More

    ಕೋವಿ ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗ

    ಶ್ರೀಮಂಗಲ: ಕೋವಿ ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಕೊಡವ ಸಂಸ್ಕೃತಿ ಉಳಿಯಬೇಕಾದರೆ ಇಲ್ಲಿನ ಭೂಮಿ ಉಳಿಯಬೇಕು. ಭೂಮಿಯನ್ನು ಎಂದಿಗೂ ಮಾರಾಟ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಸಲಹೆ ನೀಡಿದರು.


    ಪೊನ್ನಂಪೇಟೆಯ ಕ್‌ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗ ವತಿಯಿಂದ ಚಿಕ್ಕಮುಂಡೂರು ಅಪ್ಪಚ್ಚಕವಿ ವಿದ್ಯಾಸಂಸ್ಥೆ ಮೈದಾನದಲ್ಲಿ ಏರ್ಪಡಿಸಿದ್ದ ತೋಕ್ ನಮ್ಮೆ-ಶೂಟಿಂಗ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


    ಇಂತಹ ಕಾರ್ಯಕ್ರಮದಲ್ಲಿ ಜನಾಂಗದ ಎಲ್ಲರಿಗೂ ತಮ್ಮ ಪ್ರತಿಮೆ ಅನಾವರಣಗೊಳಿಸಲು ಅವಕಾಶವಾಗಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರು ಸಂತೋಷವಾಗುತ್ತಾರೆ. ಆದರೆ ವಿಜೇತರಾಗದವರು ಮುಂದಿನ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು, ಕ್ರೀಡಾ ಮನೋಭಾವದಿಂದ ಉತ್ಸುಕತೆಯಲ್ಲಿ ಜಿಲ್ಲೆಯ ಎಲ್ಲ ಭಾಗದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.


    ಕ್‌ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಪುಣ್ಯ ಭೂಮಿ, ತಪೋಭೂಮಿ ಇದನ್ನು ಉಳಿಸಿಕೊಳ್ಳಬೇಕು. ತಮ್ಮ ಮಕ್ಕಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹ ನೀಡಬೇಕು. ಆದಷ್ಟು ಮಹಿಳೆಯರು-ಹೆಣ್ಣು ಮಕ್ಕಳೂ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದರು.


    ವೇದಿಕೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಜಬ್ಭೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಅಪ್ಪಚ್ಚ ಕವಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಮತ್ತು ಬಹುಮಾನ ಪ್ರಯೋಜಕರು ಉಪಸ್ಥಿತರಿದ್ದರು.

    ಫಲಿತಾಂಶ: ಸಾಮಾನ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ನಾಪೋಕ್ಲುವಿನ ಕೇಲೇಟಿರ ಪವಿತ್ ಪೂವಯ್ಯ 20 ಸಾವಿರ ರೂ. ನಗದು ಮತ್ತು ಪಾರಿತೋಷಕ, ದ್ವಿತೀಯ ಸ್ಥಾನ ಪಡೆದ ಚೆಟ್ಟಳ್ಳಿಯ ಪುತ್ತೇರಿರ ನಂಜಪ್ಪ 15 ಸಾವಿರ ರೂ.ನಗದು ಮತ್ತು ಪಾರಿತೋಷಕ, ತೃತೀಯ ಸ್ಥಾನ ಪಡೆದ ಸುಂಟಿಕೊಪ್ಪ ಅಂದಗೋವೆಯ ಕೇಚಿರ ವಿಜು ಬೆಳ್ಯಪ್ಪ 10 ಸಾವಿರ ರೂ.ನಗದು ಮತ್ತು ಪರಿತೋಷಕ ಪಡೆದರು.


    ಮಹಿಳೆಯ ವಿಭಾಗ: ಬಲ್ಲಮಾವಟಿ ಗ್ರಾಮದ ಚಿಯಕ್‌ಪೂವಂಡ ಶ್ವೇತನ್ ಚಂಗಪ್ಪ ಪ್ರಥಮ ಸ್ಥಾನ ಪಡೆದು 3 ಸಾವಿರ ರೂ.ನಗದು ಮತ್ತು ಪಾರಿತೋಷಕ ಪಡೆದರು.


    ಅಮ್ಮತ್ತಿಯ ಪಟ್ಟಡ ಐರಾ ಬೋಪಣ್ಣ ದ್ವಿತೀಯ ಸ್ಥಾನ ಪಡೆದು 2 ಸಾವಿರ ರೂ.ನಗದು ಮತ್ತು ಪಾರಿತೋಷಕ ಪಡೆದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮತ್ತು ಬಹುಮಾನ ಪ್ರಯೋಜಕರು ಬಹುಮಾನ ವಿತರಿಸಿದರು.


    ಪ್ರಥಮ ಬಹುಮಾನವನ್ನು ಕೊಣಿಯಂಡ ದಿವಂಗತ ವಿಟ್ಟ ದೇವಯ್ಯ ಅವರ ಜ್ಞಾಪಕಾರ್ಥವಾಗಿ ಪತ್ನಿ ರೋಹಿಣಿ ದೇವಯ್ಯ ಮತ್ತು ಪುತ್ರ ಚೇತನ್ ಚಂಗಪ್ಪ ಪ್ರಯೋಜನೆ ಮಾಡಿದ್ದರು.


    ದ್ವಿತೀಯ ಬಹುಮಾನವನ್ನು ದೇಯಂಡ ದಿವಂಗತ ಲಲಿತ್ ಕುಮಾರ್-ಮುತ್ತುರಾಣಿ ಅವರ ಜ್ಞಾಪಕಾರ್ಥವಾಗಿ ಪುತ್ರ ನಿತಿನ್ ದೇವಯ್ಯ ಪ್ರಯೋಜನೆ ಮಾಡಿದ್ದರು.


    ತೃತೀಯ ಬಹುಮಾನ ಮತ್ತು ಮಹಿಳೆಯರ ವಿಭಾಗದ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮಲಚೀರ ಚಂಗಪ್ಪ-ದೇವಮ್ಮ ಅವರ ಜ್ಞಾಪಕಾರ್ಥವಾಗಿ ಪುತ್ರ ಪೊನ್ನಪ್ಪ(ಅರಸು)-ಬೋಜಮ್ಮ ಅವರು ಪ್ರಯೋಜನೆ ಮಾಡಿದ್ದರು. ಸ್ಪರ್ದಾರ್ಥಿಗಳಿಗೆ ಊಟೋಪಚಾರವನ್ನು ಅಜ್ಜಿಕುಟ್ಟಿರ ಭೀಮಯ್ಯ ಅವರು ಪ್ರಾಯೋಜನೆ ಮಾಡಿದ್ದರು.


    ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತೋಕ್ ನಮ್ಮೆಯನ್ನು ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಸರ್ವೇ ಇಲಾಖೆಯ ನಿವೃತ್ತ ಎಡಿಎಲ್‌ಆರ್ ಅಜ್ಜಿಕುಟ್ಟಿರ ಭೀಮಯ್ಯ ಅವರನ್ನು ಸನ್ಮಾನಿಸಲಾಯಿತು.


    ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪುರುಷರು, ಮಹಿಳೆಯರು ಸೇರಿ 171 ಸ್ಪರ್ದಾರ್ಥಿಗಳು ಭಾಗವಹಿಸಿದ್ದರು.
    ಸ್ಪರ್ಧೆಯಲ್ಲಿ ಕಿರಿಯರಾದ 4ನೇ ತರಗತಿಯ ಕಳ್ಳಿಚಂಡ ದ್ರುವ್ ಕಾರ್ಯಪ್ಪ ಮತ್ತು 9ನೇ ತರಗತಿಯ ಅಪ್ಪಂಡೇರಂಡ ಚರಣ್ ಚಂಗಪ್ಪ ಅವರು ಸಾಮಾನ್ಯ ವಿಭಾಗದಲ್ಲಿ 2ನೇ ಸುತ್ತಿಗೆ ಅರ್ಹತೆ ಪಡೆದು ಪ್ರವೇಶಿಸುವ ಮೂಲಕ ಗಮನ ಸೆಳೆದರು.


    ಸಂಘಟನೆಯ ಉಪಾಧ್ಯಕ್ಷ ಚೆಕ್ಕೆರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ಸದಸ್ಯರಾದ ಅಡ್ಡಂಡ ಸುನಿಲ್ ಸೋಮಯ್ಯ, ಅಜ್ಜಿಕುಟ್ಟಿರ ಶುಭ, ಅಡ್ಡಂಡ ಡಾಲಿ ಜನಾರ್ಧನ, ಮುದ್ದಿಯಡ ಮಂಜು ಗಣಪತಿ, ಕಳ್ಳಿಚಂಡ ಚಿಪ್ಪ ದೇವಯ್ಯ, ಕಡೇಮಾಡ ಸತೀಶ್, ಚೆಪ್ಪುಡೀರ ಸುನಿಲ್, ಅಪ್ಪೇಂಗಡ ರನ್ನು, ಗ್ರಾಪಂ ಸದಸ್ಯ ಪೆಮ್ಮಂಡ ಭರತ್, ಮೂಕಲೇರ ಮಧು ಕುಮಾರ್ ಹಾಜರಿದ್ದರು.


    ನೆಲ್ಲೀರ ಧನು, ಕುಪ್ಪುಡೀರ ಪೊನ್ನು ಮುತ್ತಪ್ಪ, ಕಳ್ಳಂಗಡ ನವೀನ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts