More

    ಕುಂದರಗಿ ಸಹಕಾರಿ ಸಂಘದ ಸುವರ್ಣ ಸಂಭ್ರಮ ಇಂದು

    ಯಲ್ಲಾಪುರ: ತಾಲೂಕಿನ ಕುಂದರಗಿ ಸೇವಾ ಸಹಕಾರಿ ಸಂಘವು ಸುವರ್ಣ ಸಂಭ್ರಮದಲ್ಲಿದ್ದು, ಸುವರ್ಣ ಮಹೋತ್ಸವ ಅಂಗವಾಗಿ ಫೆ. 18ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

    1968ನೇ ಏಪ್ರಿಲ್ 10ರಂದು ಕುಂದರಗಿ ಗ್ರುಪ್ ಸೇವಾ ಸಹಕಾರಿ ಸಂಘ ನಿ., ಭರತನಹಳ್ಳಿ ನಾಮಕರಣದೊಂದಿಗೆ 143 ಜನ ಷೇರುದಾರ ಸದಸ್ಯರೊಂದಿಗೆ 1690 ರೂ. ಷೇರಿನೊಂದಿಗೆ ಸಂಘ ಸ್ಥಾಪನೆಯಾಯಿತು.

    ಎನ್.ಎಸ್. ಹೆಗಡೆ ಕುಂದರಗಿ ಸಂಘದ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಭರತನಹಳ್ಳಿ ಪ್ಯಾಡಿ ಸೊಸೈಟಿ ನಡೆಸುತ್ತಿದ್ದ ಕಿರಾಣಿ ಅಂಗಡಿಯನ್ನು 1970ರಲ್ಲಿ ಸಂಘ ವಹಿಸಿಕೊಂಡಿತು.

    ಸ್ಪರ್ಧಾತ್ಮಕ ದರಗಳಲ್ಲಿ ಜೀವನಾವಶ್ಯಕ ವಸ್ತುಗಳು, ಗೊಬ್ಬರ, ಸಿಮೆಂಟ್, ನೀರಾವರಿ ಸಾಮಗ್ರಿಗಳು ಇತ್ಯಾದಿಗಳ ಮಾರಾಟ ವ್ಯವಸ್ಥೆ ಮಾಡಲಾಯಿತು. ಸುಮಾರು 47 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ನವೀನ ಮಾದರಿಯ ಕಟ್ಟಡ, ಸಭಾಭವನ, ಗೋಡಾನ್, ಸೇಫ್ ಲಾಕಕ್ ವ್ಯವಸ್ಥೆ ಹೊಂದಿರುವ ಸಂಘದ ವ್ಯವಹಾರಗಳು ಗಣಕೀಕೃತಗೊಂಡಿವೆ. ಸತತ ಲಾಭದೊಂದಿಗೆ ಸಂಘದ ವಾರ್ಷಿಕ ವಹಿವಾಟು 90 ಕೋಟಿ ರೂ. ದಾಟಿದೆ. ಪ್ರಸ್ತುತ ಸಂಘದ ಅಧ್ಯಕ್ಷ ಹೇರಂಬ ಹೆಗಡೆ ಭರತನಹಳ್ಳಿ, ಮುಖ್ಯಕಾರ್ಯನಿರ್ವಾಹಕರಾಗಿ ನರೇಂದ್ರ ಭಟ್ಟ ಹಾಗೂ ಸ್ಥಳೀಯ ಪ್ರಮುಖರ ನೇತೃತ್ವದಲ್ಲಿ ಸುವರ್ಣ ಸಂಭ್ರಮಕ್ಕೆ ಸಂಘ ಸಜ್ಜುಗೊಂಡಿದೆ.

    ಸುವರ್ಣ ಸಂಭ್ರಮ: ಫೆ. 18ರಂದು ಬೆಳಗ್ಗೆ 10ಕ್ಕೆ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ವಾಯುಮಾಲಿನ್ಯ ತಪಾಸಣೆ ಯಂತ್ರವನ್ನು ಉದ್ಘಾಟಿಸಲಿದ್ದಾರೆ. ಎಟಿಎಂನ್ನು ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ, ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಎಂ. ಹೆಗಡೆ ಅಧ್ಯಕ್ಷರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಸಂಜೆ ಸಮಾರೋಪದಲ್ಲಿ ಸ್ವರ್ಣವಲ್ಲೀ ಶ್ರೀಗಳು ಆಶೀರ್ವಚನ ನೀಡಲಿದ್ದು, ರಾತ್ರಿ ಬಾಳ್ಕಲ್ ಯಕ್ಷ ಬಳಗದಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.

    ಸದಸ್ಯರ ಎಲ್ಲ ಅನುಕೂಲತೆಗಳನ್ನು ಒಂದೇ ಸೂರಿನಡಿ ಪೂರೈಸುವಲ್ಲಿ ಯಶಸ್ವಿಯಾಗಿದೆ. ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸಂಘದ ವತಿಯಿಂದ ವಾಯು ಮಾಲಿನ್ಯ ತಪಾಸಣಾ ಕೇಂದ್ರ, ಎಟಿಎಂ ಕೇಂದ್ರ ಉದ್ಘಾಟನೆಗೊಳ್ಳಲಿದ್ದು, ಇವೆರಡನ್ನೂ ಆರಂಭಿಸುತ್ತಿರುವ ಗ್ರಾಮೀಣ ಭಾಗದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ನಮ್ಮದಾಗಿದೆ. | ಹೇರಂಭ ಹೆಗಡೆ, ಅಧ್ಯಕ್ಷರು ಕುಂದರಗಿ ಸೇವಾ ಸಹಕಾರಿ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts