More

    ತುಷ್ಟೀಕರಣ ನೀತಿ ಇದು ಕಾಂಗ್ರೆಸ್ಸಿನ ಸಾಧನೆ

    ಬಾಗಲಕೋಟೆ: ದೇಶದಲ್ಲಿ ಒಂದೆ ಸಮುದಾಯವನ್ನು ಓಲೈಸುವ ಮೂಲಕ ತುಷ್ಟಿಕರಣ ನೀತಿಯನ್ನು ಅನುಸರಿಸುತ್ತಾ ಬಂದಿರುವುದೆ ಕಾಂಗ್ರೆಸ್ಸಿನ ಸಾಧನೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

    ನಗರದ ವಿದ್ಯಾಗಿರಿಯಲ್ಲಿ ಶುಕ್ರವಾರ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ಯ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

    ಯಾರು ಎಷ್ಟೆ ಮೋದಿಯವರ ಬಗ್ಗೆ ಅಪಪ್ರಚಾರ ಮಾಡಿದರೂ ಕೋನೆಗೆ ಗೆಲ್ಲುವುದು ಮೋದಿನೆ ಇದನ್ನು ಯಾರೂ ತಡೆಯುವುದಕ್ಕೆ ಆಗೋದಿಲ್ಲಾ, ಬರಿ ಸುಳ್ಳುಗಳನ್ನು ಹೇಳುತ್ತಾ ೭೦ ವರ್ಷ ದೇಶವನ್ನಾಳಿದ ಕಾಂಗ್ರೆಸ್ಸ ಬಡವರನ್ನು ಬಡವರನ್ನಾಗಿಯೆ ಇಟ್ಟು, ಜಾತಿ ಜಾತಿಗಳ ಮಧ್ಯ ಸಂಘರ್ಷ ಉಂಟುಮಾಡಿ ಹಿಂದುಗಳನ್ನು ಒಡೆಯುವ ಹುನ್ನಾರದ ಜೋತಗೆ ಮುಸ್ಲಿಂರನ್ನು ಓಲೈಸುತ್ತಾ ತಮ್ಮ ಮತ ಬ್ಯಾಂಕ ಗಟ್ಟಿಗೋಳಿಸುತ್ತಾ ಬಂದಿರುವುದೆ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯ ಬಹುದೊಡ್ಡ ಸಾಧನೆ ಎಂದ ಅವರು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್ಸಿಗಿಲ್ಲಾ ಅವರ ಪ್ರಣಾಳಿಕೆಯ ಮುಖವಾಡಗಳು ಒಂದೊಂದಾಗಿ ಕಳಚಿ ಬಿಳುತ್ತಿವೆ, ದೇಶದ ಪರವಾಗಿ ಯಾರು ಇದ್ದಾರೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು, ದೇಶದ ಸುರಕ್ಷತೆ ಹಿಂದೂಗಳ ಭದ್ರತೆಗಾಗಿ ಮೋದಿಯನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡಿ ಎಂದರು.

    ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಭಾರತದಲ್ಲಿ ಹಲವು ಧರ್ಮಿಗಳಿವೆ, ಆದರೆ ಎಲ್ಲ ಧರ್ಮಗಳಿಗಿಂತ ಶ್ರೇಷ್ಠವಾದ್ದು ರಾಷ್ಟ್ರಧರ್ಮ, ಆ ರಾಷ್ಟ್ರಧರ್ಮವನ್ನು ಅನುಸರಿಸಲು ಸಂವಿಧಾನವೆಂಬ ಮಂತ್ರವಿದೆ, ಆ ಮಂತ್ರದ ಆಶಯದಂತೆ ಪ್ರತಿ ೫ ವರ್ಷಕ್ಕೊಮ್ಮೆ ಭಾರತ ಮಾತೆಯ ಸೇವೆಗೆ ಪ್ರಧಾನ ಸೇವಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿ ಭಾರತೀಯನಿಗಿದೆ, ನನ್ನ ದೇಶ, ನನ್ನ ಮತ ಎಂಬ ಬದ್ದತೆಯಿಂದ ರಾಷ್ಟçಧರ್ಮ ಬಲಗೊಳ್ಳಲು ಪ್ರತಿಯೋಬ್ಬರು ಬಿಜೆಪಿಗೆ ಮತ ನೀಡಿ ಪ್ರಧಾನ ಸೇವಕ ಮೋದಿಯವರ ಕೈ ಬಲಪಡಿಸಿ ಎಂದರು.

    ಪಾದಯಾತ್ರೆಯಲ್ಲಿ ಬಸವರಾಜ ಯಂಕಂಚಿ, ಸಿ.ಎಸ್.ಪಾಟೀಲ,ಮಹಾಂತೇಶ ಶೆಟ್ಟರ, ರುದ್ರು ಅಕ್ಕಿಮರಡಿ, ನಗರಸಭೆ ಸದಸ್ಯೆ ಭುವನೇಶ್ವರಿ ಕುಪ್ಪಸ್ತ, ಶೋಭಾ ರಾವ್, ಭಾಗ್ಯಶ್ರೀ ಹಂಡಿ, ಯಮುನಾ ಜೋಷಿ, ಭಾರತಿ ಪಾಟೀಲ, ದ್ಯಾಮಣ್ಣ ಜಲಗೇರಿ, ಸುರೇಶ ವಸ್ತçದ. ಸುರೇಂದ್ರ ಜೋಷಿ, ಸಿದ್ದಣ್ಣ ಬೆಣ್ಣೂರ, ಬನಪ್ಪ ಮಡಿವಾಳರ, ಪ್ರಕಾಶ ಹಾಲವಾರ, ಶಿವಾನಂದ ಕುಂಬಾರ, ಲಕ್ಷö್ಮಣ ಹಡಪದ, ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts