More

    ಕ್ವಾರಂಟೈನ್ ಕನ್ನಡ ಮೇಷ್ಟ್ರು ಸುದ್ದು

    ಸಾಗರ: ಕರೊನಾ ಲಾಕ್​ಡೌನ್ ಬಹುತೇಕರನ್ನು ಮನೆಯಲ್ಲಿ ಕಟ್ಟಿಹಾಕಿದ್ದು ಇದು ಹಲವು ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುವಂತಾಗಿದ್ದು ಗೊತ್ತಿರುವ ಸಂಗತಿ. ಲಾಕ್​ಡೌನ್ ಸಂದರ್ಭದ ವಿಚಾರಗಳನ್ನೇ ಇಟ್ಟುಕೊಂಡು ಹೆಗ್ಗೋಡಿನ ಯುವ ಮನಸ್ಸುಗಳು ಸೇರಿ ‘ಕ್ವಾರಂಟೈನ್ ಕನ್ನಡ ಮೇಷ್ಟ್ರು’ ಎನ್ನುವ 12 ನಿಮಿಷದ ಕಿರುಚಿತ್ರ ನಿರ್ವಿುಸಿದ್ದಾರೆ.

    ಪ್ರೖೆಮರಿ ಶಾಲೆಯಲ್ಲಿ ಕನ್ನಡ ಮೇಷ್ಟ್ರು ತಮ್ಮ ಮಕ್ಕಳ ಜತೆಯಲ್ಲಿ ಹೇಗೆ ಸಮಯ ಕಳೆಯುತ್ತಾರೆ ಮತ್ತು ಅವರಿಗೆ ಚಿಕ್ಕ ವಯಸ್ಸಿನಲ್ಲಿ ಬಹುಮುಖ್ಯ ವಿಚಾರಗಳನ್ನು ಮನನ ಮಾಡುವುದು ಮತ್ತು ಆಧುನೀಕರಣದ ಜಗತ್ತಿಗೆ ತೆರೆದುಕೊಳ್ಳುವ ತವಕದಲ್ಲಿ ಯಾಂತ್ರಿಕ ಬದುಕಿಗಿಂತ ಗ್ರಾಮ್ಯ ಜೀವನದ ಶ್ರೇಷ್ಠತೆಯನ್ನು ಕಿರುಚಿತ್ರ ಸಾರುತ್ತದೆ.

    ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದ ಛಾಯಾಚಿತ್ರ ಮತ್ತು ಸಂಕಲನದ ಜವಾಬ್ದಾರಿ ನಿರ್ವಹಿಸಿರುವ ಸಂಪದ ಎಸ್.ಭಾಗವತ್, ಈ ಕಿರುಚಿತ್ರ ನಿರ್ದೇಶಿಸಿದವರು ಚೇತನ್ ದೇವರಾಜ್. ಇವರು ಈಗಾಗಲೇ ಹಲವು ಉತ್ತಮ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಲಸದ ನಿಮಿತ್ತ ಹೆಗ್ಗೋಡಿಗೆ ಬಂದವರು ಲಾಕ್​ಡೌನ್​ನಿಂದ ಇಲ್ಲಿಯೇ ಉಳಿದರು. ಅವರು ನಮ್ಮ ಭಾಗದ ಯುವಕರನ್ನೆಲ್ಲ ಒಟ್ಟು ಸೇರಿಸಿ ಈ ಕಿರುಚಿತ್ರ ನಿರ್ವಿುಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದೆ. ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಕಂಡಿದ್ದು, ಯೂಟ್ಯೂಬ್​ನಲ್ಲಿ ಈಗಾಗಲೇ 6 ಸಾವಿರ ಜನರು ವೀಕ್ಷಿಸಿದ್ದಾರೆ ಎಂದರು.

    ಸುಶಾಂತ್ ಮುಂಗರವಳ್ಳಿ, ಅಮೋಘ ಹೆಗಡೆ, ಸಾಕ್ಷಿ ಎಸ್.ಭಾಗವತ್ ಕಿರುಚಿತ್ರದಲ್ಲಿ ನಟಿಸಿದ್ದು ಸಮರ್ಥ ಎಸ್.ರಾವ್ ಸಂಗೀತ ನೀಡಿದ್ದಾರೆ. ದರ್ಶನ್ ಎಚ್.ಎಸ್.ಧ್ವನಿಮುದ್ರಣ ಮಾಡಿಕೊಟ್ಟಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಸುಮ್ಮನೆ ಸಮಯ ಕಳೆಯುವವರು, ಸಮಯ ಕಳೆಯುವುದು ಹೇಗೆ ಎಂಬ ತೊಳಲಾಡಿದವರಿಗೆ ಕ್ವಾರಂಟೈನ್ ಕನ್ನಡ ಮೇಷ್ಟರು ಕಿರುಚಿತ್ರ ಸಕ್ರಿಯತೆಯ ಮಾರ್ಗ ತೋರಿಸಿದೆ.

    ಕ್ವಾರಂಟೈನ್​ನ ಈ ಸಂದರ್ಭದಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ ಮನೆಯ ಮಕ್ಕಳು ಮನೆಯಲ್ಲಿಯೇ ಇರಬೇಕಾದ ಸಂದರ್ಭ ಬಂದಾಗ ಅವರಿಗೆ ನಿಜವಾದ ಜೀವನ ದರ್ಶನವನ್ನು ಈ ಕಿರುಚಿತ್ರ ಮಾಡಿಕೊಟ್ಟಿದೆ. ನನಗೆ ಪಾತ್ರಧಾರಿಯಾಗಿ ನಟಿಸಿದ್ದು ತುಂಬ ಸಂತಸ ತಂದಿದೆ ಎನ್ನುತ್ತಾರೆ ಮೇಷ್ಟ್ರು ಪಾತ್ರಧಾರಿ ಶ್ರೀಪಾದ ಟಿ.ಭಾಗವತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts