More

    ಕೊಚ್ಚಿ ಹೋದ ಸೇತುವೆ ಪಿಚ್ಚಿಂಗ್

    ಕಾರವಾರ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಶಿರ್ವೆ ಗ್ರಾಮದ ಉಮರಗಡ್ಡೆ-ಸೀತೆಮಕ್ಕಿ ಮಿನಿ ಸೇತುವೆ ಪಿಚ್ಚಿಂಗ್ ಕೊಚ್ಚಿ ಹೋಗಿದೆ.

    ಇತ್ತೀಚೆಗಷ್ಟೇ ಕೈಗಾ ಎನ್​ಪಿಸಿಐಎಲ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಸಣ್ಣ ಸೇತುವೆ ನಿರ್ವಿುಸಲಾಗಿತ್ತು. ಅಂದಾಜು 150 ಮನೆ, 800 ಜನಸಂಖ್ಯೆ ಇರುವ ಈ ಊರಿನ ಜನರಿಗೆ ಸೇತುವೆ ತುಂಬಾ ಅನುಕೂಲವಾಗಿತ್ತು. ಬೈಕ್ ಹಾಗೂ ಸಣ್ಣ ರಿಕ್ಷಾಗಳನ್ನು ಮಳೆಗಾಲದಲ್ಲೂ ಸುರಕ್ಷಿತವಾಗಿ ಕೊಂಡೊಯ್ಯಬಹುದಿತ್ತು. ಆದರೆ, ಈಗ ಅದೂ ಕಷ್ಟವಾಗಿದೆ. ಕೃಷಿ ಕಾರ್ಯದಲ್ಲಿ ತೊಡಗಿದ ಹಿಂದುಳಿದ ಹಾಲಕ್ಕಿ ಒಕ್ಕಲಿಗರೇ ಹೆಚ್ಚಿದ್ದು, ಭಾರಿ ಮಳೆಗೆ ಸಾಕಷ್ಟು ಗದ್ದೆಯಲ್ಲಿ ನೀರು ತುಂಬಿ ನಾಟಿಗಾಗಿ ಸಿದ್ಧಪಡಿಸಿದ್ದ ಗದ್ದೆಯಲ್ಲಿ ಮಣ್ಣು ಆವರಿಸಿದೆ. ಈಗ ಸೇತುವೆಯ ಪಿಚ್ಚಿಂಗ್ ಕೂಡ ಹಾಳಾಗಿರುವುದರಿಂದ ಮನೆಯವರೆಗೆ ವಾಹನ ಒಯ್ಯುವುದು ಕಷ್ಟವಾಗಿದೆ ಎಂದು ರಾಜೇಶ ಗೌಡ ತಿಳಿಸಿದ್ದಾರೆ.

    ಉತ್ತಮ ಮಳೆ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಆಗಾಗ ಮಳೆ ಬಂದು ಮಾಯವಾಗುತ್ತಿದೆ. ಬುಧವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 20.8, ಭಟ್ಕಳದಲ್ಲಿ 23.5, ಹಳಿಯಾಳದಲ್ಲಿ 6.2, ಹೊನ್ನಾವರದಲ್ಲಿ 26.9, ಕಾರವಾರದಲ್ಲಿ 32.5, ಕುಮಟಾದಲ್ಲಿ 15.1, ಮುಂಡಗೋಡಿನಲ್ಲಿ 7.6, ಸಿದ್ದಾಪುರದಲ್ಲಿ 8.8, ಶಿರಸಿಯಲ್ಲಿ 8, ಜೊಯಿಡಾದಲ್ಲಿ 12.5, ಯಲ್ಲಾಪುರದಲ್ಲಿ 11.9, ದಾಂಡೇಲಿಯಲ್ಲಿ 9.6 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts