More

    ಕುಸಿದು ಬಿದ್ದ ವೃದ್ಧೆಗೆ ಪ್ರಾಥಮಿಕ  ಚಿಕಿತ್ಸೆ ನೀಡಿದ ವೈದ್ಯ ಜಿಲ್ಲಾಧಿಕಾರಿ!

    ದಾವಣಗೆರೆ:ನ್ಯಾಯಾಲಯ ಕಲಾಪ ವೇಳೆ ಅಸ್ವಸ್ಥರಾಗಿ ಕುಸಿದುಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಯೋವೃದ್ಧೆಗೆ ನ್ಯಾಯಾಧೀಶ ಸ್ಥಾನದಲ್ಲಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ವತಃ ಫೀಜಿಯೋಥೆರಪಿಯೊಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಿರಿಯ ನಾಗರಿಕರ ಕುಂದುಕೊರತೆಗಳಿಗೆ ಸಂಬಂಧಿಸಿದ ನ್ಯಾಯಾಲಯ ಕಲಾಪವನ್ನು ಡಿಸಿ ಡಾ.ಎಂ.ವಿ.ವೆಂಕಟೇಶ್ ನಡೆಸುತ್ತಿದ್ದರು.
    ಹಾವೇರಿಯ 73 ವರ್ಷದ ವೃದ್ಧೆ ಮುರಿಗೆಮ್ಮ ಧರ್ಮಪ್ಪ ಎಂಬುವರು ಕುಂದುಕೊರತೆ ಸಂಬಂಧಿತ ಪ್ರಕರಣದಲ್ಲಿ ಕಕ್ಷಿದಾರರಾಗಿ ನ್ಯಾಯಾಲಯದಲ್ಲಿ ಭಾಗಿಯಾಗಿದ್ದರು. ಕಲಾಪದ ಹಂತದಲ್ಲಿಯೇ ವೃದ್ಧೆ ಅಸ್ವಸ್ಥರಾಗಿ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು.
    ನ್ಯಾಯಾಧೀಶ ಸ್ಥಾನದಲ್ಲಿದ್ದ ಮೂಲತಃ ಜನರಲ್ ಮೆಡಿಸಿನ್ ವೈದ್ಯರೂ ಆಗಿರುವ ಡಿಸಿ ವೆಂಕಟೇಶ ಅವರು ತಕ್ಷಣವೇ ವೃದ್ಧೆಯ ಶುಶ್ರೂಷೆಗೆ ಮುಂದಾದರು. ಸಿಬ್ಬಂದಿ ಕೈ ಜೋಡಿಸಿದರು.
    ಕಡಿಮೆ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾದ ವೃದ್ಧೆಯ ನಾಡಿ ಪರೀಕ್ಷೆ ಮಾಡುತ್ತಲೇ ಚಿಕಿತ್ಸಾ ಸಲಹೆ, ಪಿಜಿಯೋಥೆರಪಿ (ಸಿಪಿಆರ್) ಮಾಡುವ ಮೂಲಕ ಎಚ್ಚರಗೊಳಿಸುವಲ್ಲಿ ಸಫಲರಾದರು. ಚೇತರಿಸಿಕೊಂಡ ವೃದ್ಧೆಯನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಡಿಸಿ ಮತ್ತು ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts