More

    ಕೆರೆ ಬರ್ ವಲಯ ಒತ್ತುವರಿ ; ಕೆಎಸ್‌ಪಿಸಿಬಿ ಮತ್ತು ಇತರರಿಂದ ಮಾಹಿತಿ ಕೋರಿದ ಎನ್‌ಜಿಟಿ

    ಬೆಂಗಳೂರು: ಮಹದೇವಪುರದಲ್ಲಿ ಕೆರೆಯ ಬಫರ್ ವಲಯದ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸದಸ್ಯ ಕಾರ್ಯದರ್ಶಿ ಹಾಗೂ ಇತರ ಇಬ್ಬರಿಂದ ವಿವರಣೆ ಕೇಳಿದೆ.

    ಪಟ್ಟಂದೂರು ಅಗ್ರಹಾರ ಕೆರೆಯ ಬಫರ್ ವಲಯದಲ್ಲಿ ಅನಧಿಕೃತವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ ಎಂಬ ಪತ್ರಿಕೆಯ ವರದಿಯ ಮೆರೆಗೆ ಎನ್‌ಜಿಟಿಯು ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ಎ. ಸೆಂಥಿಲ್ ವೇಲ್ ಅವರ ನೇತೃತ್ವದ ವಿಭಾಗೀಯ ಪೀಠವು, ಈ ಸುದ್ದಿಯು ಪರಿಸರ ನಿಯಮಗಳ ಅನುಸರಣೆಗೆ ಸಂಬಂಧಿಸಿದ ಗಣನೀಯ ಸಮಸ್ಯೆಯನ್ನು ಹೇಳಿದೆ ಎಂದು ಅಭಿಪ್ರಾಯಪಟ್ಟಿತು.

    ಅಲ್ಲದೆ, ಪ್ರಕರಣದ ಸಲುವಾಗಿ ನ್ಯಾಯಾಧೀಕರಣದ ಮುಂದೆ ಹಾಜರಾಗಿ ಪ್ರತಿಕ್ರಿಯೆ ಸಲ್ಲಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾಲಾವಕಾಶ ಕೇಳಿದ್ದರಿಂದ ವಿಚಾರಣೆ ಮೂಂದೂಡಿದೆ. ಈಗಾಗಲೇ ಪ್ರಕರಣ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts