More

    ಕೊಚ್ಚಿಹೋದ ಹಿರೇಹಳ್ಳ ಸೇತುವೆ

    ನರಗುಂದ: ಎರಡ್ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕಣಕೀಕೊಪ್ಪ ರಸ್ತೆಯ ಹಿರೇಹಳ್ಳದ ಸೇತುವೆ ಕೊಚ್ಚಿಕೊಂಡು ಹೋಗಿದೆ.

    ಕಳೆದ ವರ್ಷ ಪ್ರವಾಹದಿಂದಾಗಿ ಸೇತುವೆಯ ಪರಸಿ ಕಲ್ಲುಗಳು ಕಿತ್ತು ಹೋಗಿದ್ದವು. ಪೈಪ್​ಗಳಲ್ಲಿ ಸಾಕಷ್ಟು ತ್ಯಾಜ್ಯ ಸಿಲುಕಿ ನೀರು ಸರಾಗವಾಗಿ ಹರಿದು ಹೋಗದಂತಾಗಿತ್ತು. ಅಲ್ಲದೆ, ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿರಲಿಲ್ಲ. ಬೃಹತ್ ಗುಂಡಿ ಬಿದ್ದಿರುವ ಸೇತುವೆಯಲ್ಲೇ ಕೆಲವೊಂದು ಟಂಟಂ, ಟ್ರ್ಯಾಕ್ಟರ್, ಚಕ್ಕಡಿ, ಬೈಕ್, ಮುಂತಾದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದರು.

    ಇದೀಗ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೊಂದರೆಯಾಗಿದೆ. ಗುರ್ಲಕಟ್ಟಿ, ಕಣಕೀಕೊಪ್ಪ ಗ್ರಾಮಕ್ಕೆ ತೆರಳುವ ಬಸ್ ಸಂಚಾರವೂ ಸ್ಥಗಿತಗೊಂಡಿದೆ. ಕೆಲ ಬೈಕ್ ಸವಾರರು ಹರಿಯವ ನೀರಲ್ಲೇ ಸೇತುವೆ ದಾಟುವ ದುಸ್ಸಾಹಸ ಮಾಡುತ್ತಿರುವುದು ಕಂಡು ಬರುತ್ತಿದೆ. ಸೇತುವೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts