More

    ಚಿತ್ರದುರ್ಗ ಜಿಲ್ಲೆಯಲ್ಲಿ ಶರನ್ನವರಾತ್ರಿ ಪೂಜೆ ಆರಂಭ

    ಚಿತ್ರದುರ್ಗ: ನವರಾತ್ರಿ ಮಹೋತ್ಸವ ಅ.17ರಿಂದ ಆರಂಭವಾಗಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆ ನಡೆಯಲಿದೆ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಹಬ್ಬದ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪ್ರತಿ ವರ್ಷದಂತೆ ವಿಜೃಂಭಣೆ ಇರದೇ ಸಂಪ್ರದಾಯದಂತೆ ಧಾರ್ಮಿಕ ಆಚರಣೆಗಳು ನೆರವೇರಲಿವೆ. ಶನಿವಾರ ದೀಪಾರಾಧನೆ ಮತ್ತು ಘಟಸ್ಥಾಪನೆಯ ಮೂಲಕ ಚಾಲನೆ ದೊರಕಲಿದೆ. ಪೂಜೆ, ಮಂಗಳಾರತಿ ಜತೆಗೆ ದೇವಿಗೆ ದಿನವೂ ಒಂದೊಂದು ರೀತಿಯ ಅಲಂಕಾರ ಮಾಡಲಾಗುವುದು. ಲಕ್ಷ್ಮಿ, ಸರಸ್ವತಿ, ಗಜಲಕ್ಷ್ಮಿ, ಗರುಡ ವಾಹನ, ಗಜವಾಹನ, ಹಂಸವಾಹನ, ವೃಷಭ ವಾಹನ ಮುಂತಾದ ಅಲಂಕಾರಗಳು ಕಣ್ಮನ ಸೆಳೆಯಲಿವೆ.

    ದುರ್ಗಾ ಪರಮೇಶ್ವರಿಗೆ ಪೂಜೆ

    ಹಿರಿಯೂರು ನಗರದೇವತೆ ಶ್ರೀರಾಜಾ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಶುಕ್ರವಾರ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಅ.27ರ ವರೆಗೆ ಜರುಗಲಿದೆ. ದುರ್ಗಾಪರಮೇಶ್ವರಿ, ಬೇವಿನಳ್ಳಮ್ಮ ದೇವಿ ಹಾಗೂ ಕಾಲಭೈರವೇಶ್ವರ ಸ್ವಾಮಿಗೆ ಜ್ಯೋತಿ ಪೂಜೆ, ಕಳಶ ಸ್ಥಾಪನೆ, ನಂದಾಜ್ಯೋತಿ ಬೆಳಗಿಸುವುದು, ಶ್ರೀದೇವಿ ಮಹಾತ್ಮೆ ಗ್ರಂಥ ಪಾರಾಯಣ ನಡೆಯಲಿವೆ.

    ಪ್ರತಿದಿನ ರಾತ್ರಿ 7.30ಕ್ಕೆ ಮಹಾ ಮಂಗಳಾರತಿ ನೆರವೇರಲಿದೆ. ಮಹಾ ದುರ್ಗಾಷ್ಟಮಿ ಪ್ರಯುಕ್ತ ಅ.24ರ ಬೆಳಗ್ಗೆ 8.30ರಿಂದ ಅಮ್ಮನವರ ಸನ್ನಿಧಾನದಲ್ಲಿ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ದುರ್ಗಾ ಸಪ್ತ ಸೂತ್ರ ಪಾರಾಯಣ, ರಾತ್ರಿ 7.30ಕ್ಕೆ ವಿಶೇಷ ಮಹಾ ಪೂಜೆ ಏರ್ಪಡಿಸಲಾಗಿದೆ. 25ರಂದು ಮಹಾನವಮಿ ಆಯುಧ ಪೂಜೆ, 26ರ ಸಂಜೆ 5ಕ್ಕೆ ಬನ್ನಿ ಉತ್ಸವ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts