More

    ಖೊಟ್ಟಿ ದಾಖಲೆ ಸೃಷ್ಟಿಸಿ ನೇಮಕ ತನಿಖೆ ನಡೆಸಲು ಒತ್ತಾಯ

    ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಹಲವು ಗುತ್ತಿಗೆ ನೌಕರರು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನೇಮಕಗೊಂಡಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಪ್ರಮೋದ ಮೇತ್ರಿ ಆಗ್ರಹಿಸಿದರು.
    ೨೦೧೨ರಲ್ಲಿ ಸರ್ಕಾರ ದಿನಗೂಲಿ ನೌಕರರಿಗೆ ವೇತನ ಸಹಿತ ರಜೆ ಸೇರಿ ಇತರೆ ಸೌಲಭ್ಯ ಒದಗಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ೨೦೧೪ರಲ್ಲಿ ನೇಮಕಗೊಂಡವರು ಈ ಸೌಲಭ್ಯ ಪಡೆಯಲು ಅನರ್ಹರಾಗಿದ್ದಾರೆ. ಆದರೂ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಖೊಟ್ಟಿ ದಾಖಲೆ ಸೃಷ್ಟಿಸಿ ಈ ಹುz್ದÉಗಳಿಗೆ ನೇಮಕಗೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಚಿಂಚೋಳಿ ತಾಲೂಕು ಪಂಚಾಯಿತಿ ಹಿಂದಿನ ಅಧಿಕಾರಿಯೊಬ್ಬರು ಅನರ್ಹರನ್ನು ನೌಕರರ ಪಟ್ಟಿಗೆ ಸೇರಿಸಿ, ಅರ್ಹರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಆದ್ದರಿಂದ ಅರ್ಹರಿಗೆ ಅವಕಾಶ ನೀಡಬೇಕು. ಅಕ್ರಮ ನೇಮಕ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
    ಸಮರ್ಥ ಸಜ್ಜನ್, ನಾಗೇಶ, ಭೀಮಾಶಂಕರ್, ಲಿಂಗರಾಜ ಸದಲಗಾ, ನಿತೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts