More

    ಕ್ಲಿಷ್ಟ ಸಮಸ್ಯೆಗೆ ಆಪ್ತ ಸಲಹೆ ಅವಶ್ಯ

    ಹುಬ್ಬಳ್ಳಿ: ಅತೀ ಭಾವುಕತೆ, ದಣಿವು, ಕೋಪ, ಹಣಕಾಸಿನ ಪರಿಸ್ಥಿತಿ, ಅಸಹಾಯಕತೆ, ಭಯ, ನಿರಾಶೆ, ದುಃಖ ಇತ್ಯಾದಿಗಳು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದ್ದು, ಇಂತಹ ತೊಂದರೆಗೆ ಆಪ್ತ ಸಮಾಲೋಚನೆ ಉತ್ತಮ ಔಷಧವಾಗಿದೆ ಎಂದು ಡಾ. ಜಯಶ್ರೀ ಬೂದಿಹಾಳಮಠ ಹೇಳಿದರು.

    ಇಲ್ಲಿಯ ಮೂರುಸಾವಿರಮಠ ಸಭಾಂಗಣದಲ್ಲಿ ಶನಿವಾರ ಮಜೇಥಿಯಾ ಫೌಂಡೇಷನ್ ನೆಮ್ಮದಿ- ಆಪ್ತ ಸಲಹೆ ಮತ್ತು ಮಾರ್ಗದರ್ಶನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ನಿತ್ಯ ಬದುಕಿನ ಕಲುಷಿತ ವಾತಾವರಣದಲ್ಲಿ ಕೆಲವೊಮ್ಮೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಕೀರ್ಣ, ಕ್ಲಿಷ್ಟಕರ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಕ್ಲಿಷ್ಟತೆಗಳಿಗೆ ಆಪ್ತರಾಗಿಯೇ ಪರಿಹಾರ ಸೂಚಿಸಬೇಕು ಎಂದರು.

    ಮಜೇಥಿಯಾ ಫೌಂಡೇಷನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಮಾತನಾಡಿ, ಹಳ್ಳಿಗಳಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆ ಕಾರಣಕ್ಕಾಗಿ ಅವರ ಸಮಸ್ಯೆಗಳಿಗೂ ಸ್ಪಂದಿಸಲು ‘ನೆಮ್ಮದಿ’ ಸಿದ್ಧವಾಗಿದೆ ಎಂದರು.

    ಅತಿಥಿಯಾಗಿದ್ದ ಡಾ. ರಮೇಶಬಾಬು ಮಾತನಾಡಿದರು. ಪ್ರಲ್ಹಾದರಾವ, ಚನ್ನಬಸಪ್ಪ ಧಾರವಾಡಶೆಟ್ರು, ರಾಘವೇಂದ್ರ ಮುರಗೋಡ, ಸಂಜೀವ ಜೋಶಿ, ಗೀತಾ ಕಾಂಬಳೆ, ಸರಸ್ವತಿ ಮೆಹರವಾಡೆ, ಸಂಗೀತಾ ಇಜಾರದ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ, ಎಸ್.ಎಸ್. ಕಮಡೊಳ್ಳಿಶೆಟ್ರು, ಮಹೇಶ ಪತ್ತಾರ, ಕೆ.ಜಿ. ಪೂಜಾರ, ಜಿ. ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

    ನೆಮ್ಮದಿ ಕೇಂದ್ರದ ನಿರ್ದೇಶಕ ಡಾ. ವಿ.ಬಿ. ನಿಟಾಲಿ ಸ್ವಾಗತಿಸಿದರು. ಸಾಹಿತಿ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಅಮರೇಶ ಹಿಪ್ಪರಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts