More

    ಕಾರ್ನರ್​ ಸೈಟ್​ 80 ಲಕ್ಷಕ್ಕೆ ಮಾರಾಟ!

    ಬೆಳಗಾವಿ: ಮಹಾನಗರ ಪಾಲಿಕೆಯ ಸೈಟ್​ಗಳ ಮೂಲೆ (ಕಾರ್ನರ್​ ಸೈಟ್​) ಮತ್ತು ಬಿಡಿ ನಿವೇಶನಗಳ ಮಾರಾಟದಿಂದ ಪಾಲಿಕೆಗೆ ಭರ್ಜರಿ ಆದಾಯ ಹರಿದು ಬಂದಿದ್ದು, ಮಾಳಮಾರುತಿ ಬಡಾವಣೆಯ ಸೆಕ್ಟರ್​&1 ಮೂಲೆ ನಿವೇಶನವೊಂದು ಬರೊಬ್ಬರಿ 80 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

    ಹೌದು. ಮಹಾನಗರ ಪಾಲಿಕೆಯ ಆದಾಯ ವೃದ್ಧಿಗಾಗಿ ರಾಜ್ಯ ಸರ್ಕಾರ ಮಾಳಮಾರುತಿ ಬಡಾವಣೆಯ ಸೆಕ್ಟರ್​&1 ರಾಮನಗರ ವ್ಯಾಪ್ತಿಯ ಮೂಲೆ ಮತ್ತು ಬಿಡಿ ಸೇರಿ ಒಟ್ಟು 37 ನಿವೇಶನ ಮಾರಾಟ ಮಾಡಲು ಅನುಮತಿ ನೀಡಿತ್ತು. ಇದೀಗ ಈ ನಿವೇಶನಗಳ ಮಾರಾಟದಿಂದಾಗಿ ಪಾಲಿಕೆಗೆ 10.50 ಕೋಟಿ ರೂ. ಆದಾಯ ಬಂದಿದೆ.

    ಮಹಾನಗರ ಪಾಲಿಕೆ 37 ನಿವೇಶನಗಳ ಮಾರಾಟಕ್ಕಾಗಿ ಆ.5ರಿಂದ 28ರವರೆಗೆ ಹರಾಜು ಮೂಲಕ ಆರಂಭಿಸಿದ್ದ ಮಾರಾಟ ಪ್ರಕ್ರಿಯೆ ವೇಳೆ 150ಕ್ಕೂ ಅಧಿಕ ಜನರು ನಿವೇಶನ ಖರೀದಿಗಾಗಿ ಅರ್ಜಿ ಸಲ್ಲಿಸಿದ್ದರು. ಒಂದೊಂದು ಮೂಲೆ ನಿವೇಶನಕ್ಕೆ ಸುಮಾರು 20ರವರೆಗೆ ಅರ್ಜಿಗಳು ಬಂದಿದ್ದವು. ಬಹುತೇಕ ಸೈಟ್​ಗಳು 45ರಿಂದ 50 ಲಕ್ಷ ರೂ. ಮಾರಾಟವಾಗಿದ್ದರೆ, ಮೂಲೆ ನಿವೇಶನವೊಂದು ಬರೊಬ್ಬರಿ 80 ಲಕ್ಷ ರೂ.ಗೆ ಮಾರಾಟವಾಗಿದೆ. ಇದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ದರಕ್ಕೆ ಮಾರಾಟವಾಗಿರುವ ಸೈಟ್​ ಎನ್ನಲಾಗಿದೆ.

    ತನ್ನ ನಿವೇಶನಗಳನ್ನು ಮಾರಾಟ ಮಾಡಲು ಪಾಲಿಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಮಾಳಮಾರುತಿ ಬಡಾವಣೆಯ ಸೆಕ್ಟರ್​&1 ರಾಮನಗರದಲ್ಲಿನ 37 ನಿವೇಶನ ಮಾರಾಟಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಮಾತ್ರ ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಕಾರ್ನರ್​ ಸೈಟ್​ಗಳಿಗೆ ಹೆಚ್ಚಿನ ಅರ್ಜಿಗಳು ಬಂದಿದ್ದವು. ಬಿಡ್​ನಲ್ಲಿ ಭಾಗವಹಿಸಿದ್ದರೂ ಪ್ರತಿ ನಿವೇಶನಕ್ಕೆ ಮುಂಗಡವಾಗಿ 50 ಸಾವಿರ ರೂ. ಪಾವತಿಸಿದ್ದರು. ಯಶಸ್ವಿ ಬಿಡ್​ದಾರರು ಶೇ.25ರಷ್ಟು ಹಣವನ್ನು ಇ& ಹರಾಜು ಪ್ರಕ್ರಿಯೆ ಮುಕ್ತಾಯಗೊಂಡು 72 ಗಂಟೆ ಒಳಗಾಗಿ ಹಣ ಪಾವತಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಮೂಲೆ ಮತ್ತು ಬಿಡಿ ನಿವೇಶನಗಳ ಮಾರಾಟದಿಂದ ಪಾಲಿಕೆಗೆ 10.50 ಕೋಟಿ ರೂ. ಆದಾಯ ಬಂದಿದೆ. ನಿವೇಶನ ಹರಾಜಿನಲ್ಲಿ ಒಂದು ಸೈಟ್​ 80 ಲಕ್ಷ ರೂ.ಗೆ ಮಾರಾಟವಾಗಿದೆ. ಇದು ಸೈಟ್​ಗಳ ಹರಾಜಿನಲ್ಲಿ ಹೆಚ್ಚಿನ ದರವಾಗಿದ್ದು, ಈ ಹಿಂದೆ ಯಾವುದೇ ನಿವೇಶನ ಇಷ್ಟೊಂದು ದರಕ್ಕೆ ಹರಾಜು ಆಗಿರಲಿಲ್ಲ.
    | ಡಾ. ರುದ್ರೇಶ ಘಾಳಿ, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts