More

    ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕೃತ ಪ್ರಾರ್ಥನಾಗೆ ಸನ್ಮಾನ

    ಸೊರಬ: ಗ್ರಾಮೀಣ ಪ್ರದೇಶದ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸುವಲ್ಲಿ ಮುಂಚೂಣಿಯಲ್ಲಿದ್ದು ಅವರ ಅತಿಸೂಕ್ಷ್ಮ ಬುದ್ಧಿವಂತಿಕೆಗೆ ಇಂದು ಪ್ರಾರ್ಥನಾಳಿಗೆ ದೊರತಿರುವ ಶೌರ್ಯ ಪ್ರಶಸ್ತಿಯೇ ಸಾಕ್ಷಿ ಎಂದು ತಹಸೀಲ್ದಾರ್ ಡಾ. ಮೋಹನ್ ಭಸ್ಮೆ ತಿಳಿಸಿದರು.
    ಶನಿವಾರ ತಾಲೂಕಿನ ಉರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸಂಗ್ರಾಮ ಪರಿಷತ್, ತಾಲೂಕ ಆಡಳಿತ, ಯುವ ಬ್ರಿಗೇಡ್, ನಮ್ಮೂರು ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವ ವಿದ್ಯಾರ್ಥಿನಿ ಪ್ರಾರ್ಥನಾಳನ್ನು ಸನ್ಮಾನಿಸಿ ಮಾತನಾಡಿದರು.
    ಚಿಕ್ಕ ವಯಸ್ಸಿ ಪ್ರಾರ್ಥನಾ ಸಮಯಪ್ರಜ್ಞೆ ಮೆರೆದು ತಮ್ಮನ ಪ್ರಾಣ ರಕ್ಷಣೆ ಮಾಡಿರುವುದು ಪ್ರಶಂಸನೀಯ. ಇಂದು ಗ್ರಾಮೀಣ ಶಾಲೆಗಳು ಎಂದರೆ ಅಸಡ್ಡೆ ತೋರುವ ಜನರಿದ್ದಾರೆ. ಅಂತಹವರಿಗೆ ಪ್ರಾರ್ಥನಾಳಂತಹ ವಿದ್ಯಾರ್ಥಿಗಳು ಉತ್ತರ ಎಂದರು.
    ಜನಸಂಗ್ರಾಮ ಪರಿಷತ್ ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಸಮಯ ಪ್ರಜ್ಞೆ ಮೆರೆದು ಅಪಾಯದಿಂದ ತಮ್ಮನನ್ನು ರಕ್ಷಿಸಿರುವ ಪ್ರಾರ್ಥನಾಳ ಧೈರ್ಯ ಮೆಚ್ಚುವಂಥದು. ಶೌರ್ಯ ಪ್ರಶಸ್ತಿ ದೊರಕಿರುವುದು ಸಂತಸದ ವಿಚಾರ. ಮಕ್ಕಳು ಧೈರ್ಯಶಾಲಿಗಳಾಗಿರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts