More

    ಕೆಪಿಟಿಸಿಎಲ್ ವಿರುದ್ಧ ರೈತರ ಗರಂ

    ಚಿತ್ರದುರ್ಗ: ನೋಟಿಸ್ ನೀಡದೆ, ಪರಿಹಾರ ಮೊತ್ತ ತಿಳಿಸದೆ ಮತ್ತು ಪರಿಹಾರ ಕೊಡದೆ ಪೊಲೀಸ್ ರಕ್ಷಣೆಯೊಂದಿಗೆ ದೌರ್ಜನ್ಯ ಎಸಗಲು ಕೆಪಿಸಿಸಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ತಾಲೂಕು ಹರಿಯಬ್ಬೆ ರೈತರು ಬುಧವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

    ಹಿರಿಯೂರಿಂದ ಹರಿಯಬ್ಬೆವರೆಗೆ 220/66/11ಕೆವಿ ವಿದ್ಯುತ್ ಮಾರ್ಗ ಕಾಮಗಾರಿ ಜಿಲ್ಲಾಧಿಕಾರಿ ಹೆಸರು ಹೇಳಿಕೊಂಡು ರೈತರಿಗೆ ಸೂಕ್ತ ಮಾಹಿತಿ ಕೊಡದೆ ಕಾಮಗಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ನಡೆದಿದ್ದ ಅಧಿಕಾರಿ-ರೈತರ ಸಭೆಯಲ್ಲಿ, ಈ ಮಾರ್ಗಕ್ಕೆ ವಿಶೇಷ ಅನುದಾನವಾಗಿ 3.25 ಕೋಟಿ ರೂ. ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ತಿಳಿಸಿದ್ದರು. ಜತೆಗೆ ಎಲ್ಲ ರೈತರಿಗೆ ಪರಿಹಾರವನ್ನು ಕೊಟ್ಟು ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

    ಆದರೆ, ಅಧಿಕಾರಿಗಳು ಇದನ್ನು ಉಲ್ಲಂಘಿಸಿ ಡಿಸಿ ಹೇಳಿದ್ದಾರೆ ಎಂದು ಸುಳ್ಳು ಹೇಳಿ, ಪೊಲೀಸರೊಂದಿಗೆ ಬಂದು ಕಾಮಗಾರಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಸುತ್ತಿದ್ದಾರೆ. ಖಾಲಿ ಛಾಪ ಕಾಗದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದ್ದು, ನಮ್ಮನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆಂದು ದೂರಿದರು.

    ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸದೆ ಇದ್ದಲ್ಲಿ 1200 ರೈತರು ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
    ರಘುನಾಥ್, ಜಿ.ತಿಮ್ಮಣ್ಣ, ರಾಮಣ್ಣ, ಕೆ.ಟಿ.ತಿಪ್ಪೇಸ್ವಾಮಿ, ಹನುಮಂತರಾಯ, ಪುಟ್ಟಣ್ಣ, ತಿಪ್ಪೇಸ್ವಾಮಿ, ಶಿವಣ್ಣ, ಚಂದ್ರಪ್ಪ, ಗಂಗಮ್ಮ, ಕರಿಯಮ್ಮ, ಗಾಯತ್ರಮ್ಮ, ಗೌರಮ್ಮ ಮತ್ತಿತರರು ಇದ್ದರು.

    ಮೋಟಾರ್, ಪಂಪ್‌ಸೆಟ್ ನೀಡಿ
    ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2016-17 ಮತ್ತು 2017-18ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬೋರ್‌ವೆಲ್‌ಗಳಿಗೆ ಡಿ.ದೇವರಾಜ ಅರಸು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಮೋಟಾರ್,ಪಂಪ್‌ಸೆಟ್‌ಗಳನ್ನು ವಿತರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ‌್ಯಕರ್ತರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ರಾಜ್ಯ ಪ್ರಧಾನ ಕಾರ‌್ಯದರ್ಶಿ ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಡಿ.ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಮಲ್ಲಾಪುರ ರುದ್ರಸ್ವಾಮಿ, ಇ.ಅಣ್ಣಪ್ಪ, ಮೋಹನ್‌ಕುಮಾರ, ಹಂಪಯ್ಯನಮಾಳಿಗೆ, ಧನಂಜಯ, ಎನ್.ಎಚ್.ರಾಜು, ರಾಮಚಂದ್ರಪ್ಪ, ಗೌಡಪ್ಪ, ಚಂದ್ರಪ್ಪ, ಎಂ.ಕೆ.ರಾಜೇಶ್, ಜಿ.ತಿಪ್ಪೇಸ್ವಾಮಿ, ಜಿ.ಬಾಲರಾಜು, ಬಸವರಾಜಪ್ಪ,ದೇವರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts