More

    ಕಿಡಿಗೇಡಿಗಳಿಂದ ಹಿಪ್ಪು ನೇರಳೆ ತೋಟಕ್ಕೆ ವಿಷ

    ಕ್ಯಾಲನೂರು : ಕೋಲಾರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಮಂಗಳವಾರ ಕೆಲ ಕೀಡಿಗೇಡಿಗಳು ಗ್ರಾಮದಲ್ಲಿನ ಕೆಲ ಹಿಪ್ಪು ನೇರಳೆ ತೋಟಗಳಿಗೆ ವಿಷದ ಔಷಧ ಹಾಕಿ ವಿಕೃತಿ ಮೆರೆದಿದ್ದಾರೆ.
    ಗ್ರಾಮದ ಸೀತಾರಾಮ, ಮಂಜುನಾಥ್, ಶಿವಾನಂದ, ರಮೇಶ್, ನಾಗರಾಜ್ ಮತ್ತು ಎಂ.ರಮೇಶ್ ಅವರ ರೇಷ್ಮೆ ತೋಟಗಳಿಗೆ ವಿಷ ಸಿಂಪಡಿಸಿರುವ ಪರಿಣಾಮ ರೇಷ್ಮೆ ಹುಳುಗಳು ಸೊಪ್ಪು ತಿಂದು ಸಾವನ್ನಪ್ಪಿವೆ. ಹತ್ತು ದಿನಗಳಲ್ಲಿ ಗೂಡು ಕಟ್ಟುವ ಹಂತದಲ್ಲಿದ್ದ ರೇಷ್ಮೆ ಹುಳುಗಳು ಈ ರೀತಿ ಸಾವನ್ನಪ್ಪಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
    ರೇಷ್ಮೆ ಇಲಾಖೆ ಅಧಿಕಾರಿಗಳಾದ ಚೆಂದ್ರಶೀಖರ್‌ಗೌಡ, ಕೃಷ್ಣಮೂರ್ತಿ ರೇಷ್ಮೆ ತೋಟಕ್ಕೆ ಮತ್ತು ಹುಳು ಸಾಕಾಣಿಕೆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪೊಲೀಸರು ಮತ್ತು ರೇಷ್ಮೆ ಇಲಾಖೆ ಆಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ವಿಷದ ಔಷಧ ಸಿಂಪಡಣೆ ಮಾಡಿರುವ ಹಿಪ್ಪು ನೇರಳೆ ಸೊಪ್ಪನ್ನು ತಿಂದು 800 ರೇಷ್ಮೆ ಮೊಟ್ಟೆಗಳು ಮೃತಪಟ್ಟಿವೆ. ರೈತರಿಗೆ ಆಗಿರುವ ನಷ್ಟದ ಕುರಿತು ಮೇಲಧಿಕಾರಿಗೆ ಮಾಹಿತಿ ನೀಡಲಾಗುವುದು.
    ಚಂದ್ರಶೇಖರ್‌ಗೌಡ, ರೇಷ್ಮೆ ವಿಸ್ತರಣಾಧಿಕಾರಿ, ವೇಮಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts