More

    ಕಾರ್ಮಿಕ ಕಾನೂನು ಬದಲಾವಣೆ ಸಲ್ಲದು

    ಕಲಬುರಗಿ: ಕರೊನಾ ಫ್ರಂಟ್ಲೈನ್ ವಾರಿಯರ್ಸ್ ಸೇವೆ ಕಾಯಂಗೊಳಿಸಬೇಕು, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಜನತೆಗೆ ಆರು ತಿಂಗಳು ಮಾಸಿಕ 7500 ರೂ. ನೇರ ನಗದು ವರ್ಗಾವಣೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಯೋಜನಾ ನೌಕರರಿಗೆ ಕರೊನಾ ಕೆಲಸದ ಪ್ರೋತ್ಸಾಹಧನ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ನಗರಗಳಿಗೆ ವಿಸ್ತರಿಸಿ ವೇತನದೊಂದಿಗೆ ಕೆಲಸ ಕೊಡಬೇಕು, ಎಲ್ಲ ಕಾರ್ಮಿಕರಿಗೆ ಕನಿಷ್ಠ ಆರು ತಿಂಗಳು ಪಡಿತರ ಒದಗಿಸಬೇಕು, ಕೋವಿಡ್-19 ಅನ್ನು ವೈದ್ಯಕೀಯ ತುರ್ತು ಸ್ಥಿತಿ ಎಂದು ಪರಿಗಣಿಸಿ, ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು
    ವಿದ್ಯುತ್ ತಿದ್ದುಪಡಿ ಮಸೂದೆ 2020 ಕೈಬಿಡಬೇಕು, ಕಾರ್ಮಿಕ ಕಾನೂನು ಬದಲಾವಣೆ ಮಾಡಬಾರದು, ಕಾರ್ಪೋರೇಟ್-ಭೂಮಾಲಿಕರಿಗೆ ಅನನುಕೂಲವಾದ ಕೃಷಿ ಆರ್ಥಿಕತೆಯಲ್ಲಿ ರಚನಾತ್ಮಕ ಬದಲಾವಣೆ ಕೈಬಿಡಬೇಕು.ಕರೊನಾ ತಡೆಗಟ್ಟಲು ಟೆಸ್ಟ್ ಕಿಟ್ಗಳನ್ನು ಒದಗಿಸಬೇಕು, ರೋಗಿಗಳ ಊಟ, ವಸತಿ ಉತ್ತಮವಾಗಿರಬೇಕು. ಭ್ರಷ್ಟಾಚಾರ ತಡೆಗಟ್ಟಬೇಕು, ಚಿಕಿತ್ಸೆ ಫಲಕಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
    ಪ್ರಧಾನಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಮಾರುತಿ ಮಾನ್ಪಡೆ, ಪ್ರಭುದೇವ ಯಳಸಂಗಿ, ಅಶೋಕ ಘೂಳಿ, ವಿ.ಜಿ.ದೇಸಾಯಿ, ವಾಮನರಾವ ಕಟ್ಟಿ, ಎಚ.ಎಸ್.ಪದಕಿ, ಶಾಂತಾ ಘಮಟಿ, ಎಸ್.ಎಂ.ಶರ್ಮಾ , ಗೌರಮ್ಮ ಪಾಟೀಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts