More

    ಕೋವಿಡ್-19ಗೆ ಆಯುರ್ವೆದ ಮದ್ದು ರಾಮಬಾಣ

    ಗದಗ: ವಿಶ್ವ ಕಂಡ ಮಹಾಮಾರಿ ಕರೊನಾ ಸೋಂಕಿಗೆ ಆಯುರ್ವೆದ ಔಷಧವೇ ರಾಮಬಾಣವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ತಾಲೂಕಿನ ಹುಲಕೋಟಿ ಗ್ರಾಮದಲ್ಲಿನ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಆಯುಷ್ ಇಲಾಖೆ ತಯಾರಿಸಿದ ಆಯುರ್ವೆದ ಕಷಾಯ, ಚ್ಯವನಪ್ರಾಶ, ಹೊಮಿಯೋಪಥಿ ಔಷಧವನ್ನು ಕರೊನಾ ಸೇನಾನಿಗಳಿಗೆ ವಿತರಿಸಿ ಮಾತನಾಡಿದರು.

    ಇದುವರೆಗೆ ಮಹಾಮಾರಿ ಕರೊನಾ ಸೋಂಕಿಗೆ ವಿಶ್ವದಲ್ಲಿ ಔಷಧ ದೊರೆತಿಲ್ಲ. ವಿಶ್ವದಾದ್ಯಂತ ಲಕ್ಷಾಂತರ ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಾರಕ ರೋಗ ತಡೆಗೆ ಪ್ರಾಚೀನ ಆಯುರ್ವೆದ ಶಾಸ್ತ್ರದಲ್ಲಿ ಹೇಳಿರುವಂತೆ ಯೋಗ, ಪ್ರಾಣಾಯಾಮ, ಪ್ರತ್ಯಾಹಾರ, ಆಯುರ್ವೆದ ಔಷಧ ಬಳಕೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದೊಂದೇ ಪರಿಹಾರವಾಗಿದೆ ಎಂದರು.

    ಈ ದಿಸೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಅವರು ಜಿಲ್ಲೆಯಲ್ಲಿ ಅಂದಾಜು ಎರಡು ಲಕ್ಷ ಜನರಿಗೆ ಆಯುರ್ವೆದ ಔಷಧ ವಿತರಿಸಿದ್ದು ಅತ್ಯುತ್ತಮ ಕಾರ್ಯವಾಗಿದೆ ಎಂದರು.

    ರೋಗ ಬಂದ ನಂತರ ನಿವಾರಣೆಗೆ ಪರದಾಡುವುದಕ್ಕಿಂತ ರೋಗ ಬಾರದಂತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಉಚಿತ ಎಂದು ಹೇಳಿದರು.

    ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ ಮಾತನಾಡಿ, ಆಯುರ್ವೆದ ಔಷಧಕ್ಕೆ ವಿಶ್ವದಾದ್ಯಂತ ಭಾರಿ ಬೇಡಿಕೆ ಬಂದಿದೆ. ಯೋಗ, ಆಯುರ್ವೆದ ತಜ್ಞರಿಗೆ ಪ್ರಪಂಚದ ವಿವಿಧೆಡೆ ಬೇಡಿಕೆಯಿದೆ ಎಂದರು.

    ಆಯುಷ್ ಇಲಾಖೆಯ ಹೊಮಿಯೋಪಥಿ ವೈದ್ಯ ಡಾ. ಸಂಜೀವ ನಾರಪ್ಪನವರ, ಆಯುರ್ವೆದ ತಜ್ಞ ಡಾ. ಪ್ರವೀಣ ಸರ್ವದೆ, ಡಾ. ಮಹೇಶ ಹಿರೇಮಠ, ಡಾ.ಕಮಲಾಕರ ಅರಳೆ, ಶಹರ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಬಳಗಾನೂರ, ಪ್ರಭು ಬುರಬುರೆ, ತಾಪಂ ಮಾಜಿ ಅಧ್ಯಕ್ಷ ಮೋಹನ ದುರುಗಣ್ಣವರ, ಚಂದ್ರಪ್ಪ ಕರಿಕಟ್ಟಿ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts