More

    ಕ್ಷೇತ್ರದ ಅಭಿವೃದ್ಧಿಗೆ 3,100 ಕೋಟಿ ರೂ. ಅನುದಾನ

    ರಾಮದುರ್ಗ: ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ 3,100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

    ತಾಲೂಕಿನ ಸೊಪ್ಪಡ್ಲ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದ ಸಮುದಾಯ ಭವನ, ಉದಪುಡಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ ಹೊಸಕೋಟೆ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ರಾಜೀವಗಾಂಧಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಹೊಸಕೋಟಿ ಗ್ರಾಮದಲ್ಲಿ 12 ಕೋಟಿ ರೂ. ಮೊತ್ತದ ರಸ್ತೆ, ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಇನ್ನೂ ಹಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಸಾಲಾಪುರ ಏತ ನೀರಾವರಿ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಸುತ್ತಮುತ್ತಲಿನ ರೈತರಿಗೆ ನೀರಾವರಿ ಭಾಗ್ಯ ಸಿಗಲಿದೆ. ಶಿಕ್ಷಣಕ್ಕಾಗಿ 320ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ. ನಿರಂತರ ವಿದ್ಯುತ್ ಪೂರೈಕೆಗಾಗಿ ಹೆಚ್ಚುವರಿ 4 ಕೇಂದ್ರಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ ಎಂದು ಹೇಳಿದರು.

    ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ಎಂದು ಜನತೆಯನ್ನು ಮರಳು ಮಾಡಲು ಹೊರಟಿದ್ದಾರೆ. ಅದರ ಕಡೆಗೆ ಜನತೆ ಕಿವಿಗೊಡಬಾರದು. ಮುಂಬರುವ ವಿಧಾನಸಭೆ ಚುನಾವಣೆ ನನ್ನ ಸ್ಪರ್ಧೆಯ ಕೊನೆಯ ಚುನಾವಣೆಯಾಗಿದೆ. ಜನಪರ, ರೈತಪರ ಕೆಲಸಗಳನ್ನು ನೋಡಿ ನನಗೆ ಮತ್ತೊಮ್ಮೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ, ಹೊಸಕೋಟಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಮೆಳ್ಳೀಕೇರಿ, ಉಪಾಧ್ಯಕ್ಷೆ ಮಂಗಲಾ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಪಾಂಡಪ್ಪ ಚಿಕ್ಕಜಂಬಗಿ, ಪಿಡಿಒ ಎಂ.ಐ. ಬಳ್ಳಾರಿ, ಉದಪುಡಿ ಗ್ರಾಪಂ ಅಧ್ಯಕ್ಷೆ ಸುನಂದಾ ಪೂಜಾರ, ಸದಸ್ಯ ಎಚ್.ಕೆ. ದಾಸರ, ಸುನೀಲಗೌಡ ಪಾಟೀಲ, ಹನಮಂತ ಕಳ್ಳಿ, ಗ್ರಾಮದ ಮುಂಂಡ ಎಸ್.ಬಿ. ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts