More

    ಕೆರೆಮನೆ ನಾಟ್ಯೋತ್ಸವ ನಾಳೆಯಿಂದ

    ಹೊನ್ನಾವರ: ಸಾಂಪ್ರದಾಯಿಕ ಶೈಲಿ ಮತ್ತು ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆಯುತ್ತಿ ರುವ ಹೊನ್ನಾವರ ತಾಲೂಕಿನ ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ವೈವಿಧ್ಯಮಯ ಕಲಾಪ್ರಕಾರಗಳ ಪ್ರದರ್ಶನದ ಮೂಲಕ ನಾಡಿನ ಕಲಾಸಕ್ತರ ಗಮನ ಸೆಳೆಯುತ್ತಿದೆ.

    ಈ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆ. 20 ರಿಂದ 24ರವರೆಗೆ ಐದು ದಿನಗಳ ಕಾಲ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ. ನಾಟ್ಯೋತ್ಸವದ ಕಲಾಕ್ಷೇತ್ರದಲ್ಲಿ ಮಿಂಚಿ ಮರೆಯಾದ ಕಲಾಚೇತನಗಳ ಸ್ಮರಣೆ, ಸಾಧನೆ ಹಾದಿಯಲ್ಲಿ ಎತ್ತರಕ್ಕೆ ಏರಿದ ಕಲಾವಿದರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ವಿವಿಧ ಕಲಾ ಪ್ರಕಾರಗಳ ತರಬೇತಿ ಶಿಬಿರ ಹೀಗೆ ಹಲವು ಬಗೆಗಳಲ್ಲಿ ಭಾರತೀಯ ರಂಗಪರಂಪರೆಯ ವಿವಿಧ ಮಜಲುಗಳು ಅನಾವರಣಗೊಳ್ಳಲಿವೆ.

    20 ರಂದು ಸಂಜೆ 5ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸುವರು. ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸುವರು. ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರಿನ ಜಿ.ಎಸ್. ಭಟ್ ಬರೆದ ‘ಇಡಗುಂಜಿ ಮೇಳ 85’ ಕೃತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಡಾ. ಪದ್ಮಾಸುಬ್ರಹ್ಮಣ್ಯಂ ಅವರಿಗೆ ನಾಟ್ಯೋತ್ಸವದ ಕೊನೇ ದಿನ 24 ರಂದು ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುವುದು.

    ನಾಟ್ಯೋತ್ಸವ ಕಲಾ ಪ್ರದರ್ಶನ: 20ರಂದು ಸಂಜೆ 6.30ಕ್ಕೆ ಸೈಯದ್ ಸಲ್ಲಾವುದ್ದೀನ್ ಪಾಷಾ ಇವರ ನಿರ್ದೇಶನದಲ್ಲಿ ಗಾಲಿಕುರ್ಚಿಯಲ್ಲಿ ಅಂಗವಿಕಲರ ವಿವಿಧ ನಾಟ್ಯ ಪ್ರದರ್ಶನ, ಬೆಂಗಳೂರು ಕಲಾದರ್ಶಿನಿಯಿಂದ ‘ಅಭಿಮನ್ಯು ವಧೆ’ ಯಕ್ಷಗಾನ ಬ್ಯಾಲೆ ಪ್ರದರ್ಶನ ನಡೆಯಲಿದೆ. 21 ರಂದು ಸಂಜೆ 6ಕ್ಕೆ ಬೆಂಗಳೂರಿನ ಮಧುಲಿತ ಮಹೋಪಾತ್ರ ನಿರ್ದೇಶನದಲ್ಲಿ ಪರಿಧಿ ಜೋಷಿ, ಭಾರ್ಗವಿ ದೇಬರತಿ ದತ್ತ ಅವರಿಂದ ‘ಶಿವ ಮತ್ತು ಶಕ್ತಿ’ ಒಡಿಸ್ಸಿ ನೃತ್ಯ, ಛತ್ತೀಸಗಡದ ಅನುಪ್ ರಂಜನ್ ಪಾಂಡೆ ನಿರ್ದೇಶನದಲ್ಲಿ ‘ದೇವ್ ಪಾದ್’ ಆದಿವಾಸಿ ನೃತ್ಯ ನಡೆಯಲಿದೆ. ಒಡಿಸ್ಸಾದ ಮನ್ಮಥಕುಮಾರ ಸತ್ಪತಿ ಅವರ ಸಂಯೋಜನೆಯಲ್ಲಿ ಗಂಜಾಂ ಒಡಿಸ್ಸಾ ತಂಡದಿಂದ ಗೊಂಬೆಯಾಟ ಮತ್ತು ಜಾನಪದ ನೃತ್ಯ ನಡೆಯಲಿದೆ. 22 ಸಂಜೆ ಸಂಜೆ 6ಕ್ಕೆ ಗುವಾಹಟಿಯ ಪ್ರಂಜಲ್ ಸೈಕಿಯಾ ನಿರ್ದೇಶನದಲ್ಲಿ ‘ಅಂಕಿಯಾ ನಾಟ್ ಕೇಲಿ ಗೋಪಾಲ’ ಜಾನಪದ ನೃತ್ಯ ನಡೆಯಲಿದೆ. ಕೇರಳದ ಪೋಕ್ ಲ್ಯಾಂಡ್ ಅವರಿಂದ ತೋಳ್ಪಾವಕುತ್ತು ತೊಗಲು ಬೊಂಬೆಯಾಟ ಪ್ರದರ್ಶನ ನಡೆಯಲಿದೆ. ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು, ಶಂಕರ ಕಬಾಡಿ ವಯೋಲಿನ್​ನೊಂದಿಗೆ ಸ್ವರಧಾರ ಸಮ್ಮೇಳನ ನಡೆಯಲಿದೆ. 23ರಂದು ಸಂಜೆ 6ಕ್ಕೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಸಂಗೀತ, ವಿದ್ಯಾ ಅಂಗಾರ ಅವರಿಂದ ಕುಚುಪುಡಿ ನೃತ್ಯ ಮತ್ತು ಶ್ರೀಹರಿ ಮತ್ತು ಚೇತನ ಅವರಿಂದ ಕಥಕ್ ನೃತ್ಯ ನಡೆಯಲಿದೆ. 24 ರಂದು ಸಂಜೆ 6.30ಕ್ಕೆ ಭುವನೇಶ ಕೋಮ್ಕಳಿ, ಕಲಾಪಿನಿ ಕೋಮ್ಕಳಿ ಅವರಿಂದ ಸಗುಣ ನಿರ್ಗಣ ಭಕ್ತಿ ಸಂಗೀತ, ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ‘ಕ್ಷಾತ್ರ ದ್ರೌಪದಿ’ ಭರತನಾಟ್ಯ, ಸಿಂಗಾಪುರದ ಅಪ್ಸರಾ ಆರ್ಟ್ಸ್ ಡಾನ್ಸ್ ಕಂಪನಿಯಿಂದ ಅರವಿಂದ ಕುಮಾರಸ್ವಾಮಿ ನಿರ್ದೇಶನದಲ್ಲಿ ಮೋಹನಪ್ರಿಯ ಥವರಾಜ್ ಅವರಿಂದ ನವರಸ ವರ್ಣಂ ಭರತನಾಟ್ಯ ಪ್ರದರ್ಶನ ನಡೆಯಲಿದೆ.

    ನಾಟ್ಯೋತ್ಸವದಲ್ಲಿ ವಿವಿಧ ಬಗೆಯ ಕಲಾ ಪ್ರದರ್ಶನ ನಡೆಯ ುಲಿದೆ. ಸಮಾಜಕ್ಕೆ ಕೊಡುಗೆ ನೀಡಿದ ವರನ್ನು ಗೌರವಿಸಲಾಗುತ್ತಿದೆ. ಪ್ರತಿನಿತ್ಯ ಕಾರ್ಯಕ್ರಮವನ್ನು ಅಗಲಿದ ಯಕ್ಷಚೇತನಗಳಿಗೆ ಸಮರ್ಪಿಲಾಗುವುದು.
    | ಕೆರೆಮನೆ ಶಿವಾನಂದ ಹೆಗಡೆ ಮಂಡಳಿಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts