More

    ಕ್ರಿಕೆಟ್ ಬೆಟ್ಟಿಂಗ್, 10 ಜನರ ಬಂಧನ

    ಹುಬ್ಬಳ್ಳಿ/ಧಾರವಾಡ: ಐಪಿಎಲ್ ಟಿ-20 ಕ್ರಿಕೆಟ್ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗಿದೆ. ಇದರ ಸುಳಿವರಿತು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಶುಕ್ರವಾರ ಮತ್ತು ಶನಿವಾರ ಅವಳಿ ನಗರ ಹಾಗೂ ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 10 ಜನರನ್ನು ಬಂಧಿಸಿ 3.79 ಲಕ್ಷ ರೂ. ನಗದು ಹಾಗೂ 11 ಮೊಬೈಲ್​ಫೋನ್ ವಶಪಡಿಸಿಕೊಂಡಿದ್ದಾರೆ.

    ಹುಬ್ಬಳ್ಳಿ ವರದಿ

    ಶಹರ ಠಾಣೆ ವ್ಯಾಪ್ತಿಯ ಕೊಪ್ಪಿಕರ ರಸ್ತೆ ಬದಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಕಮರಿಪೇಟ ಪೊಲೀಸ್ ಠಾಣೆ ಹತ್ತಿರದ ಗಣೇಶ ದತ್ತುಸಾ ಹನುಮಸಾಗರ (23), ನವೀನ ಗಣಪತಸಾ ಜಿತೂರಿ (25) ಹಾಗೂ ಗುರುಸಿದ್ಧೇಶ್ವರ ನಗರ ನಿವಾಸಿ ದತ್ತಾತ್ರೇಯ ಶಿವಾಜಿ ಜಾಧವ (31) ಬಂಧಿತರು. ಅವರಿಂದ 25,150 ರೂ. ನಗದು, ನಾಲ್ಕು ಮೊಬೈಲ್​ಫೋನ್ ವಶಕ್ಕೆ ಪಡೆಯಲಾಗಿದೆ.

    ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಐಬಿ ಇನ್ಸ್​ಪೆಕ್ಟರ್ ಅಲ್ತಾಫ್ ಮುಲ್ಲಾ, ಶಹರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು.

    ಸಿಬ್ಬಂದಿ ಎಂ.ಎಚ್. ಶಿವರಾಜ, ಎ.ಎಸ್.ಐ, ಪಿ.ಸಿ ಸೋಗಿ, ಎಸ್.ಪಿ. ಲಮಾಣಿ, ಬಸವರಾಜ ಸಣ್ಣಪ್ಪನವರ, ಅನೀಲಕುಮಾರ ಹುಗ್ಗಿ, ಇಮಾಮಸಾಬ ಅತ್ತಾರ ಹಾಗೂ ಶಹರ ಠಾಣೆಯ ಬಿ.ಎ. ಖಂಡಪ್ಪಗೌಡರ, ಎ.ಎಸ್.ಐ, ಐ.ಬಿ. ಮಲ್ಲಶೆಟ್ಟಿ ಕಾರ್ಯಾಚರಣೆ ತಂಡದಲ್ಲಿದ್ದರು. ತಂಡದ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಮಾವನೂರ ದೇವಸ್ಥಾನ ಬಳಿ ಬೆಟ್ಟಿಂಗ್ ನಿರತ ಕೇಶ್ವಾಪುರ ರಾಮನಗರದ ಬಸವರಾಜ ಹನಮಂತಪ್ಪ ಕರಡಿ, ರಾಜು ವಿಠ್ಠಲಸಾ ದೋಂಗಡಿ, ವಿರುಪಾಕ್ಷಯ್ಯ ಪಂಚಯ್ಯಾ ಕೋರಿಯಾನಮಠ ಹಾಗೂ ವೀರಭದ್ರಯ್ಯ ಗುರುಸಿದ್ದಯ್ಯ ಕೋರಿಯಾನಮಠ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4 ಮೊಬೈಲ್​ಫೋನ್, 8000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

    ಧಾರವಾಡ ವರದಿ

    ಬೆಟ್ಟಿಂಗ್​ನಲ್ಲಿ ನಿರತ ಮೂವರನ್ನು ಉಪನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರೀರಾಮನಗರದ ಮಹ್ಮದಯಾಸೀನ್ ಅಬ್ದುಲ್​ರಶೀದ್ ಗಬ್ಬೂರ, ಜಕನಿ ಬಾವಿ ರಸ್ತೆಯ ಕಿಶೋರ ಉಮೇಶ ಪೂಜಾರ ಹಾಗೂ ಅಕ್ಷಯ ಬಂಧಿತ ಆರೋಪಿಗಳು. ಇವರು ನಗರದ ಕರ್ನಾಟಕ ಕಾಲೇಜ್ ಬಳಿ ರಸ್ತೆ ಬದಿ ನಿಂತು ಶುಕ್ರವಾರ ನಡೆದ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 3.46 ಲಕ್ಷ ರೂ. ಹಾಗೂ 3 ಮೊಬೈಲ್​ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಎಸಿಪಿ ಜಿ. ಅನುಷಾ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್ಸ್​ಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಪಿಎಸ್​ಐ ಶ್ರೀಮಂತ ಹುಣಸೀಕಟ್ಟಿ. ಸಿಬ್ಬಂದಿ ಆರ್.ಎಚ್. ನದಾಫ, ಎಸ್.ಪಿ. ದೊಡ್ಡಮನಿ, ಸಿ.ಟಿ. ನಡುವಿನಮನಿ, ಸಿ.ಡಿ ಬಳ್ಳಾರಿ, ಎಸ್.ವಿ. ನೀಲಣ್ಣವರ, ಕೆ.ಎಂ. ಡೊಕ್ಕನವರ, ಆರ್.ಎಚ್. ಬಡ್ನಿ, ಪಿ.ಎಸ್. ಕುಂದಗೋಳ, ಜಿ.ಬಿ. ಭರಮಗೌಡ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts