More

    ಕಿರುಕುಳ ಅಧಿಕಾರಿಗಳನ್ನು ರಕ್ಷಿಸಿ

    ಚಿಂಚೋಳಿ: ಆಡಳಿತದಲ್ಲಿ ಹಸ್ತಕ್ಷೇಪ ಹಾಗೂ ಅಧಿಕಾರಿಗಳು ಕಿರುಕುಳ, ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ವಿವಿಧ ಸಮುದಾಯಗಳ ಸಮನ್ವಯ ಸಮಿತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಮುಖಂಡರಾದ ಈಶ್ವರ ನಾಯಕ, ಶ್ರೀಮಂತ ಕಟ್ಟಿಮನಿ, ಉಮಾ ಪಾಟೀಲ್, ಚಿತ್ರಶೇಖರ ಪಾಟೀಲ್, ಗೋಪಾಲ ಜಾಧವ್, ಅಲ್ಲಮಪ್ರಭು ಪಾಟೀಲ್, ರೇವಣಸಿದ್ದಪ್ಪ ಮೋಘಾ, ಗಿರಿರಾಜ ನಾಟೀಕಾರ, ನೆಹರು ಚಿನ್ನರಾಠೋಡ್, ಲಕ್ಷ್ಮಣ ಅವಂಟಿ ಮಾತನಾಡಿ, ತಾಲೂಕಿನಲ್ಲಿ ಕೆಲ ಸಂಘಟನೆಗಳು ಸ್ವಾರ್ಥಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದು, ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಅಮಾಯಕ ಯುವತಿಯರು, ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿರುವವರಿಗೆ ತಕ್ಕ ಶಿಕ್ಷೆ ನೀಡಬೇಕು. ಅಂತಜರ್ಾತಿ ವಿವಾಹದ ಪ್ರೋತ್ಸಾಹ ಧನ ರದ್ದು ಪಡಿಸಬೇಕು. ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪಟ್ಟಣದಲ್ಲಿ ಸಕ್ಕರೆ ಕಾಖರ್ಾನೆ ಶೀಘ್ರ ಆರಂಭಿಸಬೇಕು. ಕೋಲಿ, ಸವಿತಾ, ಹಡಪದ, ಮಡಿವಾಳ ಮತ್ತು ಕುರುಬ ಸಮಾಜವನ್ನು ಪರಿಶಿಷ್ಟ ಸಮಾಜಕ್ಕೆ ಸೇರಿಸಬೇಕು ಎಂಬುದು ಸೇರಿ ಇನ್ನಿತರ 28 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಅರುಣಕುಮಾರ ಕುಲಕಣರ್ಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ಪ್ರತಿಭಟನೆಗಳು ಕೆಲ ವ್ಯಾಪಾರಿಗಳು ಸಾಥ್
    ವಿವಿಧ ಸಮುದಾಯಗಳ ಸಮನ್ವಯ ಸಮಿತಿಯಿಂದ ಆಯೋಜಿಸಿದ ಬೃಹತ್ ಪ್ರಮಾಣದ ಪ್ರತಿಭಟನೆಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹೋರಾಟ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts