More

    ಕೃಷಿ ಪತ್ತಿನ ಸಹಕಾರಿ ಸಂ. ರೈತರ ಜೀವನಾಡಿ – ಡಾ.ಪ್ರಭಾಕರ ಕೋರೆ

    ಚಿಕ್ಕೋಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಗಳು ರೈತರ ಜೀವನಾಡಿಯಾಗಿವೆ ಎಂದು ಅಂಕಲಿ ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಸಂಸ್ಥಾಪಕರು, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

    ತಾಲೂಕಿನ ಕಲ್ಲೊಳ ಗ್ರಾಮದಲ್ಲಿ ಈಚೆಗೆ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಸಹಕಾರಿ ಸಂಗಳು ಅನೇಕ ಏಳು ಬೀಳುಗಳೊಂದಿಗೆ ಮತ್ತು ಅನೇಕ ಮಹನೀಯರ ಶ್ರಮದಿಂದ ಇಂದು ಹೆಮ್ಮರವಾಗಿ ಬೆಳೆದಿದೆ.

    ಸಹಕಾರ ಸಂಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, 12 ವರ್ಷಗಳಲ್ಲಿ ಕಲ್ಲೋಳ ಬಸವೇಶ್ವರ ಪಿಕೆಪಿಎಸ್​ ಸ್ವತ@ ಕಟ್ಟಡ ಹೊಂದಿರುವುದು ವಿಶೇಷ. ಅದಕ್ಕೆ ಆಡಳಿತ ಮಂಡಳಿಯ ಪ್ರಾಮಾಣಿಕತೆ ಹಾಗೂ ಸಿಬ್ಬಂದಿ ಸೇವೆಯೇ ಕಾರಣ ಎಂದರು.

    ಕಟ್ಟಡ ಉದ್ಘಾಟಿಸಿದ ನಿಡಸೋಸಿ ಸಿದ್ದಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸಹಕಾರಿ ಸಂಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದರಿಂದ ಸಹಕಾರಿ ೇತ್ರ ಬೆಳೆಯುತ್ತಿದೆ. ವೃತ್ತಿಪರತೆ ಅಳವಡಿಸಿಕೊಳ್ಳದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಪತ್ತಿನ ಸಂಗಳು ಬೆಳೆಯುವುದು ಕಷ್ಟ ಎಂದರು.

    ಯಡೂರ ಹಾಗೂ ಶ್ರೀಶೈಲ ಪೀಠದ ಜಗದ್ಗುರು ಡಾ.ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಕಾರ ಸಂಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

    ಜ್ಯೋತಿಪ್ರಸಾದ ಜೊಲ್ಲೆ, ಹಾಲಶುಗರ್​ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಬೀರೇಶ್ವರ ಸೌಹಾರ್ದ ಸಹಕಾರಿಯ ಚೇರ್ಮನ್​ ಜಯಾನಂದ ಜಾಧವ, ಪ್ರಕಾಶ ಮಿರ್ಜೆ, ಪ್ರವಿಣ ಜೋಶಿ, ಅಜಿತ ಪೂಜಾರಿ, ದೇವಕಿ ಹಿರೇಮಠ, ರವೀಂದ್ರ ಗಾಳೆ, ದುಂಡಪ್ಪ ಭಿರಡೆ, ಬಸವರಾಜ ಅವಟೆ, ರಾಜೇಂದ್ರ ತೇಲಿ, ಸವಿತಾ ಜಯಕರ ಶೇಡಬಾಳೆ, ಮುಖ್ಯ ಕಾರ್ಯನಿರ್ವಾಹಕ ಶಿವಗೌಡ ಪಾಟೀಲ ಉಪಸ್ಥಿತರಿದ್ದರು. ಶಿವಗೌಡ ನರಸಗೌಡ ಪಾಟೀಲ ಸ್ವಾಗತಿಸಿದರು. ಬಿ.ಎನ್​.ಪಾಟೀಲ ನಿರೂಪಿಸಿದರು. ಬಸವರಾಜ ಅವಟೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts