More

    ಕೃಷಿ ಜಮೀನಿಗೆ ದಾರಿ ಮಾಡಿಕೊಡಲು ಆಗ್ರಹ

    ತಾಳಿಕೋಟೆ: ಕೃಷಿ ಜಮೀನಿಗೆ ವಹಿವಾಟು ದಾರಿ ಮಾಡಿ ಕೊಡಲು ಸರ್ಕಾರ ಹಾಗೂ ನ್ಯಾಯಾಲಯದ ಆದೇಶವಿದ್ದರೂ ದಾರಿ ಮಾಡಿಕೊಡಲು ಹಿಂದೇಟು ಹಾಕುತ್ತಿರುವ ತಾಳಿಕೋಟೆ ತಹಸೀಲ್ದಾರ್ ಕೀರ್ತಿ ಚಾಲಕ ಅವರ ನಡೆ ಖಂಡಿಸಿ ತಹಸೀಲ್ದಾರ್ ಕಚೇರಿ ಮೂಲಕ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಆಯುಕ್ತರಿಗೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

    ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತಾಳಿಕೋಟೆ ತಾಲೂಕಿನ ಪತ್ತೇಪುರ ಗ್ರಾಮದ 30ಕ್ಕೂ ಹೆಚ್ಚು ಜಮೀನಿಗೆ ದಾರಿ ಸಮಸ್ಯೆ ಇದೆ. ನಕ್ಷೆಯಲ್ಲಿ ದಾರಿ ಗುರುತು ಇದ್ದು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾರಿ ಕೊಡಲು ಆದೇಶವಾಗಿದೆ. ಹೀಗಿದ್ದರೂ ತಹಸೀಲ್ದಾರ್ ಅವರು ದಾರಿ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.

    ಕೂಡಲೇ ಜಿಲ್ಲಾಧಿಕಾರಿ ಅವರು ತಹಸೀಲ್ದಾರ್ ಅವರಿಗೆ ಸರ್ಕಾರದ ಆದೇಶ ಪಾಲನೆಗೆ ಕೂಡಲೇ ಸೂಚಿಸಬೇಕು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹೋಗಿ ಬರಲು ತಕ್ಷಣ ದಾರಿ ಮಾಡಿಕೊಡದಿದ್ದರೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.

    ತಹಸೀಲ್ದಾರ್ ಕಚೇರಿಯ ಎಫ್‌ಡಿಸಿ ತಿರುಪತಿ ಅಲ್ಟಿ ಮನವಿ ಸ್ವೀಕರಿಸಿದರು. ಶ್ರೀನಿವಾಸ ಗೊಟಗುಣಕಿ, ಮಡಿವಾಳಪ್ಪ ಕಲಬುರ್ಗಿ, ಮಾಳಪ್ಪ ಮಾಘಣಗೇರಿ, ಶಿವಣ ಸಿಂಗನಳ್ಳಿ, ಮಲ್ಲಣ್ಣ ಸಿಂಗನಳ್ಳಿ, ಸುಭಾಸ ಸಿಂಗನಳ್ಳಿ, ಎಸ್.ಪಿ.ಚಿಂಚೊಳ್ಳಿ, ದೇವೆಂದ್ರ ಸಿಂಗನಳ್ಳಿ, ಆರ್.ಕೆ.ಹಡಪದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts