More

    ಸ್ವಾತಂತ್ರ್ಯ ಅಮೃತೋತ್ಸವಕ್ಕೆ ನಿರಾಸಕ್ತಿ !

    ಕೆಂಭಾವಿ: ಸ್ವಾತಂತ್ರೃ ಅಮೃತ ಮಹೋತ್ಸವಕ್ಕೆ ಇಡೀ ದೇಶ ಸರ್ವಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲೂ ಈ ಸಂಭ್ರಮ ಇಮ್ಮಡಿಗೊಳಿಸಲು ಅಧಿಕಾರಿ ವರ್ಗ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಸ್ಥಳೀಯ ಪುರಸಭೆ ಮಾತ್ರ ಭಿನ್ನವಾಗಿದ್ದು, ಮಹೋತ್ಸವ ವಿಷಯದಲ್ಲಿ ನಿರಾಸಕ್ತಿ ತೋರುತ್ತಿದೆ.

    ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಈ ಕುರಿತು ಹಲವು ಪೂರ್ವಭಾವಿ ಸಭೆ ನಡೆದು ಅಮೃತೋತ್ಸವ ಸಂಭ್ರಮ ಹೇಗಿರಬೇಕು ಎಂಬ ಬಗ್ಗೆ ಚಚರ್ೆ, ಸಮಾಲೋಚನೆಗಳಾಗಿವೆ. ಆದರೆ ಈ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲಿಕಾಜರ್ುನ ರಾಮಸಮುದ್ರ ಶುಕ್ರವಾರ ನಾಮ್ಕೇವಾಸ್ತೆ ಎನ್ನುವಂತೆ ಚುನಾಯಿತ ಸದಸ್ಯರ ಸಭೆ ಕರೆದಿದ್ದರು. ಆದರೆ ಕಾರ್ಯಕ್ರಮಕ್ಕೆ ಗಣ್ಯರನ್ನು ಕರೆಸುವ ವಿಚಾರದಲ್ಲಿ ಜಿದ್ದಾಜಿದ್ದಿಗೆ ಬಿದ್ದವರಂತೆ ಬಿಜೆಪಿ-ಕಾಂಗ್ರೆಸ್ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಸಭೆ ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.

    ಸಗರನಾಡಿನಲ್ಲೇ ಪ್ರಾಚೀನ ಇತಿಹಾಸ ಹೊಂದಿರುವ ಹಲವು ದೇವಸ್ಥಾನ, ಮೂವರು ಸ್ವತಂತ್ರ ಹೋರಾಟಗಾರರು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ಚಿತ್ರಕಲೆ, ಜನಪದ ಕಲೆ ಹೀಗೆ ಹತ್ತು ಹಲವು ವಿಷಯಗಳ ಆಗರವಾಗಿರುವ ಕೆಂಭಾವಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.

    ರಾಜಕೀಯ ಸಂಘರ್ಷ ಕಾರಣ: ಕಾರ್ಯಕ್ರಮಕ್ಕೆ ಗಣ್ಯರ ಆಹ್ವಾನ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಒಮ್ಮತ ಮೂಡದ್ದರಿಂದ ಶುಕ್ರವಾರದ ಪೂರ್ವಭಾವಿ ಸಭೆಯನ್ನು ಅರ್ಧಕ್ಕೆ ಮೊಟಕುಗಳಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪುರಸಭೆಯ 23 ವಾಡರ್್ ನಿವಾಸಿಗಳಲ್ಲದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರೆ, ಕೇವಲ ಪುರಸಭೆಗೆ ಸಂಬಂಧಿಸಿದ ನಿವಾಸಿಗಳನ್ನು ಆಹ್ವಾನಿಸಬೇಕು ಎಂಬುದು ಕಾಂಗ್ರೆಸಿಗರ ಒತ್ತಡ. ಇದು ವಿಕೋಪಕ್ಕೆ ಹೋಗಿದ್ದರಿಂದಲೇ ಸಭೆ ಮುಂದೂಡಲಾಗಿದೆೆ. ಇದರಲ್ಲಿ ರಾಜಕೀಯ ಬೆರಸದೆ ಈ ಸಂಭ್ರಮವನ್ನು ಸುವಣರ್ಾಕ್ಷರಗಳಲ್ಲಿ ಬರೆದಿಡುವಂತೆ ಪುರಸಭೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts