More

    ಕೆಂಭಾವಿಯಲ್ಲಿ ಸಂಭ್ರಮದ ನಾಗಪಂಚಮಿ

    ಕೆಂಭಾವಿ : ಪಟ್ಟಣ ಸೇರಿ ವಲಯಾದ್ಯಂತ ಸೋಮವಾರ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಬಹುತೇಕರು ಮನೆಯಲ್ಲಿ ನಾಗಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಹುತ್ತ, ನಾಗರಮೂರ್ತಿಗಳಿಗೆ ಹಾಲೆರೆದು ಭಕ್ತಿ ಮೆರೆದರು.

    ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮುಂದೆ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಗ್ಗೆಯೇ ಶ್ರಾವಣ ಮಾಸದ ಮೊದಲ ಹಬ್ಬವಾದ ಪಂಚಮಿಯನ್ನು ಸಂಭ್ರಮದಿAದ ಸ್ವಾಗತಿಸಿದರು. ಪಟ್ಟಣದ ರೇವಣಸಿz್ದÉÃಶ್ವರ ದೇವಸ್ಥಾನದಲ್ಲಿನ ನಾಗರಮೂರ್ತಿ, ಸಂಜೀವಾAಜನೇಯ ದೇವಸ್ಥಾನ, ಹಿಲ್‌ಟಾಪ್ ಕಾಲನಿ, ಆಶ್ರಯ ಕಾಲನಿಗಳಲ್ಲಿನ ನಾಗರಮೂರ್ತಿಗೆ ಹಾಲೆರೆದು ಪೂಜಿಸಿದರು.

    ಅಳ್ಳಿಟ್ಟು, ತಂಬಿಟ್ಟು, ಎಳ್ಳು, ಶೇಂಗಾ ಉಂಡಿ, ರವೆ ಉಂಡಿ ಸೇರಿ ವಿವಿಧ ಬಗೆಯ ಖಾದ್ಯ ಸಿದ್ಧಪಡಿಸಿ ನಾಗಪ್ಪನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿದರು. ಮಹಿಳೆಯರು, ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು. ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬವಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts