರೆಸ್‌ನಲ್ಲಿ ಪ್ರಕಟಿಸಿದ್ದಾರೆ. ಅವರ ಪ್ರಕಾರ ಇದು ಪೂರ್ವದ ಹಳೆಗನ್ನಡ ಅಕ್ಷರ. ಈ ಶಾಸನವನ್ನು ಡಾ.ದಕ್ಷಿಣಮೂರ್ತಿ ಕಾಪಾಡಿಕೊಂಡು ಬಂದಿದ್ದಾರೆ.

    ಕೆಲವರು ಒಂದು ಲಕ್ಷ ರೂ. ಕೊಡುತ್ತೇವೆ ತಾಮ್ರದ ಶಾಸನ ಕೊಡಿ ಎಂದರು. ಆದರೆ ಅದರ ಮಹತ್ವ ಅರಿವಿಗೆ ಬಂದ ನಂತರ ಮನೆಯಲ್ಲೇ ಕಾಪಾಡಿಕೊಂಡಿದ್ದೇನೆ. ಅಧ್ಯಯನಗಾರರು ಅದನ್ನು ಪರಿಶೀಲಿಸಿದ್ದಾರೆ. 8ನೇ ಶತಮಾನದಲ್ಲಿ ಮುಡಿಯನೂರು ಪ್ರಾಮುಖ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿ.
    ಡಾ.ದಕ್ಷಿಣಾಮೂರ್ತಿ, ಮುಡಿಯನೂರಿನ ಹಿರಿಯ

    ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿನ ಗಡಿಭಾಗಗಳು ಬಾಣರ ಆಳ್ವಿಕೆಗೆ ಒಳಪಟ್ಟಿದ್ದು, ಕೋಲಾರ ಜಿಲ್ಲೆ ಪಲ್ಲವರ, ನೊಳಂಬ, ಗಂಗರ ಕಾಲದಲ್ಲಿ ಆಳ್ವಿಕೆಗೆ ಒಳಪಟ್ಟಿದೆ. 8ನೇ ಶತಮಾನದ ತಾಮ್ರದ ಈ ಶಾಸನ ಸಂಪೂರ್ಣ ಸಂಸ್ಕೃತ ಮತ್ತು ಹಳೆಗನ್ನಡದಲ್ಲಿದೆ. ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ಸಿಗಲು ಪ್ರಮುಖ ಸಾಕ್ಷಿಗಳಲ್ಲಿ ಒಂದಾಗಿದೆ.
    ಕುರುಡುಮಲೆ ಡಾ.ಕೆ.ಆರ್.ನರಸಿಂಹನ್, ಸಂಶೋಧಕ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts