More

    ಕೋಟೆನಗರಿ ರಂಗಿನಾಟಕ್ಕೆ ಸಂಭ್ರಮದ ತೆರೆ

    ಬಾಗಲಕೋಟೆ: ಐತಿಹಾಸಿಕ ಹೋಳಿ ಸಂಭ್ರಮಕ್ಕೆ ತೆರೆಬಿದ್ದಿದ್ದು, ಮೂರು ದಿನಗಳ ಕಾಲ ಅತ್ಯಂತ ವೈಭದಿಂದ ನಡೆದ ಬಣ್ಣದೋಕುಳಿಯಲ್ಲಿ ಯಾವುದೇ ಅಹಿತಕರ ಘಟನೆ ಅವಕಾಶ ನೀಡದೇ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಸಾಮರಸ್ಯದಿಂದ ಓಕೋಳಿಯಲ್ಲಿ ಜನ ಮಿಂದೆದ್ದರು.

    ಪ್ರಸಕ್ತ ವರ್ಷ ಬಣ್ಣದೋಕುಳಿಯಲ್ಲಿ ನಿರೀಕ್ಷೆಗೂ ಮೀರಿ ಜನರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದು ಬಾಗಲಕೋಟೆ ಹೋಳಿ ಮುಂದಿನ ಪೀಳಿಗೆಗೂ ಈ ಐತಿಹಾಸಿಕ ಹಬ್ಬ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿತ್ತು. ೧೫ ದಿನಗಳ ಕಾಲ ಲಯ, ರಾಗ ಬದ್ಧವಾಗಿ ಹಲಗೆ ಸದ್ದು, ಮೂರು ದಿನಗಳಕಾಲ ಹಗಲವು ಹೊತ್ತಿನಲ್ಲಿ ಕಣ್ಣಾಯಿಸಿದರೇ ಕಡೆಗೆಲ್ಲ ರಂಗು ರಂಗೀನ ಬಣ್ಣದೋಕುಳಿ ಈಡೀ ರಾತ್ರಿ ಸೋಗಿನ ಬಂಡಿಗಳ ಮೆರಗು ಹೋಳಿ ಹಬ್ಬಕ್ಕೆ ವಿಶೇಷ ಕಳೆ ತಂದುಕೊಟ್ಟವು.

    ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಜೀವಂತವಾಗಿರಿಸಲು ಬಾಗಲಕೋಟೆ ಹೋಳಿ ಆಚರಣಾ ಸಮಿತಿ, ನಮ್ಮೂರು ಹಬ್ಬ ತಂಡ, ಕಾಮದೇನು ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳು ರೇನ್ ಡ್ಯಾನ್ಸ್ ಆಧುನಿಕ ಸ್ಪರ್ಶ ನೀಡಿ ಯುವ ಸಮುಹವನ್ನು ಹಿಡಿದುಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ.
    ಸಂಸ್ಥೆಗಳು ಕಾಮದಹನ ಬಳಿಕ ಅದ್ದೂರಿಯಾಗಿ ಚಾಲನೆ ದೊರೆತಿದ್ದ ಬಣ್ಣದೋಕುಳಿಗೆ ನಗರದ ಪ್ರತಿ ಮನೆ ಮನೆ, ರಸ್ತೆ ಇಕ್ಕೆಲ ಮತ್ತು ಗಲ್ಲಿಗಲ್ಲಿಗಳಲ್ಲಿ ಬಣ್ಣದ ರಂಗು ಕಾಣಿಸಿಕೊಂಡಿತ್ತು. ನಸುಕಿನ ಜಾವ ಹಲಿಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು. ಯುವಕ-ಯುವತಿಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರೆಲ್ಲರೂ ಕೂಡಿಕೊಂಡು ರಂಗಿನ ಲೋಕದಲ್ಲಿ ಮಿಂದೆದ್ದರು.

    ಈ ಭಾರಿ ದಿನ ಜರುಗಿದ ಬಣ್ಣದಾಟದಲ್ಲಿ ಜನರು ಬಂಡಿ-ಟ್ರ‍್ಯಾಕ್ಟರ್‌ನಲ್ಲಿ ನಿಂತು ತಮ್ಮ ಎದುರಾಳಿಗಳನ್ನು ಬಣ್ಣದ ನೀರಿನ ಮಜ್ಜನದಲ್ಲಿ ಮುಳುಗಿಸಿದ್ದರು.ಬಗೆ ಬಗೆಯ ಬಣ್ಣ ಹಚ್ಚುವುದರ ಜೊತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಭಾರಿಸಿದ್ದು ರಂಜಿಸಿತು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

    ಮಕ್ಕಳು ಕೈಯಲ್ಲಿ ಪಿಚಕಾರಿಗಳನ್ನು ಹಿಡಿದು ಸಿಕ್ಕ ಸಿಕ್ಕವರೆಲ್ಲರಿಗೂ ಶೂಟ್ ಮಾಡುತ್ತಿದ್ದರು. ದೊಡ್ಡವರು, ಬಣ್ಣದ ಲೋಕದಿಂದ ದೂರ ಉಳಿದ ಮನೆಯಲ್ಲಿ ಸೇರಿದ್ದ ಸ್ನೇಹಿತರನ್ನು ಹೊರಗಡೆ ಎಳೆದುತಂದು, ಕೈಯಲ್ಲಿ ಬಣ್ಣ, ನೀರು ಕಲಿಸಿ, ಶೈನಿಂಗ್ ಬರುವಂತೆ ವಿಧ ವಿಧದ ಬಣ್ಣಗಳನ್ನು ಹಚ್ಚುತ್ತಿದ್ದರು. ಯುವಕರು ಅಣುಕು ಶವ ಯಾತ್ರೆ ನಡೆಸಿ ರಂಜಿಸಿದರು. ಮಹಿಳೆಯರು ಮತ್ತು ಯುವತಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

    ಹೀಗೆ ಸರ್ಕಾರಿ ನೌಕರರು, ಮಾಧ್ಯಮ ಮಿತ್ರರು ಸೇರಿದಂತೆ ಜಾತಿ ಮತ ಪಂಥ ಬೇದ ಭಾವ ಮರೆತು ಹೋಳಿ ಹಬ್ಬ ಆಚರಿಸಿದರು. ದೇಶದಲ್ಲಿಯೇ ಗಮನ ಸೆಳೆದಿರುವ ಕೋಟೆ ನಗರಿಯ ಬಣ್ಣದೋಕುಳಿ ಬಿಗಿ ಪೊಲೀಸ ಭದ್ರತೆ ನಡುವೆ ಸಂಭ್ರಮದಿಂದ ತೆರೆ ಬಿದ್ದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts