More

    ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ

    • ಹಾಸನ : ಬೇಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಯುವಕ ಸಂಘದಿಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅವರಣ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು, ಬೆಳಕು ಕಬ್ಬಡಿ ಪಂದ್ಯಾವಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಭಾನುವಾರ ಸಂಜೆ ಚಾಲನೆ ನೀಡಿದರು.

    • ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಬ್ಬಡಿಯತ್ತ ಯುವ ಸಮುದಾಯ ಹೊರಳುತ್ತಿರುವುದು ಉತ್ತಮ ಬೆಳವಣಿಗೆ. ಕ್ರೀಡೆ ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಆದ್ದರಿಂದ ಪಾಲಕರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಲ್ಲದೆ ಮಾಳೇನಹಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು.

    • ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ, ಮಾಳೇನಹಳ್ಳಿಯಲ್ಲಿ ಯುವಕರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಇಂತಹ ಕ್ರೀಡಾಕೂಟ ಆಯೋಜಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಿರುವುದು ಸಂತಸ ಸಂಗತಿ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಎಲ್ಲರೂ ಕ್ರೀಡಾ ಮನೋಭಾವದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

    • ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 42 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ(20 ಸಾವಿರ ರೂ.ನಗದು, ಪಾರಿತೋಷಕ) ವನ್ನು ಚಿಕ್ಕಮಗಳೂರಿನ ಮತ್ತಾರವ, ದ್ವಿತೀಯ ಬಹುಮಾನ(15 ಸಾವಿರ ರೂ.ನಗದು, ಪಾರಿತೋಷಕ) ವನ್ನು ಬಾಣಸವಳ್ಳಿ, ತೃತೀಯ ಬಹುಮಾನ(10 ಸಾವಿರ ರೂ.ನಗದು, ಪಾರಿತೋಷಕ) ವನ್ನು ಹನಿಕೆ, ನಾಲ್ಕನೇ ಬಹುಮಾನ(5 ಸಾವಿರ ರೂ.ನಗದು, ಪಾರಿತೋಷಕ)ವನ್ನು ಹೊಸಳ್ಳಿ ತಂಡಗಳು ಪಡೆದುಕೊಂಡವು.
    • ಗ್ರಾಮ ಪಂಚಾಯಿತಿ ಸದಸ್ಯ ಗುರುಮೂರ್ತಿ, ತಾಪಂ ಮಾಜಿ ಸದಸ್ಯ ಶೇಖರಯ್ಯ, ಗ್ರಾಮಸ್ಥರಾದ ಯೋಗೀಶ್, ಗಂಗಾಧರ್, ಚಂದ್ರಣ್ಣ, ಕೆಇಬಿ ಫಾಲಾಕ್ಷ, ಮಧು, ಸಂತೋಷ್, ದಿವಾಕರ್, ತಿಮ್ಮಯ್ಯ ಹಾಗೂ ಅಂಬೇಡ್ಕರ್ ಯುವಕ ಸಂಘದ ರಂಗಸ್ವಾಮಿ, ಶರತ್, ಕಾರ್ತಿಕ್, ಪ್ರಮೋದ್, ಸಂಜು, ಚಂದ್ರಶೇಖರ್, ಹೇಮಾಂತ್, ಯುವರಾಜ್, ಮಹೇಶ್ ಇತರರು ಇದ್ದರು.

    ಚಿತ್ರ:19(ಬಿಎಲ್‌ಆರ್)1-
    ಬೇಲೂರು ತಾಲೂಕಿನ ಮಾಳೇನಹಳಿ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts