More

    ಕೇರ್ ಸೆಂಟರ್​ಗೆ ಡಿಸಿ ಭೇಟಿ

    ಸಾಗರ: ಉಪವಿಭಾಗೀಯ ಆಸ್ಪತ್ರೆಯ ಕರೊನಾ ಕೇರ್ ಸೆಂಟರ್ ಹಾಗೂ ಬಂದಗದ್ದೆ ಮುರಾರ್ಜಿ ವಸತಿ ಶಾಲೆಯ ಕೇರ್ ಸೆಂಟರ್​ನಲ್ಲಿ ಅಗತ್ಯ ಸೌಲಭ್ಯ, ಆಕ್ಸಿಜನ್ ವ್ಯವಸ್ಥೆ ನಿರ್ವಹಣೆ, ವೈದ್ಯ ಸಿಬ್ಬಂದಿ ಕೊರತೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಊಟ, ವಸತಿ ಸೌಲಭ್ಯ ಇತರೆ ಅಗತ್ಯತೆ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ದಿಢೀರ್ ಭೇಟಿ ಪರಿಶೀಲಿಸಿದರು.

    ಒಂದಷ್ಟು ಸಣ್ಣಪುಟ್ಟ ಬೇಡಿಕೆಗಳ ಈಡೇರಿಕೆಗೆ ವೈದ್ಯರು ಮನವಿ ಸಲ್ಲಿಸಿದ್ದಾರೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ವೈದ್ಯಸಿಬ್ಬಂದಿ ಕೊರತೆ ಬಗ್ಗೆ ತಿಳಿಸಿದ್ದು, ಹೆಚ್ಚುವರಿ ವೈದ್ಯರ ನೇಮಿಸಲಾಗುವುದು. ಆಸ್ಪತ್ರೆಯ ಬೇಡಿಕೆಗಳನ್ನು ಗಮನಿಸಲು ಎಸಿಗೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಕರೊನಾ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಸರ್ಕಾರ ಅಗತ್ಯ ಅನುದಾನ ನೀಡಿದೆ. ಸೆ.2ರಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗುವ ವೈದ್ಯರಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ. ವಾರ್ಡ್​ನಿಂದ ವೀಡಿಯೋ ಕಾಲ್ ಮೂಲಕ ಎಸಿ ರೋಗಿಗಳ ಸಮಸ್ಯೆ ಆಲಿಸಲು, ಪರಿಹಾರ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಬಂದಗದ್ದೆಯಲ್ಲಿ ಸಹ ಸೋಂಕಿತರ ಅಹವಾಲು ಆಲಿಸಲಾಗಿದೆ. ಕರೊನಾ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಎಸಿ ಡಾ. ಎಲ್.ನಾಗರಾಜ್, ಟಿಎಚ್​ಒ ಡಾ. ಕೆ.ಎಸ್.ಮೋಹನ್, ಸಿವಿಲ್ ಸರ್ಜನ್ ಡಾ. ಕೆ.ಆರ್.ಪ್ರಕಾಶ್ ಬೋಸ್ಲೆ, ತಹಸೀಲ್ದಾರ್ ಚಂದ್ರಶೇಖರ ನಾಯ್್ಕ ವೈ.ಮೋಹನ್, ಜುಬೇದಾ ಆಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts