More

    ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿರುವೆ


    ಯಾದಗಿರಿ: ತೆಲಂಗಾಣದ ಗಡಿಗೆ ಅಂಟಿಕೊಂಡ ಗುರುಮಠಕಲ್ ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

    ಶನಿವಾರ ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ.ವೆಚ್ಛದಲ್ಲಿ ನಂದೆಪಲ್ಲಿ- ಮಾಧ್ವಾರ ಗ್ರಾಮದ ರಸ್ತೆ ಸುಧಾರಣೆ, ಸೈದಾಪುರ-ರಾಚನಳ್ಳಿ ಕ್ರಾಸ್ವರೆಗೆ 2 ಕೋಟಿ ರೂ.ವೆಚ್ಛದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಕಳೆದ 50 ವರ್ಷಗಳಲ್ಲಿ ಮತಕ್ಷೇತ್ರವನ್ನು ಹೊರಗಿನ ವ್ಯಕ್ತಿಗಳೇ ಆಳಿದ್ದಾರೆ. ಆದರೆ 2018ರಲ್ಲಿ ಮತದಾರರು ಬದಲಾವಣೆ ಬಯಸಿ ನನಗೆ ಆಶಿವರ್ಾದ ಮಾಡಿದ್ದಾರೆ ಎಂದರು.

    ಸಮ್ಮಿಶ್ರ ಸರ್ಕಾರ ಅಕಾರದಲ್ಲಿದ್ದಾಗ ನೂರಾರು ಕೋಟಿ ರೂ.ಅನುದಾನವನ್ನು ಕ್ಷೇತ್ರಕ್ಕೆ ತಂದಿರುವೆ. 60ಕ್ಕೂ ಹೆಚ್ಚು ಹಳ್ಳಿಗಳಲ್ಲಿಂದು ಒಂದಿಲ್ಲೊಂದು ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ವರ್ಷ ಮುಂಗಾರು ಮಳೆ ಹೆಚ್ಚಾಗಿದ್ದು ಹಲವು ವರ್ಷಗಳಿಂದ ಭತರ್ಿಯಾಗದ ಗ್ರಾಮೀಣ ಕೆರೆಗಳು ತುಂಬಿವೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಇನ್ನೊಂದೆಡೆ ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.

    ಕಳೆದ ನಾಲ್ಕು ವರ್ಷಗಳಲ್ಲಿ ಮಾಧ್ವಾರ ಗ್ರಾಪಂ ವ್ಯಾಪ್ತಿಯಲ್ಲಿ ಜನರ ಬೇಡಿಕೆಯಂತೆ 23 ಕೋಟಿ ರೂ.ಅನುದಾನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ 180 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ 22 ಕೆರೆಗಳನ್ನು ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿ ಟೆಂಡರ್ ಕರೆಯುವ ಹಂತದಲ್ಲಿದೆ ಇದರಿಂದ ಬರುವ ದಿನಗಳಲ್ಲಿ ಹಸಿರು ಕ್ರಾಂತಿಯಾಗಲಿದೆ ಮಾಧ್ವಾರ ಗ್ರಾಪಂಗೆ 8 ಕೆರೆಗಳು ಸೇರಿವೆ ಎಂದು ವಿವರಿಸಿದರು.

    ಜೆಡಿಎಸ್ ಮುಖಂಡ ಬಸಣ್ಣ ದೇವರಳ್ಳಿ ಮಾತನಾಡಿ, ಶಾಸಕ ಕಂದಕೂರ ಅವರು ಜನರಿಗೆ ಅನುಕೂಲತೆ ಮಾಡಿಕೊಡಲು ಯಾದಗಿರಿ ಹಾಗೂ ಗುರುಮಠಕಲ್ ಪಟ್ಟಣದಲ್ಲಿ ಜನ ಸಂಪರ್ಕ ಕಚೆೇರಿ ಆರಂಭಿಸಿದ್ದಾರೆ. ಎಲ್ಲ ವರ್ಗದ ಜನರಿಗೆ ಸ್ಪಂದಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಮುಖಂಡರು ನಾಲ್ಕು ವರ್ಷ ಕ್ಷೇತ್ರಕ್ಕೆ ಮುಖ ತೋರಿಸದೆ ಇದೀಗ ನಾಟಕವಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts