More

    ಕೋಟಿ ರೂ.ಗೂ ಅಧಿಕ ಮೌಲ್ಯದ ಮದ್ಯ ವಶ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಜಿಲ್ಲೆಯಲ್ಲಿ ಮಾ.16ರಿಂದ 26ರ ವರೆಗೆ 1.12 ಕೋಟಿ ರೂ. ಅಧಿಕ ಮೌಲ್ಯದ 22,360 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಈ ಸಂಬಂಧ 181 ಪ್ರಕರಣ ದಾಖಲಿಸಿದೆ ಎಂದು ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ತಿಳಿಸಿದ್ದಾರೆ.
    ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 59,26,238 ರೂ. ಮೌಲ್ಯದ 14,741 ಲೀಟರ್ ಅಕ್ರಮ ಮದ್ಯ ಹಾಗೂ ಚಿತ್ರದುರ್ಗ-52, 32, 166 ರೂ.-7,440, ಮೊಳಕಾಲ್ಮೂರು-11,089-30, ಹಿರಿಯೂರು-34,049-76, ಹೊಸದುರ್ಗ-17,956-39 ಹಾಗೂ ಹೊಳಲ್ಕೆರೆ ವಿಧಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15,551 ರೂ. ಮೌಲ್ಯದ 34 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts