More

    ದಾಸ ಸಾಹಿತ್ಯದ ಕೀರ್ತಿ ಹೆಚ್ಚಿಸಿದ ಪುರಂದರು

    ಕೆಂಭಾವಿ: ದಾಸ ಸಾಹಿತ್ಯ ಕೀರ್ತನೆ ಮೂಲಕ ಸಾಮಾನ್ಯ ಜನತೆಗೆ ತಿಳಿ ಹೇಳಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ ಎಂದು ಸಂಸ್ಕೃತ ಭಾರತಿ ಪ್ರತಿಷ್ಠಾನದ ವಿಭಾಗೀಯ ಸಂಚಾಲಕ ತಿರುಮಲಾಚಾರ್ಯ ಜೋಶಿ ಹೇಳಿದರು.

    ಉತ್ತರಾದಿ ಮಠದಲ್ಲಿ ಮಂಗಳವಾರ ಹಮ್ಮಿಕೊಂಡ ಪುರಂದರ ದಾಸರ ಆರಾಧನೆಯಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮ ನಾಡಿನಲ್ಲಿ ಅನೇಕ ದಾಸರು, ಶರಣರು, ಸಂತರು, ಸತ್ಪುರುಷರು ಆಗಿ ಹೋಗಿದ್ದಾರೆ. ಪುರಂದರ ದಾಸರು ರಚಿಸಿದ ಅನೇಕ ಕೃತಿಗಳನ್ನು ರಕ್ಷಿಸುವಲ್ಲಿ ಸರ್ಕಾರ ಮುಂದೆ ಬರಬೇಕು ಎಂದರು.

    ತಿರುಮಲಾಚಾರ್ಯ ಜೋಶಿ, ವಾಮನರಾವ ದೇಶಪಾಂಡೆ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ , ಮಲ್ಲಾರಾವ ಕುಲಕರ್ಣಿ, ಮಧ್ವರಾವ ನಾಡಿಗೇರ, ಹಳ್ಳೆಪ್ಪಾಚಾರ್ಯ ಚನ್ನೂರ ಇತರರಿದ್ದರು. ಪುರಂದರ ದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಸರ್ವೋತ್ತಮಾಚಾರ್ಯ ಜೋಶಿ ಅವರಿಂದ ಅನ್ನಸಂತರ್ಪಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts