More

    ಕೋಲಿ ಸಮಾಜದ ಮೇಲೆ ದೌರ್ಜನ್ಯ

    ಕಲಬುರಗಿ: ಜಿಲ್ಲೆಯಲ್ಲಿ ಕೋಲಿ, ಕಬ್ಬಲಿಗ ಸಮಾಜದ ಮೇಲೆ ನಿರಂತರ ದೌರ್ಜನ್ಯ, ಸರಣಿ ಕೊಲೆ, ಪ್ರಚೋದಿತ ಆತ್ಮಹತ್ಯೆ ಪ್ರಕರಣಗಳು, ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಜಗತ್ ವೃತ್ತದಿಂದ ಜಿ¯್ಲÁಧಿಕಾರಿ ಕಚೇರಿವರೆಗೆ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೋಲಿ ಸಮಾಜದವರ ಮೇಲೆ ಪ್ರಚೋದಿತ ಆತ್ಮಹತ್ಯೆ, ಬಾಲಕಿಯರ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜವನ್ನು ಗುರಿಯಾಗಿಸಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೆದರಿಸುವ ತಂತ್ರ ರೂಪಿಸುತ್ತಿz್ದÁರೆ. ಅಫಜಲಪುರದ ಸಾಗನೂರ ಗ್ರಾಮದ ಯುವಕ ಗಿರೀಶ ಚಕ್ರ ಅವರ ಏಳಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೊಲೆ ಮಾಡಿz್ದÁರೆ. ಇದರ ಹಿಂದೆ ಕಾಣದ ಕೈಗಳಿದ್ದು, ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು. ಸೈಬಣ್ಣ ಜಮಾದಾರ ಅವರಿಗೆ ಕೊಲೆ ಬೆದರಿಕೆಯ ಕರೆಗಳು ಬರುತ್ತಿದ್ದು, ಕರೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.

    ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ಪ್ರಚೋದಿತ ಆತ್ಮಹತ್ಯೆ ಸಂಬAಧ ನ್ಯಾಯ ಒದಗಿಸಿಲ್ಲ. ೪೫ ದಿನ ಧರಣಿ ನಡೆಸಿದ್ದು, ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಾಧ್ಯವಾಗಿಲ್ಲ. ತಾಡತೆಗನೂರ ಗ್ರಾಮದ ಶಿವಶರಣ, ಕೋಡ್ಲಿ ಗ್ರಾಮದ ದತ್ತಪ್ಪ ಆತ್ಮಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಕ್ರಮ ಜರುಗಿಸದೆ ನಿರ್ಲಕ್ಷÈ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
    ಶಾಸಕ ಡಾ.ಅಜಯಸಿಂಗ್ ಮನೆ ಆವರಣದಲ್ಲಿ ದೇವಪ್ಪ ನಾಟೀಕಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಎಫ್‌ಐಆರ್ ಸಹ ದಾಖಲಿಸಿಲ್ಲ. ವಿವಿಧೆಡೆ ಅತ್ಯಾಚಾರ ನಡೆದಿವೆ. ಇಂತಹ ಹಲವು ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ, ಕೋಲಿ ಸಮಾಜದವರ ಮೇಲೆ ನಿರಂತರವಾಗಿ ಅನ್ಯಾಯಗಳು ಆಗುತ್ತಿದ್ದು, ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸಲ್ಲಿಸಲಾಯಿತು. ಶ್ರೀ ಕೊತಲಪ್ಪ ಸ್ವಾಮೀಜಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಬಸವರಾಜ ಹರವಾಳ, ಬಸವರಾಜ ಸಪ್ಪನಗೋಳ, ಮಹಾರಾಯ ಅಗಸಿ, ಪ್ರೇಮ ಕೋಲಿ, ಚಂದ್ರಕಾAತ ಕಿರಸಾವಳಗಿ, ಮಲ್ಲಿಕಾರ್ಜುನ ಚಕ್ರ, ಚಂದ್ರಕಾAತ ಶಖಾಪುರ, ಗುಂಡು ಐನಾಪುರ, ಸಂತೋಷ ಜಮಾದಾರ, ಪ್ರವೀಣ ತೆಗ್ಗಳ್ಳಿ, ರವಿ ಡೊಂಗರಗಾAವ, ಪಿಡ್ಡಪ್ಪ ಜಾಲಗಾರ, ಸರ್ದಾರ್ ರಾಯಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts