More

    ಬಸವನಬಾಗೇವಾಡಿಯಲ್ಲಿ ಸಿಹಿಹಂಚಿ ಸಂಭ್ರಮಾಚರಣೆ

    ಬಸವನಬಾಗೇವಾಡಿ: ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಸಮಿತಿಯಿಂದ ಬಸವಾಭಿಮಾನಿಗಳು ಶುಕ್ರವಾರ ಪಟಾಕಿ ಸಿಡಿಸಿ ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.

    ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಬಸವ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಬಾರಿಯನ್ನಾಗಿ ನೇಮಿಸಿರುವುದು ನಾಡಿನ ಬಸವ ಭಕ್ತರಿಗೆ ಹರ್ಷ ತಂದಿದೆ. 12ನೇ ಶತಮಾನದಲ್ಲಿ ತಮ್ಮ ವಚನ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಬಸವಣ್ಣ ಮಾಡಿದ್ದರು. ಅವರ ಸಂದೇಶಗಳು ಇನ್ನೂ ಜಗತ್ತಿನ ತುಂಬೆಲ್ಲ ಹರಡುವಂತಹ ಕೆಲಸವಾಗಬೇಕಾಗಿದೆ. ಹಲವಾರು ವರ್ಷಗಳ ಹಿಂದೆಯೇ ಬಸವೇಶ್ವರರನ್ನು ಕರ್ನಾಟಕ ಸಾಂಸ್ಕೃತಿಕ ರಾಯಬಾರಿಯನ್ನಾಗಿ ಸರ್ಕಾರ ಘೋಷಣೆ ಮಾಡಬೇಕಾಗಿತ್ತು. ಎಲ್ಲ ಮಠಾಧೀಶರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವರಾದ ಶಿವಾನಂದ ಪಾಟೀಲ ಹಾಗೂ ಎಲ್ಲ ಸಚಿವ ಸಂಪುಟದ ಸದಸ್ಯರು ಕೂಡಿಕೊಂಡು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದರು.

    ಬಸವಣ್ಣ ಜನಿಸಿರುವ ಬಸವನಬಾಗೇವಾಡಿ ಸಮಗ್ರ ಅಭಿವೃದ್ಧಿಗೂ ಪ್ರತ್ಯೇಕ ಪ್ರಾಧಿಕಾರ ರಚಿಸಿ ಹಲವಾರು ದಶಕಗಳ ಕನಸನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಬೇಕು. ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ ಹಾಗೂ ಐಕ್ಯಸ್ಥಳ ಕೂಡಲಸಂಗಮ ಅಭಿವೃದ್ಧಿಯಾದಂತೆ ಬಸವ ಜನ್ಮಸ್ಥಳವಾದ ಬಸವನಬಾಗೇವಾಡಿಯನ್ನು ಅಭಿವೃದ್ಧಿ ಮಾಡುವ ಮೂಲಕ ಅವರ ತತ್ವ ಸಿದ್ದಾಂತಗಳನ್ನು ಜಗತ್ತಿಗೆ ಸಾರುವಂತ ಕಾರ್ಯಕ್ಕೆ ರಾಜ್ಯ ಸರ್ಕಾರ ಬರುವ ಬಜೆಟ್‌ನಲ್ಲಿ ಮುಂದಾಗಬೇಕು ಎಂದು ಹೇಳಿದರು.

    ಸಂಗಣ್ಣ ಕಲ್ಲೂರ, ಬಸವರಾಜ ಹಾರಿವಾಳ, ಸಿ.ಎಸ್. ಪಾಟೀಲ, ಸುಭಾಸ ಚಿಕ್ಕೊಂಡ, ರವಿ ರಾಠೋಡ, ಸಂಕನಗೌಡ ಪಾಟೀಲ, ಶೇಖರ ಗೊಳಸಂಗಿ, ಸುರೇಶ ಹಾರಿವಾಳ, ಸಂಗಮೇಶ ಓಲೇಕಾರ, ಅನೀಲ ಅಗರವಾಲ, ಡಾ. ಪುರಾಣಿಕಮಠ, ಈರಣ್ಣ ವಂದಾಲ, ಗಣೇಶ ಬಿರಾದಾರ, ರಾಜು ಮೋದಿ, ಡಾ. ಎಸ್.ಆರ್. ಮಠ, ವೆಂಕಟೇಶ ಚಿಕ್ಕೊಂಡ, ಉಮೇಶ ಹಾರಿವಾಳ, ರಮೇಶ ಯಳಮೇಲಿ, ಸುರೇಶಗೌಡ ಪಾಟೀಲ, ಆರ್.ಜಿ. ಅಳ್ಳಗಿ, ಎಸ್.ಕೆ. ಸೋಮನಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts