More

    ಕ್ರೀಡಾ ಹಾಸ್ಟೆಲ್ ನಿರ್ಮಿಸಲು ಪ್ರಸ್ತಾವನೆ : ಸಂಸದ ಮುನಿಸ್ವಾಮಿ ಹೇಳಿಕೆ

    ನಿರ್ಮಾಣ
    ನಿರ್ಮಾಣ
    ಕ್ರೀಡಾ ಹಾಸ್ಟೆಲ್ ನಿರ್ಮಿಸಲು ಪ್ರಸ್ತಾವನೆ : ಸಂಸದ ಮುನಿಸ್ವಾಮಿ ಹೇಳಿಕೆ
    ಕೋಲಾರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಸಂಸದ ಮುನಿಸ್ವಾಮಿ ಉದ್ಘಾಟಿಸಿದರು. ಶಾಸಕ ಶ್ರೀನಿವಾಸಗೌಡ, ಜಿಲ್ಲಾ ನೌಕರರ ಸಂದ ಅಧ್ಯಕ್ಷ ಜಿ. ಸುರೇಶ್‌ಬಾಬು ಇದ್ದರು.

    ಕೋಲಾರ : ಜಿಲ್ಲೆಯಲ್ಲಿ ಕ್ರೀಡಾಚಟುವಟಿಕೆ ವೇಗಪಡೆದುಕೊಳ್ಳಬೇಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿವೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
    ಜಿಲ್ಲಾಡಳಿತ, ಜಿಪಂ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂದ ಆಶ್ರಯದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 50 ಎಕರೆ ಪ್ರದೇಶದಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಿಸಲು ರಾಜ್ಯದ ಕ್ರೀಡಾ ಸಚಿವ ನಾರಾಯಣಗೌಡ ಸಮ್ಮತಿಸಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀ ಹಾಸ್ಟೆಲ್ ಮಂಜೂರಾಗಲಿದೆ. ಇನ್ನು ಜಿಲ್ಲಾ ಕ್ರೀಡಾಂಗಣದಲ್ಲಿ 8.75 ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುತ್ತಿದ್ದು, ಇದಾದ ನಂತರ ಕ್ರೀಡಾಚಟುವಟಿಕೆ ಚುರುಕುಗೊಳ್ಳಲಿವೆ. ಇದಷ್ಟೇ ಅಲ್ಲದೆ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
    ದಿನದ ಒಂದು ಗಂಟೆ ಕ್ರೀಡೆಗೆ ಮೀಸಲಿಡಿ: ಸದಾ ಕರ್ತವ್ಯನಿರತ ನೌಕರರು ತಮ್ಮ ವೃತ್ತಿಯಲ್ಲಿ ವಿಶ್ರಾಂತಿ ಮತ್ತು ಚೈತನ್ಯ ಪಡೆಯಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿದಿನ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ದೈಹಿಕ ಆರೋಗ್ಯ ಹೊಂದಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಗಂಟೆ ಕ್ರೀಡೆಗೆ ಮೀಸಲಾಗಿಡಿ ಎಂದು ಸಂಸದ ಮುನಿಸ್ವಾಮಿ ಹೇಳಿದರು.
    ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದ ವರ್ತನೆ ತೋರಬೇಕು. ಕರೊನಾ ನಿರ್ವಹಣೆ ಸಂದರ್ಭ ಉತ್ತಮ ಕೆಲಸ ವಾಡಿದ್ದು, ಕಚೇರಿಗೆ ಬರುವ ಬಡವರನ್ನು ಕುಟುಂಬದವರೆಂಬ ಭಾವನೆಯಿಂದ ಕೆಲಸ ಮಾಡಕೊಡಿ ಎಂದರು.


    ಕ್ರೀಡಾಜ್ಯೋತಿ ಹಸ್ತಾಂತರ: ಬ್ಯಾಸ್ಕೆಟ್ ಬಾಲ್ ಪಟು ರಾಜೇಂದ್ರಕುವಾರ್ ಮತ್ತು ತಂಡ ಕ್ರೀಡಾಜ್ಯೋತಿಯನ್ನು ಸಂಸದರಿಗೆ ಹಸ್ತ್ತಾಂತರಿಸಿತು. ಸಂದ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಅಜಯಕುವಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಗೌರವಾಧ್ಯಕ್ಷ ರವಿಚಂದ್ರ,
    ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಯುವಜನಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಷ್ಣಮೂರ್ತಿ, ದಿಶಾ ಸಮಿತಿ ಅಧ್ಯಕ್ಷ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಬಾಲಾಜಿ, ಜಾಮೀನುಲ್ಲಾಖಾನ್, ನೌಕರರ ಸಂದ ಹಿರಿಯ ಉಪಾಧ್ಯಕ್ಷ ನಂದೀಶ್, ಉಪಾಧ್ಯಕ್ಷ ರತ್ನಪ್ಪ, ಖಜಾಂಚಿ ವಿಜಯ್, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್ ಇತರರು ಉಪಸ್ಥಿತರಿದ್ದರು.

    ರಾಜ್ಯಮಟ್ಟದ ಸ್ಪರ್ಧಿಗೆ ಟ್ರ್ಯಾಕ್‌ಶೂಟ್: ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಎಲ್ಲ ನೌಕರರೂ ಭಾಗವಹಿ ಸಬೇಕು. ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದವರಿಗೆ ಟ್ರ್ಯಾಕ್‌ಶೂಟ್ ಕೊಡಿಸಲಾಗುವುದು. ನೌಕರರು ತಮ್ಮ ಮಕ್ಕಳಿಗೂ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಕ್ರೀಡಾ ಮನೋಭಾವ ಬೆಳೆಸಿಕೊಂಡು ಒಗ್ಗಟ್ಟು ಹೆಚ್ಚಿಸಿಕೊಳ್ಳಬೇಕು. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು. ಕೇಂದ್ರ ಮತ್ತು ರಾಜ್ಯದ ಯೋಜನೆಗಳು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ತಲುಪುವ ರೀತಿ ಕರ್ತವ್ಯನಿರ್ವಹಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ಸಂಘಕ್ಕೆ 5 ಎಕರೆ ಜಮೀನು ನೀಡಿ: ಜಿಲ್ಲಾ ನೌಕರರ ಸಂದ ಅಧ್ಯಕ್ಷ ಜಿ. ಸುರೇಶ್‌ಬಾಬು ವಾತನಾಡಿ, ನೌಕರರು ಮತ್ತವರ ಕುಟುಂಬಗಳ ಅನುಕೂಲಕ್ಕಾಗಿ ನೌಕರರ ಸಮುದಾಯ ಭವನ ನಿರ್ವಾ ಣದ ಗುರಿ ಹೊಂದಲಾಗಿದೆ. ಸಂಸದರು ಈ ಮೊದಲೇ ತಿಳಿಸಿರುವಂತೆ 5 ಎಕರೆ ಜಮೀನು ಮಂಜೂರು ವಾಡಿಸಿ 1 ಕೋಟಿ ರೂಪಾಯಿ ನೆರವು ಒದಗಿಸಬೇಕು ಎಂದು ಮನವಿ ವಾಡಿದರು.

    ಹಿಂದೆ ವಾಲಿಬಾಲ್‌ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಹೆಸರು ವಾಡಿ ದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು, ಸೌಲಭ್ಯ ಹೆಚ್ಚುತ್ತಿರುವುದರಿಂದ ಕ್ರೀಡಾ ವೈಭವ ಮರುಕಳಿಸುವಂತಾಗಲಿ. ಕೆ.ಶ್ರೀನಿವಾಸಗೌಡ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts