More

    ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಸಿದ್ಧ; ಈಗಾಗಲೇ ಹಲವು ಯೋಜನೆ ಜಾರಿ: ಶಾಸಕ ಹರತಾಳು ಹಾಲಪ್ಪ

    ಹೊಸನಗರ: ಬದುಕಿನ ಬಡತನಕ್ಕಿಂತ ಮನಸ್ಸಿನಲ್ಲಿರುವ ಬಡತನದಿಂದ ಹೊರಬನ್ನಿ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಪಟ್ಟಣದಲ್ಲಿ ಶನಿವಾರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಫಲಾನುಭವಿ ಕೂಲಿ ಕಾರ್ಮಿಕರ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೋಂದಾಯಿತ ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಯ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಎಂದಿಗೂ ಸಿದ್ಧವಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಇಂದು ತಾಲೂಕಿನ 600 ಫಲಾನುಭವಿ ಕಾರ್ಮಿಕರಿಗೆ ಮೇಶನ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್, ಮಕ್ಕಳಿಗೆ ಶಾಲಾ ಕಿಟ್ ಹಾಗೂ ಮಹಿಳೆಯರಿಗೆ ನ್ಯೂಟ್ರಿಷಿಯನ್ ಕಿಟ್ ವಿತರಿಸಲಾಗುತ್ತಿದೆ ಎಂದರು.
    ಅಷ್ಟೇ ಅಲ್ಲದೆ ಸರ್ಕಾರ ಕಾರ್ಮಿಕ ಕುಟುಂಬಗಳಿಗೆ ಪಿಂಚಣಿ ಸೌಲಭ್ಯ, ಕಾರ್ಮಿಕ ಚಿಕಿತ್ಸೆ ಭಾಗ್ಯ, ಮದುವೆ ಸಹಾಯಧನ ಹೀಗೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಇದರ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಕಾರ್ಮಿಕರು ವಿಫಲರಾಗುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಕಾರಣ ಕಾರ್ಮಿಕರಿಗೆ ಮಾಹಿತಿಯ ಕೊರತೆ ಎಂದರು.
    ಸಾಗರ, ಹೊಸನಗರ ಸೇರಿ 20,000ಕ್ಕೂ ಅಧಿಕ ಕೂಲಿ ಕಾರ್ಮಿಕರಿದ್ದು ಇವರೆಲ್ಲರಿಗೆ ಒಬ್ಬರೇ ಅಧಿಕಾರಿಯಾಗಿದ್ದಾರೆ. ಇದು ಸಹ ನಿಜವಾದ ಫಲಾನುಭವಿಗಳಿಗೆ ಸೂಕ್ತ ಸೌಲಭ್ಯವನ್ನು ನೀಡಲು ಸಾಧ್ಯವಾಗದಿರಲು ಕಾರಣ. ಮುಂಬರುವ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಎಲ್ಲ ಕೂಲಿ ಕಾರ್ಮಿಕರಿಗೆ ಸರ್ಕಾರದ ಅಗತ್ಯ ಸೌಲಭ್ಯವನ್ನು ತಲುಪಿಸುವ ಕಾರ್ಯ ನಾವು ಮಾಡುತ್ತೇವೆ. ಆದರೆ ಮೊದಲು ಕೂಲಿ ಕಾರ್ಮಿಕರು ಮನಸ್ಸಿನಲ್ಲಿರುವ ಬಡತನವನ್ನು ಹೋಗಲಾಡಿಸಿಕೊಳ್ಳಬೇಕು. ಈಗಾಗಲೇ ಕೂಲಿ ಕಾರ್ಮಿಕರ ಪುರುಷರ ಸಂಬಳ 500 ಹಾಗೂ ಮಹಿಳೆಯರಿಗೆ 250 ರಿಂದ 300 ರೂ. ನೀಡಲಾಗುತ್ತಿದೆ. ಅಲ್ಲದೆ ನಿರಂತರವಾಗಿ ಕೆಲಸಗಳು ಅವರಿಗೆ ದೊರೆಯುತ್ತಿದೆ. ಆದರೂ ನಾವು ಬಡವರು ಎಂಬ ಕೀಳರಿಮೆ ಅವರಲ್ಲಿದೆ. ಆಸ್ತಿ, ಮನೆ ಮಾಡುವ ಕನಸನ್ನು ಬಿಡಿ. ಅದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗದ ಮಾತು. ದುಡಿಯುವ ಹಣದಿಂದ ಪೌಷ್ಟಿಕವಾದ ಆಹಾರವನ್ನು ಸೇವಿಸಿ ಸದೃಢರಾಗಿರಿ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts