More

    ಹಕ್ಕು ಚಲಾಯಿಸಿದ ಸರ್ಕಾರಿ ನೌಕರರು

    ಬೇಲೂರು : ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಬೇಲೂರು ತಹಸೀಲ್ದಾರ್ ಎಂ.ಮಮತಾ ಅಂಚೆ ಮತದಾನದ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಿದರು.
    ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೊರ ಜಿಲ್ಲೆಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿತ್ತು.
    ಭಾನುವಾರ ಬೆಳಗ್ಗೆ 9 ಗಂಟೆಗೆ ಸಹಾಯಕ ಚುನಾವಣಾಧಿಕಾರಿ ಎಂ.ಎನ್.ಮಂಜುನಾಥ್ ಅವರೊಂದಿಗೆ ಆಗಮಿಸಿದ ತಹಸಿಲ್ದಾರ್ ಎಂ.ಮಮತಾ ಮತಗಟ್ಟೆಯ ರೂಪುರೇಷೆಗಳನ್ನು ಪರಿಶೀಲಿಸಿದರು. ನಂತರ 9.30ಕ್ಕೆ ತಾವೇ ಮೊದಲಿಗರಾಗಿ ಬ್ಯಾಲೆಟ್ ಪೇಪರ್ ಪಡೆದು ಗೌಪ್ಯವಾಗಿ ತಮ್ಮ ಹಕ್ಕು ಚಲಾಯಿಸಿ ಮತಪೆಟ್ಟಿಗೆಗೆ ಹಾಕಿದರು.
    ಮತದಾನ ಮಾಡಿದ ನಂತರ ಮತನಾಡಿದ ತಹಸೀಲ್ದಾರ್ ಎಂ.ಮಮತಾ, ಮತದಾನ ಪ್ರತಿಯೋಬ್ಬ ಪ್ರಜೆಯ ಹಕ್ಕಾಗಿದ್ದು, ತಪ್ಪದೆ ಎಲ್ಲರೂ ತನ್ನ ಜವಾಬ್ದಾರಿಯನ್ನು ಮರೆಯದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಒಬ್ಬರೂ ಸಹ ಮತದಾನದಿಂದ ಹೊರಗುಳಿಯದಂತೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. 85 ವರ್ಷದ ವೃದ್ಧರು ಹಾಗೂ ಅಂಗವಿಕಲರಿಗೆ ಅವರ ಗ್ರಾಮ ಮತ್ತು ಮನೆಗಳಿಗೆ ನಮ್ಮ ತಂಡ ತೆರಳಿ ಮತದಾನಕ್ಕೆ ಅನುವು ಮಾಡಿಕೊಟ್ಟಿತ್ತು. ಭಾನುವಾರದಂದು ಚುನಾವಣಾ ಕಾರ್ಯದಲ್ಲಿರುವ ಸರ್ಕಾರಿ ನೌಕರರು ಮತ್ತು ಸಿಬ್ಬಂದಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಏ.26ರಂದು ನಡೆಯುವ ಚುನಾವಣೆಯಲ್ಲೂ ಸಹ ತಾಲೂಕಿನ ಮತದಾರರೂ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕು ಚಲಾಯಿಸುವಂತೆ ತಿಳಿಸಿದರು.

    ಮತಗಟ್ಟೆಯ ಮತದಾನ ಪ್ರಕ್ರಿಯೆಯಲ್ಲಿ ಪೋಸ್ಟಲ್ ಅಧಿಕಾರಿ ಮತ್ತು ಉಪನ್ಯಾಸಕ ಎಸ್.ಗಣೇಶ್, ಪತ್ರಾಂಕಿತ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಎಆರ್.ಒ, ಎ.ಪಿ.ಆರ್.ಒ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts